ಪೆಟ್ರೋಲ್ ದರ ಇಳಿಕೆ, ಕಾರು ಕಂಪನಿಗಳಿಗೆ ಹರ್ಷ
ಇದು ದೇಶದ ಹೆಚ್ಚಿನ ಕಾರು ಕಂಪನಿಗಳಿಗೆ ಅತೀವ ಸಂತಸ ತಂದಿದೆ. ಇತ್ತೀಚೆಗೆ ಪೆಟ್ರೋಲ್ ದರ 7 ರುಪಾಯಿಯಷ್ಟು ಏರಿಕೆ ಕಂಡ ನಂತರ ಪೆಟ್ರೋಲ್ ಕಾರುಗಳ ಮಾರಾಟವೂ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಮಾರುತಿ ಸುಜುಕಿ, ಹ್ಯುಂಡೈ ಮತ್ತು ಹೋಂಡಾ ಪೆಟ್ರೋಲ್ ಕಾರುಗಳ ಮಾರಾಟಕ್ಕೆ ಇದು ಭಾರಿ ಹೊಡೆತ ನೀಡಿತ್ತು.
"ಇದು ವಾಹನ ಉದ್ಯಮಕ್ಕೆ ಹರ್ಷದಾಯಕ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಡುವಿನ ಅಂತರ ಕಡಿಮೆ ಮಾಡಲು ಇನ್ನಷ್ಟು ಹೆಜ್ಜೆ ಇರಿಸಬೇಕಿದೆ" ಎಂದು ದೇಶದ ವಾಹನ ಉತ್ಪಾದಕರ ಸಂಘದ ಅಧ್ಯಕ್ಷರಾದ ಸುಬಾಟೊ ಸೇನ್ ಹೇಳಿದ್ದಾರೆ.
"ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಡುವಿನ ಅಂತರವನ್ನು ನೋಡಿದರೆ ಪೆಟ್ರೋಲ್ ದರ ಇಳಿಕೆ ಸಾಕಾಗದು. ದರ ಇನ್ನಷ್ಟು ಕಡಿಮೆಯಾದರೆ ಮಾತ್ರ ನಿಟ್ಟುಸಿರು ಬಿಡಲು ಸಾಧ್ಯ" ಎಂದು ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷರಾದ ಜ್ಞಾನೇಶ್ವರ್ ಸೇನ್ ಹೇಳಿದ್ದಾರೆ.
ಪೆಟ್ರೋಲ್ ದರ ಇಳಿಕೆಯ ಟ್ರೆಂಡ್ ಗ್ರಾಹಕರ ಮನಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ದರ ಇನ್ನಷ್ಟು ಕಡಿಮೆಯಾದೀತು ಎಂಬ ನಿರೀಕ್ಷೆಯಿಂದ ಗ್ರಾಹಕರು ಪೆಟ್ರೋಲ್ ಕಾರು ಖರೀದಿಗೆ ಮನಸು ಮಾಡುವ ನಿರೀಕ್ಷೆಯಿದೆ. ಡೀಸೆಲ್ ಮೇಲೆ ವಿಧಿಸುವ ಹೆಚ್ಚುವರಿ ತೆರಿಗೆಯ ಕುರಿತೂ ಅನಿಶ್ಚಿತತೆ ಇರುವುದರಿಂದ ಗ್ರಾಹಕರು ಕೊಂಚ ಗೊಂದಲದಲ್ಲಿದ್ದಾರೆ.


Click it and Unblock the Notifications









