ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ನಿಸ್ಸಾನ್ ಇವಾಲಿಯಾ ಟಾಪ್ ಎಂಡ್ ಎಂಟ್ರಿ

Written By:

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಮಾರಾಟ ಏರಿಕೆಯನ್ನು ಗುರಿಯಿರಿಸಿಕೊಂಡಿದ್ದು, ಇದರಂತೆ ತನ್ನ ಜನಪ್ರಿಯ ಇವಾಲಿಯಾ ಮಾದರಿಯನ್ನು ಇನ್ನಷ್ಟು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ.

ಅರ್ಬನ್ ಕ್ಲಾಸ್ ಯುಟಿಲಿಟಿ ವಾಹನಗಳ ವಿಭಾಗದಲ್ಲಿ ಗುರುತಿಸಿಕೊಂಡಿರುವ ಹೊಸ ಇವಾಲಿಯಾ, ಹೊಸತಾದ ಮುಂಭಾಗದಲ್ಲಿ ಕ್ರೋಮ್ ಗ್ರಿಲ್ ಪಡೆದುಕೊಳ್ಳಲಿದೆ. ಅದೇ ರೀತಿ ಎದುರಿನ ಬಂಪರ್ ಸಂಪೂರ್ಣ ಪರಿಷ್ಕೃತಗೊಳಿಸಲಾಗಿದ್ದು, ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಹಾಗೆಯೇ ಸ್ಟೈಲಿಷ್ ಕ್ರೋಮ್‌ನಿಂದ ಫಾಗ್ ಲ್ಯಾಂಪ್ ಸುತ್ತುವರಿಯಲ್ಪಡಲಿದೆ.

To Follow DriveSpark On Facebook, Click The Like Button

ಕ್ರೋಮ್ ಪಟ್ಟಿಯೊಂದಿಗೆ ಮುಂಭಾಗದ ಬೊನೆಟ್ ಪರಿಚಯಿಸಲಾಗಿದ್ದು, ಇದು ಫ್ರಂಟ್ ಗ್ರಿಲ್‌ನೊಂದಿಗೆ ಒಗ್ಗೂಡಿದೆ. ಅದೇ ರೀತಿ ಇವಾಲಿಯಾ ಸ್ಪೆಷಲ್ ವೆರಿಯಂಟ್ ರಿಯರ್ ರೂಫ್ ಸ್ಪಾಯ್ಲರ್, ಹಿಂಭಾಗದಲ್ಲೂ ಸಮೃದ್ಧ ಕ್ರೋಮ್ ಮತ್ತು 10 ಸ್ಪೋಕ್ ಅಲಾಯ್ ವೀಲ್ ಪಡೆದುಕೊಂಡಿದೆ.

ನಿಸ್ಸಾನ್‌ನ ವಿಶಿಷ್ಟ ಶೈಲಿಯೊಂದಿಗೆ ಇವಾಲಿಯಾ ಅತ್ಯಧಿಕ ಸ್ಥಳಾವಕಾಶ ಹಾಗೂ ಹೊಂದಾಣಿಕೆಯನ್ನು ನೀಡುತ್ತದೆ. ಇದು ಅದ್ಭುತ ಚಾಲನಾ ಅನುಭವ ಮತ್ತು ಗರಿಷ್ಠ ಇಂಧನ ಕ್ಷಮತೆಯನ್ನು ಹೊಂದಿರುತ್ತದೆ. ಅಲ್ಲದೆ ಇನ್ನಷ್ಟು ಆರಾಮದಾಯಕ್ಕಾಗಿ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟು ಕೂಡಾ ಆಳವಡಿಸಲಾಗಿದ್ದು, ನಿಮ್ಮ ಚಾಲನೆಯನ್ನು ಇನ್ನಷ್ಟು ಆನಂದದಾಯಕವಾಗಿಸಲಿದೆ.

ಇನ್ನು ಸ್ಪೆಷಲ್ ವೆರಿಯಂಟ್‌ನಲ್ಲಿ ಅನುಕೂಲಕ್ಕಾಗಿ ಎರಡು ಹಾಗೂ ಮೂರನೇ ಸಾಲಿನ ರೂಫ್ ಎಸಿ ವೆಂಟ್ಸ್‌, ಡ್ಯಾಶ್‌ಬೋರ್ಡ್‌ನಲ್ಲಿ 2 ಡಿನ್ ಆಡಿಯೋ ಸಿಸ್ಟಂ ಜೊತೆ ಯುಎಸ್‌ಬಿ ಕನೆಕ್ಟಿವಿಟಿ, ರಿಯರ್ ವೈಪರ್, ರಿಯರ್ ಡಿಫಾಗರ್, ಆ್ಯಂಟಿ ಗ್ಲೇರ್ ಇಂಟರ್ನಲ್ ರಿಯರ್ ವ್ಯೂ ಮಿರರ್, ಮುಂಭಾಗದ ಸಾಲಿನಲ್ಲಿ ಸಹಾಯಕ ಗ್ರಿಪ್ ಮತ್ತು ಗ್ಲೋವ್ ಬಾಕ್ಸ್ ಲಿಡ್ ಮುಂತಾದ ವೈಶಿಷ್ಟ್ಯಗಳನ್ನು ಕಾಯ್ದುಕೊಳ್ಳಲಾಗಿದೆ. ಆದರೂ ಡ್ಯಾಶ್‌‍ಬೋರ್ಡ್‌ನಲ್ಲಿ ಕ್ಲಾಸಿ ವುಡ್ ಫಿನಿಶ್ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ಮ್ಯಾಪ್ ಲ್ಯಾಂಪ್ ಇನ್ನಷ್ಟು ಪ್ರೀಮಿಯಂ ಅನುಭವ ನೀಡಲಿದೆ.

nissan evalia

ಅಂದ ಹಾಗೆ ಹೊಸ ನಿಸ್ಸಾನ್ ವಿಶೇಷ ಮಾದರಿಯು, ಈಗಿರುವ ಟಾಪ್ ಎಂಡ್ ಇವಾಲಿಯಾ ಎಕ್ಸ್‌ವಿ (ಒ) ಮೇಲ್ಪಡೆ ಗುರುತಿಸಿಕೊಳ್ಳಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 11.61 ಲಕ್ಷ ರು.ಗಳಾಗಿರಲಿದೆ.

English summary
Nissan today introduced a new premium version of its urban-class utility vehicle, Evalia with an upmarket feel inside and out.
Story first published: Thursday, October 23, 2014, 9:50 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X