ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

Written By:

ಭೂಮಿಯಲ್ಲಿನ ಸಕಲ ಸೌಭಾಗ್ಯಗಳನ್ನು ಭೋಗಿಸುವವನೇ ನಿಜವಾದ ಅದೃಷ್ಟಶಾಲಿ. ಅಂತದ್ದರಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸುವ ಮಾನವ ನಿರ್ಮಿತ ಕಾರುಗಳು ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಶ್ರೇಷ್ಠ ಅನುಭವ ನೀಡುತ್ತದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ಕಸ್ಟಮೈಸ್ಡ್ ಕಾರು ತಯಾರಿಸುವುದರಲ್ಲಿ ನಿಸ್ಸೀಮವಾಗಿರುವ ಡಿಸಿ ಡಿಸೈನ್, ನಿಸ್ಸಾನ್ ಇವಾಲಿಯಾ ಮಲ್ಟಿ ಪರ್ಪಸ್ ವಾಹನಕ್ಕೆ ಮನಸೊರೆಗೊಳ್ಳುವಂತಹ ವಿನ್ಯಾಸ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರು ತಮ್ಮ ಇವಾಲಿಯಾ ಕಾರಿನಲ್ಲಿ ಡಿಸಿ ಡಿಸೈನ್ ನೂತನ ಪ್ಯಾಕೇಜ್ ಪಡೆಯುವುದಾಗಿ ಹೆಚ್ಚುವರಿ 3.95 ಲಕ್ಷ ರುಪಾಯಿ ಪಾವತಿಸಬೇಕಾಗಿದೆ.

ಇನ್ನು ಲಗ್ಷುರಿ ಕಾರಿನತ್ತ ಮೊರೆ ಹೋಗುವವರು ಒಂದು ಬಾರಿ ಡಿಸಿ ಡಿಸೈನ್‌ನತ್ತ ಕಣ್ಣಾಯಿಸಿದರೆ ಒಳಿತು. ಯಾಕೆಂದರೆ ನೀವು 10ರಿಂದ 13 ಲಕ್ಷ ರುಪಾಯಿ ಆನ್ ರೋಡ್ ದರ ಪಾವತಿಸಿದರೆ ನಿಸ್ಸಾನ್ ಇವಾಲಿಯಾ ಖರೀದಿಸಬಹುದು. ಇದಕ್ಕೆ ಹೆಚ್ಚುವರಿ 4 ಲಕ್ಷ ರು. ಪಾವತಿಸಿ ಕಸ್ಟಮೈಸ್ಡ್ ಡಿಸಿ ಡಿಸೈನ್ ಟಚ್ ನೀಡಿದ್ದಲ್ಲಿ ಎಲ್ಲ ರೀತಿಯ ಐಷಾರಾಮಿ ಫೀಚರ್‌ಗಳನ್ನು ನಿಮ್ಮದಾಗಿಸಬಹುದಾಗಿದೆ. ಅಂದರೆ ದುಬಾರಿ ಕಾರುಗಳಿಗೆ ಮೊರೆ ಹೋಗುವ ಗ್ರಾಹಕರಿಗೆ ಇಂದೊಂದು ಉತ್ತಮ ಆಯ್ಕೆಯಾಗಿರಲಿದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

ಮೊದಲ ನೋಟಕ್ಕೆ ಇದು ನಿಸ್ಸಾನ್ ಇವಾಲಿಯಾ ಕಾರೇ ಎಂಬ ಗೊಂದಲವುಂಟಾಗಬಹುದು. ಯಾಕೆಂದರೆ ಕಾರಿಗೆ ಅಷ್ಟೊಂದು ಆಕರ್ಷಕ ವಿನ್ಯಾಸ ಕಲ್ಪಿಸಿಕೊಡುವುದರಲ್ಲಿ ಡಿಸಿ ಡಿಸೈನ್ ಯಶಸ್ವಿಯಾಗಿದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

ಡಿಸಿ ಡಿಸೈನ್ ಇವಾಲಿಯಾ ಪ್ಯಾಕೇಜ್‌ನಲ್ಲಿ ಹಿಂದುಗಡೆ ಫೇಸ್ ಟು ಫೇಸ್ 4 ಸೀಟ್ ಸಿಟ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ನಿಜಕ್ಕೂ ಪ್ರಯಾಣಿಕರಿಗೆ ಆರಾಮದಾಯಕ ಪಯಣದ ಅನುಭವ ನೀಡಲಿದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

ನಿಸ್ಸಾನ್ ಇವಾಲಿಯಾ ಕಾರನ್ನು ವಿಶಿಷ್ಟ ಡಿಸಿ ಡಿಸೈನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಆಂತರಿಕ ಭಾಗಗಳಲ್ಲಿ ಗುಣಮಟ್ಟದ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

ವಿನ್ಯಾಸವನ್ನೇ ತನ್ನ ತತ್ವವಾಗಿ ಬದಲಾಯಿಸಿರುವ ದಿಲೀಪ್ ಛಾಬ್ರಿಯಾ ನೇತೃತ್ವದ ಡಿಸಿ ಡಿಸೈನ್, ಸಮಕಾಲೀನ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಶ್ರೇಷ್ಠ ವಿನ್ಯಾಸ ಕಲ್ಪಿಸಿಕೊಡುವುದಲ್ಲಿ ಹೆಸರುವಾಸಿಯಾಗಿದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

ಡಿಸಿ ಡಿಸೈನ್ ಇದುವರೆಗೆ 600ಕ್ಕೂ ಹೆಚ್ಚು ವಿಶಿಷ್ಯ ವಿನ್ಯಾಸದ ಕಾರುಗಳನ್ನು ರೂಪಿಸಿದೆ. ಇದರಲ್ಲಿ ಅಂಬಾಸಿಡರ್‌ನಿಂದ ತೊಡಗಿ ದುಬಾರಿ ಸೂಪರ್ ಕಾರುಗಳು ಸೇರಿವೆ. ಆಸ್ಟನ್ ಮಾರ್ಟಿನ್, ರೆನೊ ಹಾಗೂ ಜನರಲ್ ಮೋಟಾರ್ಸ್‌ಗಳಂತಹ ಐಕಾನಿಕ್ ಕಂಪನಿಗಳ ಮಾಡೆಲ್‌ಗಳಿಗೂ ಡಿಸಿ ಡಿಸೈನ್ ವಿನ್ಯಾಸ ರೂಪಿಸಿದೆ.

ಇಲ್ಲೊಮ್ಮೆ ದಿಟ್ಟಿಸಿ ನೋಡಿ; ನಮ್ಮ ಇವಾಲಿಯಾ ಲುಕ್ಕೇ ಬೇರೆ..!

1993ರಲ್ಲಿ ಸ್ಥಾಪಿತಗೊಂಡಿರುವ ಡಿಸಿ ಡಿಸೈನ್, ಕಾನ್ಸೆಪ್ಟ್ ಕಾರು ರೂಪಿಸುವುದರಲ್ಲಿ ಹೆಸರುವಾಸಿಯಾಗಿದೆ. ಅಂದ ಹಾಗೆ ಸದ್ಯದಲ್ಲೇ ಆಗಮನವಾಗಲಿರುವ ಡಿಸಿ ಡಿಸೈನ್ ಅವಂತಿ ಸ್ಪೋರ್ಟ್ಸ್ ಕಾರನ್ನು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

English summary
Coming up...Our new Nissan Evalia Lounge package ! Super Fun..4 facing seats and a powered moon-roof..just for Rs. 3.95 Lacs
Story first published: Wednesday, October 16, 2013, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark