ಕಾಡುವ ರಾಜೇಶ್ ಖನ್ನಾ ಕಾರು ಹಾಡು

ರಾಜೇಶ್ ಖನ್ನಾ ಬಳಿಯಿದ್ದ ಕಾರು ಯಾವುದೆಂಬ ಕುತೂಹಲ ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಿಗೆ ಇರಬಹುದು. ಫಿಲ್ಮ್ ಶೂಟಿಂಗಿಗೆ ಹೋಗುವಾಗ ಮತ್ತು ನಿತ್ಯ ಬಳಕೆಗೆ ರಾಜೇಶ್ ಖನ್ನ ಎಂಜಿ ಸ್ಪೋರ್ಟ್ಸ್ ಕಾರು ಬಳಸುತ್ತಿದ್ದರು.
ಬಹುಶಃ ನಿಮಗೆ ರಾಜೇಶ್ ಖನ್ನಾ ನಟಿಸಿದ ಮೇರೆ ಜೀವನ್ ಸಾಥಿ(1972) ಚಿತ್ರದ ಚಾಲಾ ಜಾತಾ ಹೋ ಎಂಬ ಹಾಡು ನೆನಪಿನಲ್ಲಿರಬಹುದು. ಈ ಹಾಡಿನ ವಿಶೇಷವೆಂದರೆ ಈ ಹಾಡಿನ ಪೂರ್ತಿ ನಾಯಕ ಕಾರಿನಲ್ಲಿ ಸಂಚರಿಸುತ್ತ ಹಾಡುತ್ತಾನೆ.
ರಾಜೇಶ್ ಖನ್ನಾ ಈ ಹಾಡಿನಲ್ಲಿ ಕೆಂಪು ಕಾರೊಂದರಲ್ಲಿ, ಗುಡ್ಡಬೆಟ್ಟದ ರಸ್ತೆಯ ಹಾದಿಯಲ್ಲಿ ತನ್ಮಯರಾಗಿ ಹಾಡುತ್ತ ಸಾಗುತ್ತಾರೆ. ದಾರಿಯಲ್ಲಿ ಆತನ ಪ್ರೇಯಸಿ ಆಗಾಗ ಪ್ರತ್ಯಕ್ಷವಾಗುತ್ತ, ಮಾಯವಾಗುತ್ತ ಈತನ ಪ್ರೇಮದ ಹಾಡಿಗೆ ಹೆಜ್ಜೆ ಹಾಕುತ್ತಾಳೆ.
ರಾಜೇಶ್ ಖನ್ನಾರ ಕಾಡುವ ಕಾರು ಹಾಡಿಗಾಗಿ ಗೂಗಲ್ ಅಥವಾ ಯೂಟ್ಯೂಬಿಗೆ ಹೋಗಿ "ರಾಜೇಶ್ ಖನ್ನಾ ಕಾರ್ ಸಾಂಗ್" ಅಂತ ಹುಡುಕಿ.


Click it and Unblock the Notifications








