Just In
Don't Miss!
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿಸಿ ಅವಂತಿ ಸ್ಪೋರ್ಟ್ ಕಾರು ಮಾರಾಟದಲ್ಲಿನ ಬಹುದೊಡ್ಡ ಹಗರಣ ಬಯಲು
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ದೇಶದ ಜನಪ್ರಿಯ ಕಾರು ವಿನ್ಯಾಸ ಸಂಸ್ಥೆಯಾದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರನ್ನು ಬಂಧನ ಮಾಡಲಾಗಿತ್ತು. ದಿಲೀಪ್ ಚಾಬ್ರಿಯಾ ಬಂಧನ ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಂಬೈ ಪೊಲೀಸರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡ ಮಾಡಿಫೈ ವಾಹನಗಳನ್ನು ಮತ್ತು ಚಿತ್ರನಟರ ಕಾರವಾನ್ ವಾಹನಗಳನ್ನು ನಿರ್ಮಾಣ ಮಾಡುವಲ್ಲಿ ಸಾಕಷ್ಟು ಜನಪ್ರಿಯ ಹೊಂದಿರುವ ಡಿಸಿ ಡಿಸೈನ್ ಕಂಪನಿಯು ಕಾರು ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ. ಮುಂಬೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಡಿಸಿ ಡಿಸೈನ್ ಕಂಪನಿಯ ಐಷಾರಾಮಿ ಫೀಚರ್ಸ್‌ವುಳ್ಳ ಮಾಡಿಫೈ ಸೌಲಭ್ಯದೊಂದಿಗೆ ಸ್ಪೋರ್ಟ್ ಕಾರನ್ನು ಸಹ ಉತ್ಪಾದನೆ ಮಾಡುತ್ತಿತ್ತು.

ಕಳೆದ ಕೆಲ ವರ್ಷಗಳಿಂದ ಸ್ಪೋರ್ಟ್ ಕಾರು ಮಾದರಿಯಾದ ಡಿಸಿ ಅವಂತಿ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಡಿಸಿ ಡಿಸೈನ್ ಕಂಪನಿಯು ಕೇವಲ ಮಾಡಿಫೈ ವಾಹನಗಳನ್ನು ಸಿದ್ದಪಡಿಸಿರುವುದು ಮತ್ತು ಕಾರವಾನ್ ನಿರ್ಮಾಣ ಮಾಡುತ್ತಿದೆ.

2013ರಿಂದ 2016ರ ಅವಧಿಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಡಿಸಿ ಅವಂತಿ ಸ್ಪೋರ್ಟ್ ಕಾರನ್ನು ನಿರ್ಮಾಣ ಮಾಡುತ್ತಿದ್ದ ಡಿಸಿ ಡಿಸೈನ್ ಕಂಪನಿಯು 3 ವರ್ಷಗಳ ಅವಧಿಯಲ್ಲಿ ಸುಮಾರು 120 ಕಾರುಗಳನ್ನು ಉತ್ಪಾದನೆ ಮಾಡಿತ್ತು.

ವಿಶ್ವದ ಜನಪ್ರಿಯ ಸ್ಪೋರ್ಟ್ ಕಾರುಗಳಿಗೆ ಪೈಪೋಟಿಯಾಗಿ ರಸ್ತೆಗಿಳಿದಿದ್ದ ಡಿಸಿ ಅವಂತಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 75 ಲಕ್ಷ ಬೆಲೆ ಹೊಂದಿತ್ತು. ಪ್ರತಿ ಸ್ಪರ್ಧಿ ಕಾರುಗಳು ಸುಮಾರು ರೂ. 2.50 ಕೋಟಿಯಿಂದ ರೂ.4 ಕೋಟಿ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದ ಸಂದರ್ಭದಲ್ಲಿ ಡಿಸಿ ಅವಂತಿ ಕಾರು ಮಾದರಿಯು ರೂ. 75 ಲಕ್ಷ ಬೆಲೆಯೊಂದಿಗೆ ಭಾರತದಲ್ಲಿ ಮಾತ್ರ ವಿದೇಶಿ ಮಾರುಕಟ್ಟೆಯಲ್ಲೂ ಹಲವು ಗ್ರಾಹಕರು ಈ ಕಾರನ್ನು ಖರೀದಿಸಿದ್ದಾರೆ.

ಆದರೆ ಇತ್ತೀಚೆಗೆ ಸ್ಪೋರ್ಟ್ ಕಾರಿನ ಉತ್ಪಾದನೆಯನ್ನು ನಿಲ್ಲಿಸಿದ ಡಿಸಿ ಡಿಸೈನ್ ಕಂಪನಿಯು ಪೂರ್ಣಪ್ರಮಾಣದಲ್ಲಿ ಮಾಡಿಫೈ ಸೌಲಭ್ಯಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿತ್ತು. ಹೀಗಿರುವಾಗ ಕಳೆದ ತಿಂಗಳು ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದ ಡಿಸಿ ಅವಂತಿ ಸ್ಪೋರ್ಟ್ ಕಾರೊಂದು ಡಿಸಿ ಡಿಸೈನ್ ಕಂಪನಿಯು ಇಡೀ ವಂಚನೆ ಜಾಲವನ್ನೇ ಬಿಚ್ಚಿಟ್ಟಿದೆ.

ಮುಂಬೈನಲ್ಲಿರುವ ನಾರಿಮನ್ ಪಾಯಿಂಟ್‌ನಲ್ಲಿ ಡಿಸಿ ಅವಂತಿ ಕಾರು ಮಾದರಿಯೊಂದನ್ನು ವಶಕ್ಕೆ ಪಡೆದ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸುವಾಗ ಒಂದೇ ಚಾರ್ಸಿಸ್ ನಂಬರ್‌ನಲ್ಲಿ ಹಲವು ಕಾರುಗಳು ಮಾರಾಟಗೊಂಡಿರುವುದು ಬೆಳಕಿಗೆ ಬಂದಿದೆ.

ಜೊತೆಗೆ ಕಾರು ಖರೀದಿಗಾಗಿ ಬ್ಯಾಂಕ್ ಲೋನ್ ಪಡೆದುಕೊಳ್ಳುವಲ್ಲೂ ಭಾರೀ ಮೋಸ ನಡೆಸಿರುವ ಡಿಸಿ ಡಿಸೈನ್ ಕಂಪನಿಯು ಹೊಸ ಕಾರುಗಳನ್ನು ಮಾರಾಟ ಮಾಡುವ ಮುನ್ನು ಮೊದಲನೇ ಮಾಲೀಕರಾಗಿ ಕಂಪನಿಯ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ನಂತರ ಥರ್ಡ್ ಪಾರ್ಟಿ ಹೆಸರಿಗೆ ಕಾರು ನೋಂದಣಿ ವರ್ಗಾವಣೆ ಮಾಡುತ್ತಿತ್ತು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಈ ಮೂಲಕ ಒಂದೇ ಚಾರ್ಸಿಸ್ ನಂಬರ್‌ನಲ್ಲಿರುವ ವಿವಿಧ ಕಾರುಗಳ ಮೇಲೆ ವಿವಿಧ ಬ್ಯಾಂಕ್‌ಗಳಿಂದ ಲೋನ್ ಪಡೆದುಕೊಳ್ಳುತ್ತಿದ್ದ ಕಂಪನಿಯು ಹಲವಾರು ಫೈನಾನ್ಸ್ ಕಂಪನಿಗಳಿಗೆ ಮೋಸ ಮಾಡಿದೆ. ಇದರ ಜೊತೆಗೆ ಕಾರು ಖರೀದಿ ಮಾಡಿರುವ ಗ್ರಾಹಕರಿಗೂ ಸಂಕಷ್ಟ ತಂದಿಟ್ಟಿದೆ.

ಸದ್ಯ ಮೋಸ ಜಾಲವನ್ನು ಒಂದೊಂದಾಗಿ ಭೇದಿಸುತ್ತಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಪ್ರಾಥಮಿಕ ಹಂತದಲ್ಲೇ ವಂಚನೆ ಪ್ರಕರಣವು ಸುಮಾರು ರೂ. 40 ಕೋಟಿ ಆಗಿರಬಹುದು ಎಂಬ ಮಾಹಿತಿ ನೀಡಿದ್ದು, ಜನವರಿ 2ರ ತನಕ ದಿಲೀಪ್ ಚಾಬ್ರಿಯಾ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇಡೀ ಪ್ರಕರಣವು ಇದೀಗ ಡಿಸಿ ಅವಂತಿ ಕಾರು ಹೊಂದಿರುವ ಮಾಲೀಕರಿಗೆ ಆತಂಕ ಶುರುವಾಗಿದ್ದು, ಮುಂಬರುವ ದಿನಗಳಲ್ಲಿ ಡಿಸಿ ಅವಂತಿಗಳ ಕಾರುಗಳ ಮಾಲೀಕರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸಬಹುದಾಗಿದೆ. ಒಂದು ವೇಳೆ ಕಾರುಗಳ ನೋಂದಣಿಯಲ್ಲಿ ಮೋಸ ಕಂಡುಬಂದಲ್ಲಿ ಡಿಸಿ ಅವಂತಿ ಕಾರುಗಳನ್ನು ಸಾರಿಗೆ ಇಲಾಖೆಯು ಸೀಜ್ ಮಾಡಲಿದ್ದು, ಗ್ರಾಹಕರಲ್ಲಿ ಆತಂಕ ಶುರುವಾಗಿದೆ.