ರಾಜ್ಯದ ರಸ್ತೆಗೆ ನಿಸಾನ್ ಇವಾಲಿಯಾ ಆಗಮನ, ದರ?

ಬೆಂಗಳೂರು, ಸೆ 27: ಇಲ್ಲಿನ ಲಲಿತ್ ಅಶೋಕ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುಂದರ ಕಾರ್ಯಕ್ರಮವೊಂದರಲ್ಲಿ ನೂತನ ಎಂಯುವಿ "ಇವಾಲಿಯಾ'ವನ್ನು ನಿಸಾನ್ ಮೋಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ರಾಜ್ಯದ ಕಾರು ಮಾರುಕಟ್ಟೆಗೆ ಪರಿಚಯಿಸಿದೆ.

ಬೆಂಗಳೂರು ಎಕ್ಸ್ ಶೋರೂಂ ದರ
ಇವಾಲಿಯಾ ಎಕ್ಸ್ಇ: 8,64,093 ರು.
ಇವಾಲಿಯಾ ಎಕ್ಸ್ಇ ಪ್ಲಸ್: 9,07,859 ರು.
ಇವಾಲಿಯಾ ಎಕ್ಸ್ಎಲ್: 9,65,871 ರು.

ಆಕರ್ಷಕವಾದ ಹಲವು ಸೌಲಭ್ಯಗಳನ್ನು ಹೊಂದಿರುವ ಇವಾಲಿಯಾ ನಗರ ಪ್ರದೇಶದಲ್ಲಿ ಪ್ರಯಾಣದಲ್ಲಿ ಹೊಸ ಅನುಭವ ನೀಡಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಹೆಚ್ಚಿನ ಸ್ಥಳಾವಕಾಶ, ಚಾಲನಾ ಅನುಭವ ಮತ್ತು ಇಂಧನ ಕ್ಷಮತೆ ಹೊಂದಿದೆ.

ನಿಸಾನ್ ಚೆನ್ನೈ ಘಟಕದಲ್ಲಿ ಉತ್ಪಾದನೆಯಾದ ನೂತನ ಇವಾಲಿಯಾ ಕಾರು ನಿಸಾನ್ ಮೈಕ್ರಾ ಮತ್ತು ಸನ್ನಿ ಸಾಲಿಗೆ ನೂತನ ಸೇರ್ಪಡೆಯಾಗಿದೆ. ವಿಶೇಷವೆಂದರೆ ಕಂಪನಿಯು ಮೂರು ವರ್ಷಗಳ ಅವಧಿಯ ಮೂರು ವಿಧದ ಕಾರುಗಳನ್ನು ಈ ಘಟಕದಲ್ಲಿ ಉತ್ಪಾದಿಸಿತ್ತು.

ಇವಾಲಿಯಾ ಕಾರು ಸ್ಲೈಡರ್ ಅಥವಾ ಮಾರುತಿ ಆಮ್ನಿಯಲ್ಲಿರುವಂತಹ ಸ್ಲೈಡರ್ ಬಾಗಿಲು ಹೊಂದಿದೆ. ಇದು 1.5 ಲೀಟರಿನ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇಂಟರ್ ಕೂಲರ್ ಮತ್ತು 5 ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ. ಎಬಿಎಸ್ ಮತ್ತು ಇಬಿಡಿ, 5.2 ರೇಡಿಯಸ್ ತಿರುವು ಸೌಲಭ್ಯ, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಕಲರ್ ಮಾನಿಟ್ ಸೇರಿದಂತೆ ಹಲವು ಫೀಚರುಗಳು ನೂತನ ಇವಾಲಿಯಾ ಕಾರಿನಲ್ಲಿದೆ.

ಡ್ರೈವ್ ಸ್ಪಾರ್ಕ್ ತಂಡವು ನೂತನ ನಿಸಾನ್ ಇವಾಲಿಯಾ ಕಾರನ್ನು ನಂದಿಬೆಟ್ಟದ ರಸ್ತೆಯಲ್ಲಿ ಟೆಸ್ಟ್ ಡ್ರೈವ್ ಮಾಡಿದೆ. ಟೆಸ್ಟ್ ಡ್ರೈವ್ ರಿಪೋರ್ಟ್ ಇಲ್ಲಿದೆ ಓದಿ.

More from DriveSpark

Article Published On: Thursday, September 27, 2012, 14:57 [IST]
English summary
Nissan has launched the new Evalia MPV in Bangalore with a starting price of Rs.8.64 lakhs. Here is the detailed price list of all Nissan Evalia variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+