ಅಯ್ಯೋ ರಾಮ, ಪೆಟ್ರೋಲ್ ದರ ಮತ್ತೆ ಹೆಚ್ಚಾಗಲಿದೆಯಂತೆ!

ಮುಂದಿನ ತಿಂಗಳು ಪೆಟ್ರೋಲ್ ದರ ಲೀಟರಿಗೆ ಸುಮಾರು 3 ರು.ನಷ್ಟು ಏರಿಕೆ ಕಾಣುವ ನಿರೀಕ್ಷೆಗಳಿವೆ. ಸದ್ಯ ಉತ್ತರ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆ ಮುಗಿಯಲು ರಾಜಕೀಯ ಪಕ್ಷಗಳು ಕಾಯುತ್ತಿದ್ದು, ಶೀಘ್ರದಲ್ಲಿ ಇಂಧನ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ.

ಪ್ರತಿದಿನ ಲೀಟರ್ ಪೆಟ್ರೋಲ್ ಮೇಲೆ ತಲಾ 3.30 ರುಪಾಯಿ ನಷ್ಟ ಅನುಭವಿಸುತ್ತಿರುವುದಾಗಿ ಭಾರತದ ಬೃಹತ್ ಪೆಟ್ರೋಲ್ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ ತಿಳಿಸಿದೆ. ಕಳೆದ ಕೆಲವು ತಿಂಗಳಿನಿಂದ ಕಚ್ಚಾ ತೈಲಾ ದರ ಕೂಡ ಬ್ಯಾರೆಲಿಗೆ 109 ಡಾಲರ್ ಇದ್ದದ್ದು 128 ಡಾಲರಿಗೆ ಏರಿಕೆಯಾಗಿದೆ.

ಪೆಟ್ರೋಲ್ ದರ ಏರಿಕೆ ಕಾಣುವುದು ವಾಹನೋದ್ಯಮದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ಕಾರಣದಿಂದ ಈಗ ಪೆಟ್ರೋಲ್ ಕಾರುಗಳ ಮಾರಾಟ ಇಳಿಕೆ ಕಾಣುತ್ತಿದೆ. ಪೆಟ್ರೋಲ್ ದರ ಹೆಚ್ಚಳವಾದ ಹಿನ್ನಲೆಯಲ್ಲಿ ಹೆಚ್ಚು ಜನರು ಡೀಸೆಲ್ ಕಾರುಗಳತ್ತ ಮುಖ ಮಾಡಿದ್ದರು.

ಪೆಟ್ರೋಲ್ ದರ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಕಾರು ಕಂಪನಿಗಳು ಡೀಸೆಲ್, ಸಿಎನ್ ಜಿ ಮತ್ತು ಎಲ್ ಪಿಜಿ ಕಾರುಗಳ ಉತ್ಪಾದನೆಗೆ ಹೆಚ್ಚು ಗಮನ ನೀಡುವ ನಿರೀಕ್ಷೆಗಳಿವೆ. ಡೀಸೆಲ್ ಕಾರಿಗೂ ಮುಂದಿನ ಬಜೆಟಿನಲ್ಲಿ ಅಬಕಾರಿ ಸುಂಕದ ದೊಡ್ಡ ಬರೆ ಬೀಳುವ ನಿರೀಕ್ಷೆಯಿದೆ.

More from DriveSpark

Article Published On: Tuesday, February 14, 2012, 17:31 [IST]
English summary
Petrol prices are expected to be increased by Rs. in the coming days. The central government is waiting for the elections in several states including Uttar Pradesh before it announced the price hike. Auto companies will find it tough to sell their petrol cars if petrol prices are increased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+