ರೆನೊ ಫ್ಲೂಯೆನ್ಸ್ ಇ4 ಡಿ: ಡೀಸೆಲ್ ಕಾರಿಗೆ ಕ್ಷಣಗಣನೆ
ರೆನೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಡೀಸೆಲ್ ಚಾಲೀತ ನೂತನ ಫ್ಲೂಯೆನ್ಸ್ ಇ4ಡಿ ಕಾರನ್ನು ಹೊರತರಲು ರೆಡಿಯಾಗಿದೆ. ನೂತನ ಫ್ಲೂಯೆನ್ಸ್ ನವದೆಹಲಿಯ ಹೋಟೆಲ್ ಲಲಿತ್ ಸಭಾಂಗಣದಲ್ಲಿ ಏಪ್ರಿಲ್ 3ರಂದು ಅನಾವರಣಗೊಳ್ಳಲಿದೆ.
ನೂತನ ಫ್ಲೂಯೆನ್ಸ್ ಇ4 ಡಿ ಹತ್ತು ಹಲವು ವಿಶೇಷ ಫೀಚರುಗಳೊಂದಿಗೆ ಬರಲಿದೆ. ಆದರೆ ಎಂಜಿನ್ ಮಾತ್ರ ಹಳೆಯ 2 ಸಿಆರ್‌ಡಿಐ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದೇ ಎಂಜಿನ್ ಈ ವರ್ಷದ ಅಂತ್ಯದಲ್ಲಿ ಆಗಮಿಸುವ ರೆನೊ ಡಸ್ಟರ್ ಕಾರಿನಲ್ಲಿ ಇರಲಿದೆ.
ಹೊಸ ಫ್ಲೂಯೆನ್ಸ್ ಇ4 ಡಿ ಕಾರು ಸಿವಿಟಿ 6 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ. ಪೆಟ್ರೋಲ್ ಆವೃತ್ತಿ ಆಟೋಮ್ಯಾಟಿಕ್ ಆಯ್ಕೆಯಲ್ಲೂ ದೊರಕುತ್ತದೆ. ಈ ಕಾರಿನ ಇಂಟಿರಿಯರ್ ಮತ್ತು ಎಕ್ಸ್‌ಟೀರಿಯರ್ ಆಕರ್ಷಕವಾಗಿದೆ.
ರೆನೊ ಫ್ಲೂಯೆನ್ಸ್ ಇ4ಡಿ ಡೀಸೆಲ್ ಕಾರಿನಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳೂ ಇರಲಿವೆ. ಅಂದರೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಏರ್ ಬ್ಯಾಗ್ ಗಳು ಇರಲಿವೆ. ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೊಗ್ರಾಮ್ ಮುಂತಾದ ಸ್ಟಾಂಡರ್ಡ್ ಸೇಫ್ಟಿ ಫೀಚರುಗಳು ಇರಲಿವೆ.
ಈ ಕಾರಿನ ದರ ಮತ್ತು ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನಿಮ್ಮ ಮುಂದಿರಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









