ಪೆಟ್ರೋಲ್ ದರ ಹೆಚ್ಚಳ: ವಾಹನ ಮಾಲಿಕ ಬಡವನಾದ!
ಬೆಂಗಳೂರು ಪೆಟ್ರೋಲ್ ಬಂಕ್‌ಗಳಲ್ಲಿ ಇನ್ಮುಂದೆ ಪ್ರತಿಲೀಟರ್ ಪೆಟ್ರೋಲಿಗೆ 81.21 ರುಪಾಯಿ ನೀಡಬೇಕು. ಮಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 80.68 ರು. ಮತ್ತು ಹುಬ್ಬಳ್ಳಿ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ದರ ಲೀಟರಿಗೆ 80.05 ರುಪಾಯಿ ಆಗಿದೆ. ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ದರ ಲೀಟರಿಗೆ 80 ರು. ಗಡಿ ದಾಟಿದೆ.
ಪೆಟ್ರೋಲ್ ದರ ಹೆಚ್ಚುವಲ್ಲಿ ರಾಜ್ಯಗಳು ವಿಧಿಸುವ ತೆರಿಗೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ. ಉದಾಹರಣೆಗೆ ಗೋವಾದಲ್ಲಿ ಪೆಟ್ರೋಲ್ ಮೇಲಿನ ಸುಂಕ ಕಡಿಮೆ. ಆದರೆ ಕರ್ನಾಟಕದಲ್ಲಿ ಪೆಟ್ರೋಲಿಗೆ ಶೇಕಡ 25ರಷ್ಟು ಮಾರಾಟ ತೆರಿಗೆ ಮತ್ತು ಶೇಕಡ 5ರಷ್ಟು ಪ್ರವೇಶ ತೆರಿಗೆ ವಿಧಿಸುತ್ತದೆ. ರಾಜ್ಯ ಸರಕಾರವು ತೆರಿಗೆ ಇಳಿಸುವ ಮೂಲಕ ಗ್ರಾಹಕರ ಕಿಸೆಭಾರ ಇಳಿಸಲು ಪ್ರಯತ್ನಿಸುತ್ತಿಲ್ಲವೆನ್ನುವುದು ಡ್ರೈವ್‌ಸ್ಪಾರ್ಕ್ ಓದುಗರ ಆರೋಪ.
ಪೆಟ್ರೋಲ್ ದರ ದುಬಾರಿಯಾಗುವುದು ಇಷ್ಟಕ್ಕೆ ನಿಲ್ಲುವ ಸೂಚನೆಗಳಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇ ದಿನೇ ದುಬಾರಿಯಾಗುತ್ತಿದೆ. ಜೊತೆಗೆ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಇತ್ಯಾದಿ ನೆಪಗಳಿಂದ ಮುಂಬರುವ ದಿನಗಳಲ್ಲಿ ಪೆಟ್ರೋಲ್ ದರಗಳು ನಾಗಲೋಟ ಮುಂದುವರೆಸಲಿವೆ.
ಪೆಟ್ರೋಲ್ ದರ ಹೆಚ್ಚಳ ಹಿನ್ನಲೆಯಲ್ಲಿ ಈಗಾಗಲೇ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇದು ಇನ್ಮುಂದೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಪರಿಣಾಮವಾಗಿ ಡೀಸೆಲ್ ಕಾರುಗಳ ವೇಟಿಂಗ್ ಪಿರೆಯಿಡ್ ಅಧಿಕವಾಗಲಿದೆ. ದೇಶದಲ್ಲಿ ಡೀಸೆಲ್ ಕಾರು ಉತ್ಪಾದನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ದರ ಹೆಚ್ಚಳವೂ ಸಾಥ್ ನೀಡಲಿದೆ.
ಸದ್ಯ ಡೀಸೆಲ್ ದರ ಹೆಚ್ಚಳವಾಗಿಲ್ಲ. ಪ್ರತಿತಿಂಗಳು ನೀವು 450 ಕಿ.ಮೀ.ಗಿಂತ ಕಡಿಮೆ ಪ್ರಯಾಣ ಮಾಡುವಿರಾದರೆ ನಿಮಗೆ ಪೆಟ್ರೋಲ್ ಕಾರೇ ಸೂಕ್ತ. ದರ ಹೆಚ್ಚಾದರೂ ಮೈಲೇಜ್ ಹೆಚ್ಚಿಸುವ ಸಲಹೆ ಪಾಲಿಸುವ ಮೂಲಕ ದುಡ್ಡು ಉಳಿಸಿಕೊಳ್ಳಬಹುದು. ಆದರೆ ನಿವು ತಿಂಗಳಿಗೆ 500ಕ್ಕೂ ಹೆಚ್ಚು ಕಿ.ಮೀ. ಪ್ರಯಾಣಿಸುವಿರಾದರೆ ಡೀಸೆಲ್ ಕಾರು ಖರೀದಿಸಬಹುದು.
ಪೆಟ್ರೋಲ್ ದರ ಹೆಚ್ಚಳ ಹಿನ್ನಲೆಯಲ್ಲಿ ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಿಗೆ ಒಂದಿಷ್ಟು ಸಲಹೆಗಳಿವೆ. ವಾಹನಗಳ ಮಾಲಿಕರು ಈ ಸಲಹೆ ಪಾಲಿಸಿದರೆ ಕಿಸೆಯಲ್ಲಿ ಕೊಂಚ ಹಣ ಉಳಿಸಬಹುದು. ಕೆಳಗಿರುವ ಲಿಂಕ್ ಪ್ರವೇಶಿಸಿ.
ಮೈಲೇಜ್ ಹೆಚ್ಚಿಸೋದು ಹೇಗೆ?
ನಾಲ್ಕು ಇಂಧನಗಳಲ್ಲಿ ಯಾವುದು ಉತ್ತಮ?


Click it and Unblock the Notifications









