ಮಿಸ್ ಮಾಡದಿರಿ; ನಿಸ್ಸಾನ್ ಇಂಪುಲ್ ಬಾಡಿ ಕಿಟ್!
ಜಗತ್ತಿನಾದ್ಯಂತ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಾರುಗಳಿಗೆ ಉತ್ತಮ ಬೇಡಿಕೆಯಿದೆ. ಇದನ್ನೇ ಗಮನದಲ್ಲಿರಿಸಿಕೊಂಡು ಮಲೇಷ್ಯಾ ಕಾರು ಮಾರುಕಟ್ಟೆಯಲ್ಲಿ ಅಲ್ಮೆರಾ ಎಂಬುದಾಗಿ ಹೆಸರಿಸಲ್ಪಡುವ ನಿಸ್ಸಾನ್ ಸನ್ನಿ, ಇದೀಗ ವಿಶೇಷ ಇಂಪುಲ್ ಬಾಡಿ ಕಿಟ್‌ನೊಂದಿಗೆ ಆಗಮನವಾಗಿದೆ.
ಇಂಪುಲ್ ದೇಹದ ಕಿಟ್ ಮಾದರಿಯು ವರ್ಧಿತ ಆಕರ್ಷಣೆಯ ಜತೆ ಹೊಸ ಹಾಗೂ ಸ್ಟೈಲಿಷ್ ನೋಟವನ್ನು ಒದಗಿಸುತ್ತಿದೆ.

ಇತ್ತೀಚೆಗಷ್ಟೇ ಇಂಪುಲ್ ಬಾಡಿ ಕಿಟ್ ಪ್ರಮುಖ ಆಕರ್ಷಣೆಯಾಗಿರುವ ನಿಸ್ಸಾನ್ ಸನ್ನಿ ಸೆಡಾನ್ ಮಲೇಷ್ಯಾದಲ್ಲಿ ಲಾಂಚ್ ಆಗಿದ್ದು, ಶೀಘ್ರದಲ್ಲೇ ಭಾರತವನ್ನು ಪ್ರವೇಶಿಸುವುದಾಗಿ ನಿರೀಕ್ಷಿಸಲಾಗಿದೆ.

ನಿಸ್ಸಾನ್ ಅಲ್ಮೆರಾ 1.5 ಲೀಟರ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದ್ದು, ಪ್ರತಿ ಲೀಟರ್‌ಗೆ 15.9 ಕಿಲೋ ಮೀಟರ್ ಇಂಧನ ದಕ್ಷತೆ ಲಭಿಸಲಿದೆ.

ನಿಸ್ಸಾನ್ ಅಲ್ಮೆರಾ ಆರಂಭಿಕ ದರವು 11.87 ಲಕ್ಷ ರೂಪಾಯಿಗಳಿಂದ 14.19 ಲಕ್ಷ ರುಪಾಯಿಗಳ ವರೆಗೆ ಇರಲಿದೆ. ಇದರಲ್ಲಿ ತೆರಿಗೆ ಹಾಗೂ ವಿಮಾ ನೆರವು ಕೂಡಾ ಸೇರಿರಲಿದೆ.

'ಪ್ರೀಮಿಯಂ ನವಿ' ವಿಶೇಷ ಪ್ಯಾಕ್ ಆಯ್ಕೆ ಕೂಡಾ ಲಭ್ಯವಿರಲಿದ್ದು, ಟಚ್‌ಸ್ಕ್ರೀನ್ ಮಲ್ಟಿಮೀಡಿಯಾ ಸಿಸ್ಟಂ ಜತೆ ಬ್ಲುಟೂತ್ ಹಾಗೂ ರಿಯರ್ ಪಾರ್ಕಿಂಗ್ ಕ್ಯಾಮೆರಾ ಸಹ ಒಳಗೊಂಡಿರಲಿದೆ.

ಮಲೇಷ್ಯಾದಲ್ಲಿ ನಿಸ್ಸಾನ್ ಇಂಪುಲ್ ಬಾಡಿ ಕಿಟ್‌ನೊಂದಿಗೆ ಲಾಂಚ್ ಆಗಿದೆ. ಇದರಿಂದಾಗಿ ಹೆಚ್ಚುವರಿ 1.69 ಲಕ್ಷ ಪಾವತಿಸಬೇಕಾಗಿದೆ.

ನೂತನ ಬಾಡಿ ಕಿಟ್ ಹೊಸ ಗ್ರಿಲ್, ಸ್ಫೋರ್ಟ್ಸ್ ರಿಮ್ಸ್, ಇಂಪುಲ್ ಬ್ಲಾಸ್ಟ್ 2 ಎಕ್ಸ್‌ಹಾಸ್ಟ್ ಮಫ್ಲರ್, 17 ಇಂಚು ಇಂಪುಲ್ ಔರ ಎಸ್‌ಎಕ್ಸ್-20 ರಿಮ್ಸ್ ಹಾಗೂ ಇಂಪುಲ್ ಕಂಪ್ಲಿಟ್ ಏರೋಕಿಟ್ ರಿಯರ್ ವಿಂಗ್ ಸ್ಪೋಯ್ಲರ್ ಲಭ್ಯವಿರಲಿದೆ.

ಆಕ್ಸೆಸರಿ ಆಯ್ಕೆ
ಎಲ್‌ಇಡಿ ವಿಂಗ್ ಮಿರರ್ ಸಿಗ್ನಲ್ ಲೈಟ್, ಎಲ್‌ಇಡಿ ಸ್ಟೈನ್‌ಲೆಸ್ ಸ್ಟೀಲ್ ಕಿಕ್ಕಿಂಗ್ ಪ್ಲೇಟ್, ಡೋರ್ ವೈಸರ್, ಟ್ರಂಕ್ ಟ್ರೇ, ಸ್ಪೋರ್ಟ್ ಪೆಡಲ್, ಮಲ್ಟಿಮಿಡೀಯಾ ನೆವಿಗೇಷನ್, ಕಾಂಬಿನೇಷನ್ ಲೆಥರ್ ಸೀಟ್ ಆಂಡ್ ಡೋರ್ ಪ್ಯಾನೆಲ್ ಹಾಗೂ 15" 7 ಸ್ಪೋಕ್ ಅಲೋಯ್ ವೀಲ್ಸ್‌ಗಳಂತಹ ಆಕ್ಸೆಸರಿ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








