ನವೆಂಬರ್ 2012; ಸೋತವರು ಗೆದ್ದವರು ಯಾರು?

By Nagaraja

ಆಟೋಮೊಬೈಲ್ ಜಗತ್ತಿನಲ್ಲಿ ಹಬ್ಬದ ಸೀಸನ್ ಎಂದೇ ಪರಿಗಣಿಸಲ್ಪಡುವ ನವೆಂಬರ್ ತಿಂಗಳಲ್ಲಿ ಸಹಜವಾಗಿಯೇ ಕಾರುಗಳ ಮಾರಾಟ ಪ್ರಕ್ರಿಯೆ ದ್ವಿಗುಣವಾಗಿರುತ್ತದೆ. ಆದರೆ ಈ ಬಾರಿ ಇದಕ್ಕೆ ವ್ಯತಿರಿಕ್ತ ಪರಿಣಾಮ ಕಂಡುಬಂದಿದೆ.

2012 ನವೆಂಬರ್ ತಿಂಗಳ ಮಾರಾಟ ಶೇಕಡಾವಾರು ವರದಿಯನ್ನು ಡ್ರೈವ್ ಸ್ಪಾರ್ಕ್ ಪ್ರಸ್ತುತಪಡಿಸುತ್ತಿದೆ. ಒಟ್ಟಾರೆಯಾಗಿ ದೇಶದ ಆಟೋಮೊಬೈಲ್ ಜಗತ್ತು ತೀವ್ರ ಒತ್ತಡದಲ್ಲಿ ಮುಂದುವರಿಯುವ ಪ್ರಕ್ರಿಯೆ ಕಂಡುಬಂದಿದೆ. ಟಾಟಾ ಮೋಟಾರ್ಸ್, ಹ್ಯುಂಡೈ, ಟೊಯೊಟಾ ಹಾಗೂ ಫೋರ್ಡ್‌ಗಳಂತಹ ಮುಂಚೂಣಿಯ ಕಂಪನಿಗಳು ಹಿನ್ನಡೆ ಅನುಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಆದರೆ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯೆಂಬ ಕೀರ್ತಿಗೆ ಪಾತ್ರವಾಗಿರುವ ಮಾರುತಿ ಸುಜುಕಿ ಹಾಗೂ ಮಹೀಂದ್ರ ಕಂಪನಿಯ ನೂತನ ಅವತರಣಿಕೆಯು ನವೆಂಬರ್ ತಿಂಗಳಲ್ಲಿ ಸಮತೋಲನ ಕಾಪಾಡಲು ನೆರವಾಗಿದೆ. ಮಾರುತಿಯ ನೂತನ ಅವೃತ್ತಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದರೆ ಮಹೀಂದ್ರ ಮಿನಿ ಕ್ಸೈಲೋ ಕೂಡಾ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ನವೆಂಬರ್ ತಿಂಗಳಲ್ಲಿ ಸೋತವರು ಗೆದ್ದವರ ವರದಿ ನೋಡೋಣ.

ಮಾರುತಿಗೆ ಸರಿಸಾಟಿ ಯಾರು?

ಮಾರುತಿಗೆ ಸರಿಸಾಟಿ ಯಾರು?

ನಿರೀಕ್ಷೆಯಂತೆಯೇ ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಶೇಕಡಾ 12ರಷ್ಟು ವೃದ್ಧಿ ದಾಖಲಿಸಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿಯ 1,03,200 ಯುನಿಟ್‌ಗಳು ಮಾರಾಟವಾಗಿದೆ. ಈ ಪೈಕಿ 12,318 ಯುನಿಟ್ ರಫ್ತಾಗಿದ್ದರೆ 90,882 (8.67) ಯುನಿಟ್ ದೇಶಿಯವಾಗಿ ಮಾರಾಟವಾಗಿದ್ದವು. ಸಹಜವಾಗಿಯೇ ಮಾರುತಿ ಎಟಿರ್ಗಾ ಹಾಗೂ ಸ್ವಿಫ್ಟ್ ಡಿಜೈರ್ ಸೆಡಾನ್ ಉತ್ತಮ ಮಾರಾಟ ದಾಖಲಿಸಿದೆ.

ಕುಸಿದ ಹ್ಯುಂಡೈ

ಕುಸಿದ ಹ್ಯುಂಡೈ

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಿಕಟ ಪ್ರತಿಸ್ಪರ್ಧಿಯಾಗಿರುವ ಹೊರತಾಗಿಯೂ ನವೆಂಬರ್ ತಿಂಗಳಲ್ಲಿ ಉತ್ತಮ ಮಾರಾಟ ಪ್ರಗತಿ ದಾಖಲಿಸುವಲ್ಲಿ ಹ್ಯುಂಡೈನಿಂದ ಸಾಧ್ಯವಾಗಿಲ್ಲ. ದಕ್ಷಿಣ ಕೊರಿಯಾದ ಈ ಕಾರು ತಯಾರಕ ಕಂಪನಿಯು ನವೆಂಬರ್ ತಿಂಗಳಲ್ಲಿ 55,762 ಯುನಿಟ್ ಮಾರಾಟ ಮಾಡುವ ಮೂಲಕ ಶೇಕಡಾ 2.29ರಷ್ಟು ಕುಸಿತವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಗೆ 57,071 ಯುನಿಟ್ ಸೇಲಾಗಿದ್ದವು.

ಗುಡ್ ಲುಕಿಂಗ್ ಮಹೀಂದ್ರ

ಗುಡ್ ಲುಕಿಂಗ್ ಮಹೀಂದ್ರ

ಎಸ್‌ಯುವಿ ಸೆಗ್ಮೆಂಟ್ ವೆಹಿಕಲ್‌ಗಳಲ್ಲಿ ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಮಹೀಂದ್ರ ನವೆಂಬರ್ ತಿಂಗಳಿನಲ್ಲೂ ಭರ್ಜರಿ ಬೇಟೆ ನಡೆಸಿದೆ. ನವೆಂಬರ್ ತಿಂಗಳಲ್ಲಿ ಶೇಕಡಾ 38ರಷ್ಟು ಭರ್ಜರಿ ಏರಿಕೆ ದಾಖಲಿಸಿರುವ ಮಹೀಂದ್ರ 24,604 ಯುನಿಟ್ ಮಾರಾಟ ಮಾಡಿವೆ. ಮಿನಿ ಕ್ಸೈಲೋ ಎಂದೇ ಪರಿಗಣಿಸಲ್ಪಟ್ಟಿರುವ ಮಹೀಂದ್ರ ಕಂಪನಿಯ ಕ್ವಾಂಟೊ ನಿಜಕ್ಕೂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ.

ಟಾಟಾ ಮೋಟಾರ್ಸ್ ಹಿನ್ನಡೆ

ಟಾಟಾ ಮೋಟಾರ್ಸ್ ಹಿನ್ನಡೆ

ದೇಶದಲ್ಲಿ ಅತಿ ಹೆಚ್ಚು ವಾಹನ ತಯಾರಕ ಘಟಕವನ್ನು ಹೊಂದಿರುವ ಟಾಟಾ ಮೋಟಾರ್ಸ್ ನವೆಂಬರ್ ತಿಂಗಳಲ್ಲಿ ಶೇಕಡಾ 13ರಷ್ಟು ಕುಸಿತ ದಾಖಲಿಸುವ ಮೂಲಕ ಹಿನ್ನಡೆ ಅನುಭವಿಸಿದೆ. ಟಾಟಾ ಮೋಟಾರ್ಸ್ ಎಲ್ಲ ಆವೃತ್ತಿಯಲ್ಲೂ ಕುಸಿತ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಟಾಟಾ ಸಫಾರಿ ಸ್ಟ್ರೋಮ್ ಹಾಗೂ ಮಾಂಝಾ ಕ್ಲಬ್ ಕ್ಲಾಸ್ ಹೇಗೆ ಟಾಟಾ ಅದೃಷ್ಟ ಬದಲಾಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟೊಯೊಟಾಗೆ ಆಘಾತ

ಟೊಯೊಟಾಗೆ ಆಘಾತ

ಜಪಾನ್ ಕಾರು ತಯಾರಕ ಕಂಪನಿಯಾದ ಟೊಯೊಟಾ ಶೇಕಡಾ 25ರಷ್ಟು ಕುಸಿತ ಕಾಣುವ ಮೂಲಕ ಭಾರಿ ಆಘಾತ ಅನುಭವಿಸಿದೆ. ಟೊಯೊಟಾದ 10,252 ಯುನಿಟ್‌ಗಳಷ್ಟೇ ಮಾರಾಟವಾಗಿದ್ದವು. ಘಟಕ ಮುಚ್ಚುಗಡೆಗೊಂಡಿರುವುದು ಹಿನ್ನಡೆಗೆ ಕಾರಣವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕುಸಿತ ಅನುಭವಿಸಿದ ಫೋರ್ಡ್

ಕುಸಿತ ಅನುಭವಿಸಿದ ಫೋರ್ಡ್

ಅಮೆರಿಕ ಕಾರು ತಯಾರಕ ಕಂಪನಿಯಾದ ಫೋರ್ಡ್ ಕೂಡಾ ನವೆಂಬರ್ ತಿಂಗಳಲ್ಲಿ ಶೇಕಡಾ 28.57ರಷ್ಟು ಕುಸಿತವನ್ನು ಕಂಡಿದೆ. ಈ ಅವಧಿಯಲ್ಲಿ 5944 ಯುನಿಟ್‌ಗಳು ಮಾತ್ರ ಸೇಲಾಗಿದ್ದವು.

More from DriveSpark

Article Published On: Wednesday, December 5, 2012, 17:29 [IST]
English summary
The automobile industry is still under pressure considering the sales reports coming in from the major players such as Hyundai, Tata Motors, Toyota and Ford. But there are some exceptions as Maruti Suzuki and Mahindra have managed to post sizeable improvements in November 2012. Have a look at how each of them have performed in November 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+