12/12/2016; ರಜನಿಕಾಂತ್ ಬರ್ತ್ ಡೇ ಸ್ಪೆಷಲ್
ಸೂಪರ್ ಸ್ಟಾರ್ ರಜನಿಕಾಂತ್ ಸ್ಟೈಲಿಷ್ ಕಾರು ಕಲೆಕ್ಷನ್
ಭಾರತ ಅತ್ಯಂತ ಪ್ರಸಿದ್ಧ ಚಲನಚಿತ್ರ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ಚಿತ್ರರಂಗವಲ್ಲದೇ ಹಿಂದಿ, ಕನ್ನಡ, ತೆಲುಗು ಚಿತ್ರದಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ. 1950ನೇ ಇಸವಿಯ ಡಿಸೆಂಬರ್ 12ರಂದು ಜನಿಸಿದ್ದ ರಜನಿ 66ರ ಹರೆಯಕ್ಕೆ ಕಾಲಿರಿಸಿದ್ದಾರೆ.
ಇವನ್ನೂ ಓದಿ: ಸ್ಟೈಲ್ ಕಿಂಗ್ ಲಿಂಗಾದಲ್ಲಿ ರಜನಿ ಕಾರು ಕಲರವ
ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಜೀವನ ಆರಂಭಿಸಿದ್ದ ರಜನಿಕಾಂತ್ ಆಮೇಲೆ ಚಲನಚಿತ್ರ ರಂಗವನ್ನು ಪ್ರವೇಶಿಸಿದ್ದರು. ಅಲ್ಲದೆ ರಜನಿ ಬಾಲ ಶಿಕ್ಷಣವನ್ನು ಬೆಂಗಳೂರಿನಲ್ಲೇ ಮುಗಿಸಿದ್ದರು ಎಂಬುದನ್ನು ಕನ್ನಡಿಗರು ಹೆಮ್ಮೆಯಿಂದಲೇ ಹೇಳಬಹುದಾಗಿದೆ. ಈ ಶಿವಾಜಿ ರಾವ್ ಗಾಯಕ್‌ವಾಡ್ ಕನ್ನಡ ಚಿತ್ರದಲ್ಲಿ ನಟಿಸಿದ್ದರೂ ತಮಿಳಿನಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಆ ಬಳಿಕ ಈ ಶಿವಾಜಿ ರಾವ್ ಗಾಯಕ್‌ವಾಡ್ ರಜನಿಕಾಂತ್ ಆದರು.
ಇವನ್ನೂ ಓದಿ: ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ
ಕನ್ನಡದಲ್ಲಿ ರಜನಿಕಾಂತ್ ಅಭಿನಯಿಸಿದ ಕಥಾಸಂಗಮ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಕುಂಕುಮ ರಕ್ಷೆ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ಸವಾಲಿಗೆ ಸವಾಲ್, ಪ್ರಿಯ ಹಾಗೂ ಘರ್ಜನೆ ಚಿತ್ರಗಳು ವಿಶೇಷ ಗಮನ ಸೆಳೆದಿದ್ದವು. ಈ ಪೈಕಿ ತಪ್ಪಿದ ತಾಳದಲ್ಲಿ ಕಮಲಹಾಸನ್ ಕೂಡಾ ನಟಿಸಿರುವುದು ಇನ್ನೂ ವಿಶೇಷವಾಗಿತ್ತು.
ಅಂದ ಹಾಗೆ ಇಷ್ಟೆಲ್ಲ ಖ್ಯಾತಿ ಹೊಂದಿರುವ ಹೊರತಾಗಿಯೂ ರಜನಿಕಾಂತ್ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ನಟನೊಬ್ಬ ಪ್ರತಿಷ್ಠೆ ಗಿಟ್ಟಿಸುತ್ತಿದ್ದಂತೆಯೇ ಐಷಾರಾಮಿ ಜೀವನವನ್ನು ನಡೆಸಲು ಪ್ರಾರಂಭಿಸುತ್ತಾನೆ. ಆದರೆ ಇದಕ್ಕೆ ತದ್ವಿರುದ್ಧವಾಗಿರುವಾಗ ರಜನಿ ಸರಳ ಜೀವನವನ್ನು ಇಷ್ಟಪಡುತ್ತಾರೆ.
ಕಾರು ಕಲೆಕ್ಷನ್ ವಿಷಯದಲ್ಲೂ ರಜನಿ ಸಿಂಪ್ಲಿಸಿಟಿ ಅನುಸರಿಸಿದ್ದಾರೆ. ಅನೇಕ ಸೆಲೆಬ್ರಿಟಿ ನಟರು ಲಗ್ಷುರಿ ಕಾರುಗಳನ್ನು ಹೊಂದಿದ್ದರೂ ರಜನಿ ಮಾತ್ರ ಅದೇ ಹಳೆಯ ಬಿಳಿ ಬಣ್ಣದ ಅಂಬಾಸಿಡರ್ ಕಾರನ್ನು ಇಷ್ಟಪಡುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ನಟ ಶಾರೂಖ್ ಖಾನ್ ಕೊಡುಗೆಯಾಗಿ ನೀಡಿದ್ದ ಬಿಎಂಡಬ್ಲ್ಯು ಕಾರನ್ನು ನಿರಾಕರಿಸಿದ್ದರು.
ಹಾಗಿದ್ದರೆ ಬನ್ನಿ ಈ ವಿಶೇಷ ಲೇಖನದಲ್ಲಿ ವಿವಿಧ ದಶಕಗಳಲ್ಲಿ ರಜನಿ ಹೊಂದಿದ್ದ ಕಾರುಗಳ ಬಗ್ಗೆ ನೋಡೋಣ.

ಪದ್ಮಿನಿಗೆ ಮನಸೋತ ಸ್ಟೈಲ್ ಕಿಂಗ್
1980ರ ದಶಕದಲ್ಲಿ ಸ್ಟೈಲ್ ಕಿಂಗ್ ರಜನಿಕಾಂತ್ ಪ್ರೀಮಿಯಂ ಪದ್ಮಿನಿ ಸೆಡಾನ್ ಕಾರಿನಲ್ಲಿ ಸಂಚರಿಸುತ್ತಿದ್ದರು. ಆ ಕಾಲದ ಅತ್ಯಂತ ಜನಪ್ರಿಯ ಕಾರು ಫಿಯೆಟ್ ಪದ್ಮಿನಿ ಆಗಿತ್ತು.

ಅಚ್ಚುಮೆಚ್ಚಿನ ಅಂಬಾಸಿಡರ್ ಕಾರು
ರಜನಿಕಾಂತ್ ಅಚ್ಚುಮೆಚ್ಚಿನ ಕಾರು ಬಿಳಿ ಬಣ್ಣದ ಅಂಬಾಸಿಡರ್ ಆಗಿದೆ. ಸರಳ ವ್ಯಕ್ತಿಯಾಗಿರುವ ರಜನಿಕಾಂತ್ ಈಗಲೂ ತಮ್ಮ ಕುಟಂಬದ ಜತೆ ಅಂಬಾಸಿಡರ್ ಕಾರಿನಲ್ಲೇ ಪ್ರಯಾಣಿಸುತ್ತಾರೆ. 90ರ ದಶಕದಲ್ಲಿ ರಜಿನಿ ಫೇವರಿಟ್ ಕಾರು ಅಂಬಾಸಿಡರ್ ಎನಿಸಿಕೊಂಡಿತ್ತು.

ಹೊಂಡಾ ಸಿವಿಕ್
ರಜನಿಕಾಂತ್ ಆ ಬಳಿಕ ಹೊಂಡಾ ಸಿವಿಕ್ ಖರೀದಿಸಿದರು. ಇದು ಕೂಡಾ ಉತ್ತಮ ನಿರ್ವಹಣೆಯನ್ನು ಹೊಂದಿದೆ.

ಇನ್ನೋವಾ ಸವಾರಿ
ಹಾಗಿದ್ದರೂ ಲಗ್ಷುರಿ ಕಾರುಗಳಿಂದ ದೂರವಾಗಿಯೇ ಉಳಿದಿದ್ದ ರಜನಿಕಾಂತ್ ಅಂತಿಮವಾಗಿ ಟೊಯೊಟಾ ಇನ್ನೋವಾ ಎಂಪಿವಿ ಖರೀದಿಸಿದ್ದರು.

ಶಾರೂಕ್ ಖಾನ್ ಕೊಡುಗೆ ತಿರಸ್ಕರಿಸಿದ ರಜನಿ
ರಾ ಒನ್ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಶಾರುಖ್ ಖಾನ್ ನೀಡಬೇಕೆಂದಿದ್ದ ಕಾರನ್ನು ಸೂಪರ್‌ಸ್ಟಾರ್ ರಜನಿಕಾಂತ್ ನಯವಾಗಿ ತಿರಸ್ಕರಿಸಿದ್ದರು. ಆತಿಥಿ ನಟನಾಗಿ ಅಭಿನಯಿಸಿದ್ದ ರಜಿನಿಗೆ ಬಿಎಂಡಬ್ಲ್ಯು ಐಷಾರಾಮಿ ಕಾರು ನೀಡಲು ಕಿಂಗ್ ಖಾನ್ ಮುಂದಾಗಿದ್ದರು. ಆದರೆ ಸರಳ ಜೀವಿಯಾಗಿರುವ ರಜನಿ ಕೊಡುಗೆಯನ್ನು ತಿರಸ್ಕರಿಸಿದ್ದರು.

ನಂಬರ್ ಗೇಮ್
ರಜನಿ ಹುಟ್ಟುಹಬ್ಬದ ದಿನ ಅತಿ ವಿಶೇಷವೆನಿಸಿದೆ. 12/12/2016ರಂದು 66ನೇ ಹರೆಯಕ್ಕೆ ಕಾಲಿರಿಸಿರುವ ರಜನಿ ಕಳೆದ ನಾಲ್ಕು ದಶಕಗಳಿಂದ ಸಿನೆಮಾ ರಂಗದಲ್ಲಿದ್ದಾರೆ.

ಇನ್ನೋವಾ ಕಾರಿನಲ್ಲಿ ಸ್ಟೈಲ್ ಕಿಂಗ್ ರಜನಿಕಾಂತ್

ಇನ್ನೋವಾ ಕಾರಿನಲ್ಲಿ ಸ್ಟೈಲ್ ಕಿಂಗ್ ರಜನಿಕಾಂತ್

ನಿಮ್ಮ ವಿಶೇಷವಾದ ಕಾಮೆಂಟ್ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಹುಟ್ಟುಹಬ್ಬದ ಶುಭಾಯಶಗಳನ್ನು ತಿಳಿಸಿರಿ...


Click it and Unblock the Notifications








