ಸೋಮವಾರ ಪೆಟ್ರೊಲ್ ಬಂಕ್ ಮುಷ್ಕರ, ಯಾಕಂತೆ?
ಈಗ ಸರಕಾರವು ಲೀಟರ್ ಪೆಟ್ರೋಲ್ ಮೇಲೆ 27 ಪೈಸೆ ಮತ್ತು ಡೀಸೆಲ್ ಮೇಲೆ 14 ಪೈಸೆ ಕಮಿಷನ್ ನೀಡುತ್ತಿದೆ. ಆದರೆ ಪೆಟ್ರೋಲ್ ಲೀಟರಿಗೆ 39 ಪೈಸೆ ಮತ್ತು ಡೀಸೆಲಿಗೆ 17 ಪೈಸೆ ಹೆಚ್ಚಿಸಬೇಕೆಂದು ಪೆಟ್ರೋಲ್ ಬಂಕ್ ಸಂಘವು ಮನವಿಸಲ್ಲಿಸಿದೆ.
ಕಮಿಷನ್ ವಿಷಯ ಮಾತ್ರವಲ್ಲದೇ ಸುಮಾರು 12 ಸಾವಿರ ಹೊಸ ಪಂಪ್ ಆರಂಭಿಸುವ ಯೋಜನೆಯನ್ನೂ ಸಮಿತಿ ವಿರೋಧಿಸಿದೆ. ತೈಲ ಸಚಿವಾಲಯವು ಕಮಿಷನ್ ಹೆಚ್ಚಿಸುವ ಕುರಿತು ಪರಿಶೀಲಿಸುವ ಭರವಸೆ ನೀಡಿದೆ. ಆದರೆ ಹೊಸ ಬಂಕ್ ಯೋಜನೆಯಿಂದ ಹಿಂದೆ ಸರಿಯುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.
"ಸರಕಾರವು ಅಪೂರ್ವ ಚಂದ ಕಮಿಟಿ ವರದಿಯನ್ನು ಅನುಷ್ಠಾನಕ್ಕೆ ತಂದರೆ ಮತ್ತು ಹೊಸ ಪಂಪ್ ಆರಂಭಿಸಲು ನೀತಿನಿಯಮಗಳನ್ನು ರೂಪಿಸಿದರೆ ಏಪ್ರಿಲ್ 23ರ ಮುಷ್ಕರ ಕೈಬಿಡಲಿದ್ದೇವೆ. ಆದರೆ ಇದು ಕೇವಲ ಬಾಯಿ ಮಾತಿನ ಸಮ್ಮತಿಯಾದರೆ ಏಪ್ರಿಲ್ 30ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದೇವೆ" ಎಂದು ಭಾರತೀಯ ಪೆಟ್ರೋಲ್ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಬನ್ಸಲ್ ಹೇಳಿದ್ದಾರೆ. (ಕನ್ನಡ ಡ್ರೈವ್‌ಸ್ಪಾರ್ಕ್ ಸುದ್ದಿ)


Click it and Unblock the Notifications









