ಹೊಸ ವರ್ಷದಲ್ಲಿ ನಿಸ್ಸಾನ್ ದರ ಏರಿಕೆ ಬಿಸಿ
ಹೊಸ ವರ್ಷದಿಂದ ಕಾರು ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಇದರಂತೆ ಜಪಾನ್ ವಾಹನ ತಯಾರಕ ಕಂಪನಿಯಾದ ನಿಸ್ಸಾನ್ ಕೂಡಾ ದರ ಏರಿಕೆ ಬಿಸಿ ಮುಟ್ಟಿಸಿದೆ.
2013 ಜನವರಿ ತಿಂಗಳಿಂದ ದರ ಏರಿಕೆ ಮಾಡಲು ನಿಸ್ಸಾನ್ ನಿರ್ಧರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರೆನ್ಸಿ ಏರಿಳಿತ ಕಾಣುತ್ತಿರುವುದು ಹಾಗೂ ಆಮದು ವೆಚ್ಚ ವರ್ಧಿಸಿರುವುದು ನಿಸ್ಸಾನ್ ಇಂತಹದೊಂದು ಕ್ರಮಕ್ಕೆ ಕಾರಣವಾಗಿದೆ.

ಪ್ರತ್ಯೇಕ ಆವೃತ್ತಿಗೆ ಮಾತ್ರವಾಗಿ ದರ ಏರಿಕೆ ಮಾಡಲಾಗಿಲ್ಲ. ನಿಸ್ಸಾನ್ ಭಾರತದಲ್ಲಿ ಉತ್ಪಾದನೆ ಮಾಡುತ್ತಿರುವ ಮಾಡೆಲ್‌ಗಳಿಗೆ ದರ ಏರಿಕೆ ಘೋಷಿಸಿದೆ. ಈ ಪೈಕಿ ಮೈಕ್ರಾ ಹ್ಯಾಚ್‌ಬ್ಯಾಕ್, ಸನ್ನಿ ಸೆಡಾನ್ ಹಾಗೂ ಇವಾಲಿಯಾ ಎಂಪಿವಿ ಪ್ರಮುಖವಾಗಿದೆ. ಇದರ ಜತೆ ಆಮದು ಮಾಡಲಾಗುತ್ತಿರುವ ಪ್ರೀಮಿಯಂ ಕಾರುಗಳಾದ ಟೀನಾ ಪ್ರೀಮಿಯಂ ಸೆಡಾನ್, ಎಕ್ಸ್-ಟ್ರಯಲ್ ಎಸ್‌ಯುವಿ ಹಾಗೂ 370ಝಡ್ ಸ್ಪೋರ್ಟ್ಸ್ ಆವೃತ್ತಿಗಳಿಗೂ ದರ ಏರಿಕೆ ಬಿಸಿ ತಟ್ಟಿದೆ.
ನಿಸ್ಸಾನ್ ಜಪಾನ್‌ನ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಆಗಿದೆ. ಡೀಸೆಲ್ ವೆರಿಯಂಟ್ ಆಗಮನದ ಜತೆಗೆ ಮಾರಾಟವನ್ನು ದ್ವಿಗುಣ ಮಾಡುವಲ್ಲಿ ಯಶಸ್ವಿಯಾಗಿತ್ತು. ದೇಶದಲ್ಲಿ ಮಾರುತಿ ಸುಜುಕಿ, ಹೊಂಡಾ, ಟೊಯೊಟಾ ಹಾಗೂ ಮರ್ಸಿಡಿಸ್ ಬೆಂಝ್ ಕಂಪನಿಗಳು ಈಗಾಗಲೇ ದರ ಏರಿಕೆಯನ್ನು ಘೋಷಿಸಿದೆ.


Click it and Unblock the Notifications








