ಮೂಡಿಗೆ ತಕ್ಕಂತೆ ಬಣ್ಣ ಬದಲಾಯಿಸುವ ಕಾರು

ಗಂಡನಿಗೆ ಮೂಡಿದ್ರೆ ಹೆಂಡ್ತಿಗೆ ಮೂಡಿರೊಲ್ಲ, ಹೆಂಡ್ತಿಗೆ ಮೂಡಿದ್ರೆ ಗಂಡನಿಗೆ... ಇರೊಲ್ಲ. ಆದರೆ ನಮ್ಮ ವ್ಯಕ್ತಿತ್ವ, ಮೂಡಿಗೆ ತಕ್ಕಂತೆ ಕಾರೇ ಬಣ್ಣ ಬದಲಾಯಿಸಿದ್ರೆ ಹೇಗಿರುತ್ತೆ?

ಕಾರಿನ ಬಣ್ಣ ನಮ್ಮ ವ್ಯಕ್ತಿತ್ವ ಸೂಚಕವೆಂದು ಕೆಲವರು ಹೇಳುತ್ತಾರೆ. ಆದರೆ ಇಲ್ಲೊಂದು ಕಾರಿದೆ. ಅದು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಅಂದರೆ ನಿಮ್ಮ ಮೂಡಿಗೆ ತಕ್ಕಂತೆ ಆ ಕಾರಿನ ಬಣ್ಣ ಬದಲಾಗುತ್ತದೆ. ನಿಮಗೆ ಕೋಪ ಬಂದ್ರೆ ಕಾರಿನ ಬಣ್ಣ ಕೆಂಪಾದೀತು. ನಿರಾಳವಾಗಿದ್ದರೆ ಬಿಳಿಬಣ್ಣವಾದೀತು. ಪ್ರೀತಿ ಉಕ್ಕಿಹರಿದರೆ ಯಾವ ಬಣ್ಣ ಬರುತ್ತೋ... ಸದ್ಯ ಮಾಹಿತಿಯಿಲ್ಲ.

ಪ್ಯೂಜೊ ಕಂಪನಿಯು ಪರಿಚಯಿಸಿರುವ ನೂತನ ಸ್ಪೋರ್ಟ್ ಕಾರು ಆರ್ ಸಿಬಿ ಈ ಗುಣಹೊಂದಿದೆ. ಅದರ ಚಾಲಕನ ಮೂಡಿಗೆ ತಕ್ಕಂತೆ ಅದರ ಪೇಂಟ್ ಬಣ್ಣ ಬದಲಾಗುತ್ತದೆ. ಕಂಪನಿಯು ಈ ಕಾರನ್ನು ಲಂಡನಿನಲ್ಲಿ ಅನಾವರಣ ಮಾಡಿದೆ. ಉಳಿದ ಕಾರುಗಳಿಗೆ ಹೋಲಿಸಿದರೆ ಬಣ್ಣ ಬದಲಾಯಿಸುವುದರ ಹೊರತಾಗಿ ಬೇರಾವುದೇ ಪ್ರಮುಖ ತಾಂತ್ರಿಕ ವಿಶೇಷತೆ ಈ ಕಾರಿನಲ್ಲಿಲ್ಲ.

ಬ್ರಿಟನಿನ ಸಂಶೋಧಕರು ಈ ಪ್ರತಿಕ್ರಿಯಾತ್ಮಕ ಪೇಂಟ್ ವಿನ್ಯಾಸ ಮಾಡಿದ್ದಾರೆ. ಕಾರಿನ ಚಾಲಕನ ಮೂಡಿಗೆ ತಕ್ಕಂತೆ ಕಾರಿನ ಬಣ್ಣ ಬದಲಾಗುವುದು ಇದರ ವಿಶೇಷತೆ. ಚಾಲಕ ಕೋಪಗೊಂಡಿದ್ದರೆ, ಬೇಸರದಲ್ಲಿದ್ದರೆ, ಸಂತೋಷದಿಂದ ಇದ್ದರೆ ಆ ಮೂಡಿಗೆ ತಕ್ಕಂತೆ ಕಾರಿನ ಬಣ್ಣ ಬದಲಾಗುತ್ತದೆ.

ಕಾರಿನ ಸ್ಟಿಯರಿಂಗ್ ನಲ್ಲಿ ಅಳವಡಿಸಿರುವ ವಿಶೇಷ ತಾಂತ್ರಿಕತೆಯು ಚಾಲಕನ ಮೂಡ್ ತಿಳಿದುಕೊಳ್ಳುತ್ತದೆ. ಸ್ಟಿಯರಿಂಗ್ ವೀಲ್ ನಲ್ಲಿರುವ ವಿಶೇಷ ಸೆನ್ಸಾರ್ ಗಳು ಚಾಲಕನ ಮೈಬಿಸಿ, ಹೃದಯದ ಬಡಿತ ಇತ್ಯಾದಿಗಳನ್ನು ತಿಳಿದುಕೊಳ್ಳುತ್ತದೆ. ಚಾಲಕನ ವಿವಿಧ ಮೂಡ್ ತೋರಿಸುವ ವಿವಿಧ ಬಣ್ಣಗಳಲ್ಲಿ ಸಕಾಲಕ್ಕೆ ಯಾವುದು ಬೇಕೋ ಅದನ್ನು ಕಾರು ತೋರಿಸುತ್ತದೆ.

"ಇಂತಹ ವಿಶೇಷ ಕಾರೊಂದು ವಿಶ್ವಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ಚಾಲಕನ ಭಾವನೆಗೆ ತಕ್ಕಂತೆ ಬಣ್ಣ ಬದಲಾಯಿಸುವ ಕಾರು ಎಲ್ಲರಿಗೂ ಇಷ್ಟವಾಗುವ ನಿರೀಕ್ಷೆಯಿದೆ" ಎಂದು ಪ್ಯೂಜೊ ಕಂಪನಿಯ ಉತ್ಪನ್ನ ವಿಭಾಗದ ಪ್ರಮುಖ ಅಧಿಕಾರಿ ವಿನ್ಸ್ ಕ್ಲಿಸಮ್ ಹೇಳಿದ್ದಾರೆ.

More from DriveSpark

Article Published On: Monday, April 2, 2012, 14:29 [IST]
English summary
Some say, the car you own reflects your personality. But do you want a car that also reflects your mood? If your answer is yes, then the new Peugeot RCZ unveiled in London is the car for you. The new RCZ has nothing new in terms of technical specifications or the design. But is unique in the new sports car fr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+