2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್; ಬೆಲೆ ಎಷ್ಟು?

Written By:

2014 ರೆನೊ ಫ್ಲೂಯೆನ್ಸ್ ಫೇಸ್‌ಲಿಫ್ಟ್ ವರ್ಷನ್ ದೇಶದಲ್ಲಿ ಭರ್ಜರಿ ಲಾಂಚ್ ಕಂಡಿದೆ. ಇದರ ಆರಂಭಿಕ ದರ 13.99 ಲಕ್ಷ ರು.ಗಳಾಗಿರಲಿದೆ. ಈ ಮೊದಲು ರೆನೊ ಫ್ಲೂಯೆನ್ಸ್ ಫೇಸ್‌ಲಿಫ್ಟ್ ಮಾದರಿಯನ್ನು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಮೊದಲ ನೋಟದಲ್ಲಿ ನೂತನ ಫ್ಲೂಯೆನ್ಸ್ ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಕಾಯ್ದುಕೊಂಡಿದೆ. ಇದು ನೂತನ ಫ್ರಂಟ್ ಗ್ರಿಲ್ ವಿನ್ಯಾಸದ ಜತೆಗೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಹೊಸತಾದ ಫ್ರಂಟ್ ಗ್ರಿಲ್ ವಿನ್ಯಾಸದಲ್ಲಿ ರೆನೊ ಲಾಂಛನ ಎದ್ದು ಕಾಣಿಸುತ್ತಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಇನ್ನಷ್ಟು ಆಕರ್ಷಣೆ ಪ್ರದಾನ ಮಾಡುತ್ತಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಒಟ್ಟಾರೆಯಾಗಿ ಹೊರಂಗಣ ವಿನ್ಯಾಸ ಆಕರ್ಷಕವಾಗಿದೆ. ಅಲ್ಲದೆ 16 ಇಂಚು ಅಲಾಯ್ ವೀಲ್ ಕೂಡಾ ಇರಲಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಕಾರಿನೊಳಗೂ ಐಷಾರಾಮಿ ಸೌಲಭ್ಯಗಳು ಲಭ್ಯವಾಗಲಿದೆ. ಇದು ನೂತನ 3ಡಿ ಆಡಿಯೋ ಸಿಸ್ಟಂ ಜತೆಗೆ ಎಂಟು ಸ್ಪೀಕರ್, ಸ್ಟೀರಿಂಗ್ ವೀಲ್‌ನಲ್ಲಿ ಆಡಿಯೋ ಕಂಟ್ರೋಲ್ ಹಾಗೂ ಉನ್ನತ ದರ್ಜೆಯ ಲೆಥರ್ ಫೀಚರ್‌ಗಳು ಪಡೆದುಕೊಳ್ಳಲಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಸ್ಮಾರ್ಟ್ ಆಸ್ಸೆಸ್ ಕಾರ್ಡ್ ಜತೆಗೆ ರಿಮೋಟ್ ಕಂಟ್ರೋಲ್ ಲಾಕಿಂಗ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಜತೆಗೆ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಮತ್ತು ವೈಪರ್‌ಗಳು ಇತರ ವಿಶಿಷ್ಟತೆಗಳಾಗಿವೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಫ್ರಂಟ್ ಆಂಡ್ ಸೈಡ್ ಏರ್ ಬ್ಯಾಗ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ) ಮತ್ತು ಬ್ರೇಕ್ ಅಸಿಸ್ಟ್ ಕೂಡಾ ಹೊಂದಿರಲಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.5 ಲೀಟರ್ ಕೆ9ಕೆ ಡೀಸೆಲ್ ಯುನಿಟ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಭಾರತ ವಾಹನ ಸಂಸ್ಥೆಯ ಮಾನ್ಯತೆ ಪ್ರಕಾರ ಪ್ರತಿ ಲೀಟರ್‌ಗೆ 20.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

2014 ರೆನೊ ಫ್ಲೂಯೆನ್ಸ್ ದೇಶದಲ್ಲಿ ಲಾಂಚ್

ಇ2 ಮತ್ತು ಇ4ಗಳೆಂಬ ಒಟ್ಟು ಎರಡು ವೆರಿಯಂಟ್‌ಗಳಲ್ಲಿ ರೆನೊ ಫ್ಲೂಯೆನ್ಸ್ ಲಭ್ಯವಿರಲಿದೆ. ಇದು ಅನುಕ್ರಮವಾಗಿ 13.99 ಹಾಗೂ 15.49 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

English summary
The 2014 facelifted Renault Fluence has been launched at an attractive starting price of INR 13.99 lakhs.
Story first published: Wednesday, March 26, 2014, 16:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark