ಡೀಸೆಲ್ ಕಾರು ಬೊಂಬಾಟ್, ಪೆಟ್ರೋಲ್ ಕಾರಿಗೆ ಡಿಸ್ಕೌಂಟ್

ಪ್ರತಿಲೀಟರ್ ಪೆಟ್ರೋಲ್ 7.5 ರು. ದುಬಾರಿಯಾಗಿದೆ. ಎಲ್ಲೆಡೆ ಇಂಧನ ದರ ಹೆಚ್ಚಳದ ಕುರಿತೂ ಅಸಹನೆ ಜೋರಾಗಿದೆ. ಪ್ರತಿಪಕ್ಷ ಬಿಜೆಪಿ ಭಾರತ ಬಂದ್ ಕರೆಕೊಟ್ಟಿದೆ. ಜನರ ಆಕ್ರೋಶ ತಗ್ಗಿಸಲು ಕಾಂಗ್ರೆಸ್ ಸರಕಾರ ಪೆಟ್ರೋಲ್ ದರ ಒಂದೆರಡು ರು. ಇಳಿಕೆ ಮಾಡುವ ಸಂಭವವೂ ಇದೆ. ಪರಂತು ದ್ರವರೂಪದ ಬಂಗಾರದಂತೆ ಪೆಟ್ರೋಲ್ ಗೋಚರಿಸುತ್ತಿದೆ.

ಪೆಟ್ರೋಲ್ ಕಾರುಗಳ ಬೇಡಿಕೆಯೂ ಈಗಾಗಲೇ ಢಮಾರ್ ಆಗಿದೆ. ಇದೇ ಸಮಯದಲ್ಲಿ ಡೀಸೆಲ್ ಕಾರುಗಳ ಬೇಡಿಕೆಯೂ ಗಗನಕ್ಕೆ ನೆಗೆದಿದೆ. ಪೆಟ್ರೋಲಿಗಿಂತ ಡೀಸೆಲ್ ಸುಮಾರು 34 ರು.ನಷ್ಟು ಅಗ್ಗವಿದೆ. ಹೀಗಾಗಿ ಹೆಚ್ಚಿನ ಜನರು ಡೀಸೆಲ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಪೆಟ್ರೋಲ್ ಕಾರುಗಳಿಗೆ ಒಲ್ಲೆ ಎನ್ನುತ್ತಿದ್ದಾರೆ.

ನಿಮ್ಮ ದಿನನಿತ್ಯದ ಪ್ರಯಾಣದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿತಿಂಗಳು 450 ಕಿ.ಮೀ.ಗಿಂತ ಕಡಿಮೆ ಪ್ರಯಾಣಿಸುವರು ಆದರೆ ಪೆಟ್ರೋಲ್ ಕಾರು ಅಥವಾ ಅದಕ್ಕಿಂತ ಹೆಚ್ಚು ಕಿಲೋಮೀಟರ್ ಪ್ರಯಾಣಿಸುವಿರಾದರೆ ಡೀಸೆಲ್ ಕಾರು ಖರೀದಿಸಬಹುದು.

ದರ ಹೆಚ್ಚಳದ ನಡುವೆಯೂ ಪೆಟ್ರೋಲ್ ಕಾರು ಖರೀದಿಸಲು ನೀವು ಶೋರೂಂಗೆ ಹೋಗುವಿರಾದರೆ ನಿಮಗೆ ಸಾಕಷ್ಟು ಡಿಸ್ಕೌಂಟ್ ದೊರಕಬಹುದು. ಅಥವಾ ಇಲ್ಲಿ ಚೌಕಾಶಿ ಮಾಡಲೂ ಅವಕಾಶವಿದೆ. ಮಾರುತಿ ಸುಜುಕಿ ರಿಟ್ಜ್, ವ್ಯಾಗನಾರ್ ಸೇರಿದಂತೆ ಹಲವು ಪೆಟ್ರೋಲ್ ಕಾರುಗಳಿಗೆ ಕಂಪನಿಗಳು ದರ ವಿನಾಯಿತಿ ಮಾಡಿವೆ.

ಪೆಟ್ರೋಲ್ ಒಲ್ಲೆ ಎನ್ನುವರು ಡೀಸೆಲ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಜನಪ್ರಿಯ ಡೀಸೆಲ್ ಕಾರುಗಳಿಗೆ ಈಗಾಗಲೇ ಬೇಡಿಕೆ ಹೆಚ್ಚಿದೆ. ವೇಟಿಂಗ್ ಪಿರೆಯಿಡ್ ದೀರ್ಘವಾಗಿದೆ. ಹೆಚ್ಚುತ್ತಿರುವ ಬಡ್ಡಿದರ, ಹಣದುಬ್ಬರದ ನಾಗಲೋಟವು ಮುಂಬರುವ ದಿನಗಳಲ್ಲಿ ಪೆಟ್ರೋಲ್ ದರವನ್ನು ಇನ್ನಷ್ಟು ದುಬಾರಿ ಮಾಡಲಿದೆ. ಡೀಸೆಲ್ ದರದ ಲಗಾಮು ಯಾವಾಗ ಕಡಿದುಕೊಳ್ಳುವುದೋ ಹೇಳಲಾಗದು.

ಸದ್ಯಕ್ಕೆ ಡೀಸೆಲ್ ಕಾರುಗಳಿಗೆ ಇದು ಬೊಂಬಾಟ್ ಕಾಲ.

More from DriveSpark

Article Published On: Thursday, May 24, 2012, 17:13 [IST]
English summary
The latest petrol price hike will further take a beat on the already weak petrol car sales. The demand for diesel cars have been sky high. In the present scenario, carmakers will be compelled to offer huge discounts on their petrol cars to sell them off.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+