ಪ್ಯೂಜೊ ಸಿಟ್ರೋಯಿನ್ ಕಾರುಗಳು ಭಾರತಕ್ಕೆ ಬರೋದು ಡೌಟ್!!

ಇದರಿಂದ ಪ್ಯೂಜೊ ಕಂಪನಿಯು ದೇಶಕ್ಕೆ ಹೂಡಿಕೆ ಮಾಡುವ ನಿರೀಕ್ಷೆ ಹುಸಿಯಾಗಿದೆ. ಗುಜರಾತ್ ಘಟಕಕ್ಕೆ ಕಂಪನಿಯು 4,500 ಕೋಟಿ ರು. ಹೂಡಿಕೆ ಮಾಡುವುದಾಗಿ ಹೇಳಿತ್ತು. ಆರ್ಥಿಕ ಸ್ಥಿತಿಗತಿ ಪ್ರಗತಿ ಕಾಣದೇ ಕಂಪನಿಯು ದೇಶಕ್ಕೆ ಆಗಮಿಸುವ ಕುರಿತು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಇತ್ತೀಚೆಗೆ ಯುರೋಪಿನಲ್ಲಿ ವೆಚ್ಚ ಕಡಿತ ಮತ್ತು ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ಪ್ಯೂಜೊ ಪ್ರಕಟಿಸಿತ್ತು. ಇದರೊಂದಿಗೆ ಮುಂಬೈ ಕಚೇರಿಯನ್ನು ಮುಚ್ಚುವ ಇಂಗಿತವನ್ನೂ ಪ್ರಕಟಿಸಿತ್ತು. ಕಂಪನಿಯು ದೇಶದ ರಸ್ತೆಗೆ 508 ಸೆಡಾನ್ ಮತ್ತು 208 ಸೆಡಾನ್ ಪರಿಚಯಿಸಲು ಯೋಜಿಸಿತ್ತು. ಈ ಯೋಜನೆ ಹಲವು ತಿಂಗಳು ಅಥವಾ ಕೆಲವು ವರ್ಷ ಮುಂದಕ್ಕೆ ಹೋಗಲಿದೆ.
ಕಂಪನಿಯು ಮುಂದಿನ ದಿನಗಳಲ್ಲಿ ದೇಶದಲ್ಲಿ ಜಂಟಿ ಉದ್ಯಮದ ಮೂಲಕ ವಹಿವಾಟು ನಡೆಸುವ ಸಾಧ್ಯತೆಯೂ ಇದೆ. 90ರ ದಶಕದಲ್ಲಿ ಕಂಪನಿಯು ಪ್ರೀಮಿಯರ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಹಣಕಾಸು ಸಮಸ್ಯೆ ಮತ್ತು ಕಾರ್ಮಿಕರ ಸಮಸ್ಯೆಯಿಂದ ಈ ಮೈತ್ರಿ ಕಡಿದುಹೋಗಿತ್ತು.


Click it and Unblock the Notifications








