ಕ್ರಿಕೆಟ್ ದಿಗ್ಗಜ ಕಪಿಲ್‌ಗೆ ಪೋರ್ಷೆ ಪನಮೆರಾ ಡೀಸೆಲ್ ಕಾರು ಹಸ್ತಾಂತರ

ಭಾರತ ಕ್ರಿಕೆಟ್‌ನ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರಿಗೆ ನೂತನ ಡೀಸೆಲ್ ಎಂಜಿನ್ ಪನಮೆರಾ ಕಾರಿನ ಕೀಲಿ ಹಸ್ತಾಂತರಿಸುವ ಮೂಲಕ ಪೋರ್ಷೆ ಇಂಡಿಯಾ ದೇಶಕ್ಕೆ ನೂತನ ಬ್ರಾಂಡ್ ಪರಿಚಯಿಸಿಕೊಟ್ಟಿದೆ. ಇದು ಪೋರ್ಷೆ ಇಂಡಿಯಾದ ದೇಶದಲ್ಲಿನ ಮೊದಲ ಡೀಸೆಲ್ ಪನಮೆರಾ ಕಾರಿನ ವಿತರಣೆಯಾಗಿದೆ.

ಅಂದ ಹಾಗೆ ಈ ಐಷಾರಾಮಿ ಕಾರಿನ ಬೆಲೆ ದೆಹಲಿ ಎಕ್ಸ್‌ ಶೋರೂಂಗಳಲ್ಲಿ ಬರೋಬ್ಬರಿ ಒಂದು ಕೋಟಿ ರುಪಾಯಿಗಳಾಗಿವೆ. ಐಷಾರಾಮಿ ಕಾರು ವಿಭಾಗಗಳಲ್ಲಿ ಖಚಿತವಾಗಿಯೂ ಸ್ಫೋರ್ಟಿವ್ ಲುಕ್ ಹೊಂದಿರುವ ಪನಮೆರಾ ಕಾರು ಲಗ್ಷುರಿ ಕಾರು ಸೆಗ್ಮೆಂಟ್‌ನಲ್ಲಿ ಯೂನಿಕ್ ಡಿಸೈನ್ ಹಾಗೂ ಅದ್ದೂರಿ ವಿನ್ಯಾಸಗಳನ್ನು ಹೊಂದಿದೆ.

ಮೂರು ಲೀಟರ್ ವಿ6 ಡೀಸೆಲ್ ಎಂಜಿನ್ ಹೊಂದಿರುವ ಪನಮೆರಾ ಕಾರು ಅತ್ಯಾರ್ಷಕ ಫೀಚರುಗಳನ್ನು ಹೊಂದಿದೆ. ಪನಮೆರಾ ಕಾರು 2,967 ಸಿಸಿ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 250 ಪಿಎಸ್ ಪವರ್ ಮತ್ತು 550 ಎನ್ಎಂ ಟಾರ್ಕ್ ನೀಡುತ್ತದೆ. ಇದು 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಪೋರ್ಷೆ ಇಂಡಿಯಾ ನಿರ್ದೇಶಕ ಅನಿಲ್ ರೆಡ್ಡಿ ಅವರು ಕಪಿಲ್ ದೇವ್ ಕೈಗಳಿಗೆ ಕೀಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ ಅನಿಲ್ ರೆಡ್ಡಿ, ದೇಶದಲ್ಲಿ ಉತ್ತಮ ಮಾರಾಟ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಪೊರ್ಷೆ ಕಾರುಗಳು ಯಾವತ್ತಿಗೂ ಕಾರ್ಯಕ್ಷಮತೆಗೆ ಹೆಸರುವಾಸಿ. ಕಂಪನಿಯ ಪನಮೆರಾ ಕಾರು ಕೂಡ ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 15 ಕಿ.ಮೀ. ನೀಡುವ ಟಾಪ್ ಮೈಲೇಜ್ ನೀಡಲಿದೆ.

ಪೋರ್ಷೆ ಪನಮೆರಾ ಡೀಸೆಲ್ ಕಾರು ಎಂಜಿನ್

ಪೋರ್ಷೆ ಪನಮೆರಾ ಡೀಸೆಲ್ ಕಾರು ಎಂಜಿನ್

ಸಿಲಿಂಡರ್- 6

ಡಿಸ್‌ಪ್ಲೇಸ್‌ಮೆಂಟ್- 2,967 cm³

ಪವರ್- 184 kW (250 hp)

ಆರ್‌ಎಂಪಿ- 3,800-4,400 1/min

ಗರಿಷ್ಠ ಟರ್ಕ್ಯೂ (Nm) at rpm- 550 Nm

ಪೋರ್ಷೆ ಪನಮೆರಾ ಡೀಸೆಲ್ ಕಾರು ನಿರ್ವಹಣೆ

ಪೋರ್ಷೆ ಪನಮೆರಾ ಡೀಸೆಲ್ ಕಾರು ನಿರ್ವಹಣೆ

ಗರಿಷ್ಠ ಸ್ಪೀಡ್- 242 km/h

ವೇಗವರ್ಧನೆ 0-100 km/h - 6.8 s

ಗೇರ್ ವೇಗವರ್ಧನೆ 80 - 120 km/h- 4.5 s

ಪೋರ್ಷೆ ಪನಮೆರಾ ಡೀಸೆಲ್ ಕಾರು ಟ್ರಾನ್ಸ್‌ಮಿಷನ್

ಪೋರ್ಷೆ ಪನಮೆರಾ ಡೀಸೆಲ್ ಕಾರು ಟ್ರಾನ್ಸ್‌ಮಿಷನ್

ಲೇಔಟ್- ರಿಯರ್ ವೀಲ್ ಡ್ರೈವ್

8 ಸ್ಪೀಡ್ ಟಿಪ್‌ಟ್ರಾನಿಕ್ ಎಸ್- ಸ್ಟಾಂಡರ್ಡ್

ಪೋರ್ಷೆ ಪನಮೆರಾ ಡೀಸೆಲ್ ಕಾರು ಇಂಧನ ಬಳಕೆ / ಹೊರಸೂಸುವಿಕೆ

ಪೋರ್ಷೆ ಪನಮೆರಾ ಡೀಸೆಲ್ ಕಾರು ಇಂಧನ ಬಳಕೆ / ಹೊರಸೂಸುವಿಕೆ

ನಗರಗಳಲ್ಲಿ l/100 km- 8.1 (7.8*)

ಹೆಚ್ಚುವರಿ ನಗರ ಪ್ರದೇಶ l/100 km- 5.6 (5.5*)

ಜತೆಯಾಗಿ l/100 km- 6.5 (6.3*)

CO2 ಹೊರಸೂಸುವಿಕೆ g/km- 172 (167*)

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪೋರ್ಷೆ ಪನಮೆರಾ ಕಾರಿನ ಬೆಲೆ ದೆಹಲಿ ಎಕ್ಸ್‌ ಶೋರೂಂಗಳಲ್ಲಿ ಬರೋಬ್ಬರಿ ಒಂದು ಕೋಟಿ ರುಪಾಯಿಗಳಾಗಿವೆ.

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪೋರ್ಷೆ ಪನಮೆರಾ ಡೀಸೆಲ್ ಕಾರು

ಲಗ್ಷುರಿ ಲುಕ್, ಸ್ಟಾರ್ಟ್/ಸ್ಟಾಪ್ ಸಾಧನ, ಕಾಮನ್ ರೈಲ್ ಡೈರಕ್ಟ್ ಇಂಜೆಕ್ಷನ್‌ಗಳಂತ ಅತ್ಯಾರ್ಷಕ ಫೀಚರುಗಳನ್ನು ಕಾರು ಹೊಂದಿದೆ.

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪನಮೆರಾ ಡೀಸೆಲ್ ಎಂಜಿನ್ ಆರಾಮ ಚಾಲನೆ ಹಾಗೂ ಉತ್ತಮ ಮಾನದಂಡಗಳನ್ನು ಹೊಂದಿದೆ. ನಾಲ್ಕು ಡೋರ್ ವಾಹನ ಆಗಿರುವ ಪೋರ್ಷೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪೋರ್ಷೆ ಪನಮೆರಾ ಡೀಸೆಲ್ ಕಾರು

ಭಾರತ ಕ್ರಿಕೆಟ್‌ನ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರಿಗೆ ನೂತನ ಡೀಸೆಲ್ ಎಂಜಿನ್ ಪನಮೆರಾ ಕಾರಿನ ಕೀಲಿ ಹಸ್ತಾಂತರಿಸುವ ಮೂಲಕ ಪೋರ್ಷೆ ಇಂಡಿಯಾ ದೇಶಕ್ಕೆ ನೂತನ ಬ್ರಾಂಡ್ ಪರಿಚಯಿಸಿಕೊಟ್ಟಿದೆ.

ಪೋರ್ಷೆ ಪನಮೆರಾ ಡೀಸೆಲ್ ಕಾರು

ಪೋರ್ಷೆ ಪನಮೆರಾ ಡೀಸೆಲ್ ಕಾರು

ಇದು ಪೋರ್ಷೆ ಇಂಡಿಯಾದ ದೇಶದಲ್ಲಿನ ಮೊದಲ ಡೀಸೆಲ್ ಪನಮೆರಾ ಕಾರಿನ ವಿತರಣೆಯಾಗಿದೆ.

More from DriveSpark

Article Published On: Saturday, October 20, 2012, 12:41 [IST]
English summary
German based luxury carmaker Porsche India has the first-ever Panamera Diesel in the country to Cricket World Cup-winning former India captain and fast bowler Kapil Dev. Porsche India Director Anil Reddi handed over the car keys to Kapil on Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+