ಭಾರತಕ್ಕೆ ದಾಪುಗಾಲಿಟ್ಟ 2014 ರೆನೊ ಫ್ಲೂಯೆನ್ಸ್
ರಾಷ್ಟ್ರ ರಾಜಧಾನಿಯಲ್ಲಿ ನಡೆದ 12ನೇ ಆಟೋ ಎಕ್ಸ್ ಪೋದಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, 2014 ಫ್ಲೂಯೆನ್ಸ್ ಕಾರನ್ನು ಲಾಂಚ್ ಮಾಡಿದೆ.
ಫೇಸ್‌ಲಿಫ್ಟ್ ವರ್ಷನ್ 2014 ರೆನೊ ಫ್ಲೂಯೆನ್ಸ್ ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಿರಲಿದೆ. ಅವುಗಳೆಂದರೆ ಇ2 ಹಾಗೂ ಇ4. ಇವೆರಡು ಆವೃತ್ತಿಗಳ ಎಕ್ಸ್ ಶೋ ರೂಂ ದರ ಅನುಕ್ರಮವಾಗಿ 14.22 ಹಾಗೂ 15.81 ಲಕ್ಷ ರು.ಗಳಾಗಿರಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು ಹಿಂದಿನ ಆವೃತ್ತಿಗೆ ಸಮಾನವಾದ 1.4 ಲೀಟರ್ ಕೆ9ಕೆ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 110 ಪಿಎಸ್ ಪವರ್ (240 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 6 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.
ರೆನೊ ವಿನ್ಯಾಸದಿಂದ ಸ್ಫೂರ್ತಿ ಪಡೆದು ಹೊಸ ಗ್ರಿಲ್ ರಚಿಸಲಾಗಿದೆ. ಇದು ರೆನೊ ಫ್ಲೂಯೆನ್ಸ್‌ಗೆ ಸ್ಫೋರ್ಟಿ ಲುಕ್ ಪ್ರದಾನ ಮಾಡುತ್ತದೆ. ಹಾಗೆಯೇ ಡೇ ಟೈಮ್ ರನ್ನಿಂಗ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ಆರ್16 ಕ್ಯಾಲೆಡೊ ಅಲಾಯ್ ವೀಲ್ಸ್‌ಗಳು ಹೊಂದಿರಲಿದೆ. ಇನ್ನುಳಿದಂತೆ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಸೌಲಭ್ಯವಿರಲಿದೆ.



Click it and Unblock the Notifications








