ಫೆಮಿನಾ ವಿಶ್ವಸುಂದರಿಯರಿಗೆ ಸ್ಕೋಡಾ ಕಾರು ಗಿಫ್ಟ್
ಪ್ಯಾಂಟಲೂನ್ ಫೆಮಿನಾ ಮಿಸ್ ಇಂಡಿಯಾ(ಪಿಎಫ್ಎಂಐ)2012 ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದೆ. ಅಂಧೇರಿಯಲ್ಲಿ ತಾರಾಗಣದ ನಡುವೆ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಗೆದ್ದ ಮೂವರು ಸುಂದರಿಯರಿಗೆ ಸ್ಕೋಡಾ ಕಂಪನಿಯು ಫಾಬಿಯಾ ಕಾರು ಕೀಲಿಕೈ ಹಸ್ತಾಂತರಿಸಿದೆ.
ಫೆಮಿನಾ ಮಿಸ್ ಇಂಡಿಯಾ ಆಗಿ ವಾಣ್ಯ ಮಿಶ್ರಾ, ಮಿಸ್ ಇಂಡಿಯಾ ಅರ್ಥ್ ಆಗಿ ಪ್ರಾಚಿ ಮಿಶ್ರಾ ಮತ್ತು ಫೆಮಿನಾ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಆಗಿ ರೊಚೆಲ್ ಮಾರಿಯಾ ರಾವ್ ಆಯ್ಕೆಯಾಗಿದ್ದಾರೆ. ಪ್ಯಾಂಟಲೂನ್ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಸ್ಕೋಡಾ ಕಾರು ಪಾಲುದಾರ ಕಂಪನಿಯಾಗಿದೆ.
ಫೆಮಿನಾ ಸೌಂದರ್ಯ ಸ್ಪರ್ಧೆಯಲ್ಲಿ ಒಟ್ಟು 20 ಸುಂದರಿಯರು ಭಾಗವಹಿಸಿದ್ದರು. ಕಳೆದ ವರ್ಷವೂ ಗೆದ್ದ ಸುಂದರಿಯರಿಗೆ ಸ್ಕೋಡಾ ಕಂಪನಿಯು ಕಾರು ಉಡುಗೊರೆ ನೀಡಿತ್ತು.(ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications
