ಸರಂಡರ್ ಆದ ನಿತ್ಯಾನಂದ ಸ್ವಾಮಿಯ ಎಂಡೋವರ್
ಬಿಡದಿ ಆಶ್ರಮವಾಸಿ ನಿತ್ಯಾನಂದ ಕೊನೆಗೂ ರಾಮನಗರ ಕೋರ್ಟಿಗೆ ಹಾಜರಾಗಿದ್ದಾರೆ. ಈ ಹೈಟೆಕ್ ಸ್ವಾಮಿ ನ್ಯಾಯಾಲಯಕ್ಕೆ ಆಗಮಿಸಿದ್ದು ಕೆಎಲ್ 11, ಎಎ, 9669 ರಿಜಿಸ್ಟ್ರೇಷನ್ ನಂಬರಿನ ಸ್ಕೋಡಾ ಕಾರಿನಲ್ಲಿ. ಆದರೆ ನಿತ್ಯಾನಂದ ಹೆಚ್ಚಾಗಿ ಬಳಸುವುದು ಫೋರ್ಡ್ ಎಂಡೊವರ್ ಕಾರು.
ತಮಿಳುನಾಡಿನ ಪುರಾತನ ಧಾರ್ಮಿಕ ಮಠ ಮಧುರೈ ಅಧೀನಂ ಮುಂದೆ ನಿನ್ನೆ ಫೋರ್ಡ್ ಎಂಡೊವರ್ ಕಾರು ನಿಲ್ಲಿಸಲಾಗಿತ್ತು. ನಿತ್ಯಾನಂದ ಅಲ್ಲೇ ಇರುವುದಾಗಿ ಊಹಾಪೋಹ ಎದ್ದಿತ್ತು. ನಿತ್ಯಾನಂದ ಹೊಂದಿರುವ ಅಗೋಚರ ಆಸ್ತಿ ರಹಸ್ಯದಂತೆ ಅವರ ಬಳಿ ಯಾವೆಲ್ಲ ಕಾರುಗಳಿವೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ನಿತ್ಯಾನಂದ ಕಳೆದೆರಡು ದಿನಗಳಲ್ಲಿ ಸ್ಕೋಡಾ ಮತ್ತು ಫೋರ್ಡ್ ಕಾರು ಬಳಸಿದ್ದಾರೆ ಎನ್ನುವುದು ನಿಶ್ಚಿತ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಫೋರ್ಡ್ ಎಂಡೊವರ್. ಸ್ವಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಬಳಿಯಿರುವ ಫೋರ್ಡ್ ಎಂಡೋವರ್ ಕಾರಿನ ರಿಜಿಸ್ಟ್ರೇಷನ್ ಸಂಖ್ಯೆ ಕೆಎ 04, ಎಂಎನ್ 4444.
ಸ್ವಾಮೀಜಿಗೂ ಫ್ಯಾನ್ಸಿ ನಂಬರ್ ಕ್ರೇಝ್ ಇರುವುದು ಇದರಿಂದ ತಿಳಿಯುತ್ತದೆ. ಬಹುಶಃ ಅದೃಷ್ಟ ಸಂಖ್ಯೆಯೂ ಆಗಿದ್ದಿರಬಹುದು.
ಫೋರ್ಡ್ ಎಂಡೋವರ್ ಒಟ್ಟು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಫೋರ್ಡ್ ಎಂಡೊವರ್ ಆರಂಭಿಕ ಎಕ್ಸ್ ಶೋರೂಂ ದರ ಸುಮಾರು 18 ಲಕ್ಷ ರುಪಾಯಿ. ಹೈ ಎಂಡ್ ಆವೃತ್ತಿ ದರ ಸುಮಾರು 21 ಲಕ್ಷ ರುಪಾಯಿವರೆಗಿದೆ. ಎಂಡೋವರ್ ಕಾರು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ದೊರಕುತ್ತದೆ.
ಎಂಡೊವರ್ ಎಂದರೆ ಫೋರ್ಡ್ ಕಂಪನಿಯ ಬೃಹತ್ ಕಾರು. ಇದು ಆಫ್ ರೋಡಿಗೂ ಸೂಕ್ತವಾಗಿದೆ. 2.5 ಲೀಟರ್ ಟಿಡಿಸಿಐ ಎಂಜಿನ್ ಇರುವ ಎಂಡೋವರ್ ಸುಮಾರು 143 ಅಶ್ವಶಕ್ತಿ ನೀಡುತ್ತದೆ. ಅಂದ ಹಾಗೆ ನಟಿ ರಂಜಿತಾ ಬಳಿ ಯಾವ ಕಾರಿದೆ ಗೊತ್ತೆ?


Click it and Unblock the Notifications









