ಹೊಸ ಫಿಯೆಟ್ ಲಿನಿಯಾ ಮತ್ತು ಪುಂಟೊಗೆ ಜೈಹೋ

New versions of Linea and Punto launched
ನವದೆಹಲಿ, ಜ 04: ಇಟಲಿಯ ಪ್ರಶಿದ್ಧ ಕಾರು ತಯಾರಿಕಾ ಕಂಪನಿ ಫಿಯೆಟ್, ದೇಶದ ಕಾರು ಮಾರುಕಟ್ಟೆಗೆ ನೂತನ ಲಿನಿಯಾ ಮತ್ತು ಪುಂಟೊ ಆವೃತ್ತಿಗಳನ್ನು ಪರಿಚಯಿಸಿದೆ. ಇವೆರಡು ಕಾರುಗಳು ನೂತನ ಫೀಚರುಗಳು ಮತ್ತು ತಂತ್ರಜ್ಞಾನಗಳಿಂದ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ನೂತನ ಲಿನಿಯಾ ಮತ್ತು ಪುಂಟೊ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತವೆ. ಇದರಲ್ಲಿ ಲಿನಿಯಾ ಸೆಡಾನ್ ಕಾರಿನ ದರ ಸುಮಾರು 4.81 ಲಕ್ಷ ರು.ನಿಂದ 6.71 ಲಕ್ಷ ರು.ವರೆಗಿದೆ. ಪುಂಟೊ ನೂತನ ಆವೃತ್ತಿ ದರ 6.83 ಲಕ್ಷ ರು.ನಿಂದ 9.18 ಲಕ್ಷ ರು. ಇದೆ. ಇದು ದೆಹಲಿ ಎಕ್ಸ್ ಶೋರೂಂ ದರ.

"ಗ್ರಾಹಕರ ಬೇಡಿಕೆಗೆ ತಕ್ಕಂತೆ ನೂತನ ಆವೃತ್ತಿಗಳನ್ನು ಹೊರತರಲಾಗಿದೆ. ಈ ಆವೃತ್ತಿಗಳು ಹೆಚ್ಚು ಆರಾಮದಾಯಕತೆ ಮತ್ತು ಹೆಚ್ಚುವರಿ ತಾಂತ್ರಿಕತೆ ಹೊಂದಿವೆ" ಎಂದು ಫಿಯೆಟ್ ಇಂಡಿಯಾ ಆಟೋಮೊಬೈಲ್ಸ್ ಅಧ್ಯಕ್ಷರಾದ ರಾಜೀವ್ ಕಪೂರ್ ಹೇಳಿದ್ದಾರೆ.

ಇವುಗಳ ಸ್ಪೋರ್ಟ್ ವೀಲ್ ಬೇಸ್ ವಿಸ್ತರಿಸಲಾಗಿದ್ದು, ಅತ್ಯುತ್ತಮ ಗ್ರೌಂಡ್ ಕ್ಲೀಯರೆನ್ಸ್ ನೀಡುತ್ತದೆ. ನೂತನ ಲಿನಿಯಾ ಕಾರಿನಲ್ಲಿ ಮಳೆ ಸೆನ್ಸಾರ್ ವೈಪರ್, ಅಭಿವೃದ್ಧಿಗೊಳಿಸಿರುವ ನೂತನ ಏರ್ ಕಂಡಿಷನರ್ ಮತ್ತು ಆಟೋಮ್ಯಾಟಿಕ್ ಹೆಡ್ ಲೈಟ್ಸ್ ಮುಂತಾದ ಫೀಚರುಗಳಿವೆ.

ಕಂಪನಿಯು ಫಿಯೆಟ್ ಕೆಫೆ ಮೂಲಕ ಸುಮಾರು 22 ಸ್ಟಾಂಡ್ ಅಲೋನ್ ಕಾರ್ ಶೋರೂಂಗಳನ್ನು ತೆರೆಯುವ ಯೋಜನೆಯನ್ನೂ ಹೊಂದಿದೆ. ಇವು ಡೀಲರ್ ನೆಟ್ ವರ್ಕ್ ಗಳಂತೆ ಕಾರ್ಯನಿರ್ವಹಿಸಲಿವೆ. ಇದರಲ್ಲಿ ಕೆಲವು ಶೋರೂಂಗಳು ಫಿಯೆಟ್ ಕಾರುಗಳ ವರ್ಕ್ ಶಾಪ್ ಗಳಾಗಿಯೂ ಕಾರ್ಯನಿರ್ವಹಿಸಲಿವೆ ಎಂದು ಕಪೂರ್ ಹೇಳಿದ್ದಾರೆ.

ಫಿಯೆಟ್ ಗ್ರೂಪ್ ಮತ್ತು ಟಾಟಾ ಮೋಟರ್ಸ್ ಜಂಟಿ ಉದ್ಯಮ ಕಂಪನಿಗಳೆರಡು ಜಂಟಿಉದ್ಯಮ ಒಪ್ಪಂದದ ಪ್ರಕಾರ ಮಾರುಕಟ್ಟೆ ಮತ್ತು ಸೇವಾ ಸ್ವತ್ತು ಹಂಚಿಕೆ ಮಾಡಲಿವೆ.

More from DriveSpark

Article Published On: Wednesday, January 4, 2012, 10:17 [IST]
English summary
Fiat launched the new versions of its sedan Linea and hatchback Punto. Newsedan Linea priced between Rs.4.81 lakh to Rs.6.71 lakh. New hatchback Punto Priced betweenRs.6.83 lakh to Rs. 9.18 lakh respe ctively (ex-showroom Delhi). Both cars available in petrol and diesel variants,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+