Just In
Don't Miss!
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ
ದೇಶದ ಜನಪ್ರಿಯ ಕಾರು ವಿನ್ಯಾಸ ಸಂಸ್ಥೆಯಾದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರು ವಂಚನೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದು, ಮುಂಬೈ ಪೊಲೀಸರು ದಿಲೀಪ್ ಚಾಬ್ರಿಯಾ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡ ಮಾಡಿಫೈ ವಾಹನಗಳನ್ನು ಮತ್ತು ಚಿತ್ರನಟರ ಕಾರವಾನ್ ವಾಹನಗಳನ್ನು ನಿರ್ಮಾಣ ಮಾಡುವಲ್ಲಿ ಸಾಕಷ್ಟು ಜನಪ್ರಿಯ ಹೊಂದಿರುವ ಡಿಸಿ ಡಿಸೈನ್ ಕಂಪನಿಯು ಕಾರು ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ. ಮುಂಬೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಡಿಸಿ ಡಿಸೈನ್ ಕಂಪನಿಯ ಮೇಲೆ ವಂಚನೆ ಪ್ರಕರಣವು ದಾಖಲಾಗಿದ್ದು, ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರನ್ನು ಬಂಧನ ಮಾಡಲಾಗಿದೆ.

ಡಿಸಿ ಡಿಸೈನ್ ಕಂಪನಿಯು ತನ್ನದೇ ಆದ ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸುವಲ್ಲಿ ಸಹ ತೊಡಗಿಸಿಕೊಂಡಿದ್ದು, ವಿಶ್ವ ದರ್ಜೆಯ ಕಾರುಗಳ ಗ್ರಾಹಕೀಕರಣ ಘಟಕಗಳನ್ನು ನಿರ್ವಹಿಸುತ್ತದೆ.

ಕಂಪನಿಯ ಮೇಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಡಿಸೈನ್‌ನ ಮಾಲೀಕ ದಿಲೀಪ್ ಚಾಬ್ರಿಯಾ ಅವರನ್ನು ಮುಂಬೈ ಅಪರಾಧ ತನಿಖಾ ವಿಭಾಗವು ಬಂಧನ ಮಾಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳು ದೊರೆತಿಲ್ಲ.

ಮಾಹಿತಿಗಳ ಪ್ರಕಾರ ಡಿಸಿ ಡಿಸೈನ್‌ನ ಮಾಲೀಕ ದಿಲೀಪ್ ಚಾಬ್ರಿಯಾ ಮೇಲೆ ವಂಚನೆ ಮತ್ತು ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಐಪಿಸಿ ಸೆಕ್ಷನ್ 420, 465, 467, 468, 471, 120 (ಬಿ) ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ದುಬಾರಿ ಕಾರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಾರವಾನ್ ವಾಹನಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಸಿ ಡಿಸೈನ್ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿರುವ ಸಾಧ್ಯತೆಗಳಿದ್ದು, ಈ ಹಿಂದೆಯೂ ಕೂಡಾ ಇಂತಹದ್ದೆ ಪ್ರಕರಣಗಳಿಗೆ ಸಂಬಂಧಸಿದಂತೆ ಡಿಸಿ ಡಿಸೈನ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2013ರಲ್ಲಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡಾ ಡಿಸಿ ಡಿಸೈನ್ ಕಂಪನಿಯ ಡಿಸಿ ಅವಂತಿ ಸ್ಪೋರ್ಟ್ ಕಾರ್ ವಿತರಣೆಗೆ ಸಂಬಂಧಿದಂತೆ ಕಾರು ಕಂಪನಿಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದರು.

ಇದೀಗ ಮತ್ತೊಮ್ಮೆ ಡಿಸಿ ಡಿಸೈನ್ ವಿರುದ್ಧ ವಂಚನೆ ಪ್ರಕರಣ ಕೇಳಿ ಬಂದಿರುವುದು ಡಿಸಿ ಡಿಸೈನ್ ಕಂಪನಿಯ ಜನಪ್ರಿಯತೆಗೆ ಹೊಡೆತ ನೀಡುವ ಸಾಧ್ಯತೆಗಳಿದ್ದು, ಶೀಘ್ರದಲ್ಲೇ ವಂಚನೆ ಪ್ರಕರಣದಿಂದ ದಿಲೀಪ್ ಚಾಬ್ರಿಯಾ ಅವರು ಮುಕ್ತಗೊಳ್ಳುವುದಾಗಿ ಡಿಸಿ ಡಿಸೈನ್ ಕಂಪನಿಯ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದ್ದಾರೆ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಆದರೆ ಯಾವ ಕಂಪನಿ ವಿರುದ್ದದ ಪ್ರಕರಣದಲ್ಲಿ ದಿಲೀಪ್ ಚಾಬ್ರಿಯಾ ಅವರನ್ನು ಬಂಧನ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕಾರವಾನ್ ವಾಹನಗಳ ಪೂರೈಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ ಸಾಧ್ಯತೆಗಳಿವೆ.