ಸ್ಕೋಡಾ ರಾಪಿಡ್ ಬೆಂಕಿ ಅನಾಹುತ: ರಹಸ್ಯ ಬಹಿರಂಗ
ಘಟನೆಗೆ ಕಾರಣವೇನು? ಕಂಪನಿ ಹೇಳುವ ಪ್ರಕಾರ ಇದು ಕಾರಿನ ತಾಂತ್ರಿಕ ಸಮಸ್ಯೆಯಿಂದ ಉಂಟಾದ ಅಗ್ನಿ ಆಕಸ್ಮಿಕವಲ್ಲ. ಕಾರಿನೊಳಗೆ ಕಾರು ಮಾಲಿಕ ಅಳವಡಿಸಿರುವ ಕಡಿಮೆ ದರ್ಜೆಯ ಗ್ಯಾಡ್ಜೆಟ್ ಸಾಧನಗಳಿಂದ ಬೆಂಕಿ ಆಕಸ್ಮಿಕವುಂಟಾಗಿದೆಯೆಂದು ಸ್ಕೋಡಾ ಹೇಳಿದೆ.
ಆಡಿಯೋ ಸಿಸ್ಟಮ್ ಅಥವಾ ಇನ್ನಿತರ ಅಗ್ಗದ ದರ್ಜೆಯ ಉತ್ಪನ್ನಗಳ ಬಳಕೆಯಿಂದಾಗಿ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂಧು ಕಂಪನಿ ಹೇಳಿದೆ. ಇಂತಹ ಸಾಧನಗಳನ್ನು ಅನಾನುಭವಿಗಳು ಕಾರಿಗೆ ಜೋಡಿಸಿರುವುದು ಕೂಡ ಇಂತಹ ಘಟನೆಗೆ ಕಾರಣವಾಗಿದೆ. ಅಂದರೆ ವೈರ್ ಇತ್ಯಾದಿಗಳನ್ನು ಸಮರ್ಪಕವಾಗಿ ಜೋಡಿಸದೆ ಇದ್ದರೆ ಇಂತಹ ಅನಾಹುತ ಸಂಭವಿಸುತ್ತದೆ.
ಈ ಘಟನೆಯ ಹಿನ್ನಲೆಯಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯುತ್ತಮ ಗ್ಯಾಡ್ಜೆಟ್ ಸಾಧನಗಳನ್ನು ಮಾತ್ರ ಬಳಸುವಂತೆ ಕಿವಿಮಾತು ಹೇಳಿದೆ. ಕಂಪನಿಯ ಡೀಲರ್ಷಿಪ್ ಮಳಿಗೆಗಳಿ ದೊರಕುವ ಕಂಪನಿ ಸೂಚಿಸಿರುವ ಸಮರ್ಪಕ ಸಾಧನಗಳನ್ನು ಬಳಸಬೇಕು. ರಸ್ತೆಬದಿಯಲ್ಲಿ ಅಗ್ಗದ ಸಾಧನಗಳನ್ನು ಬಳಸಕೂಡದು. ಉತ್ತಮ ಸಾಧನಗಳನ್ನು ಸರಿಯಾಗಿ ಫಿಟ್ ಮಾಡಲು ಅನುಭವಿಗಳ ನೆರವು ಪಡೆಯಬೇಕು ಎಂದು ಕಂಪನಿ ಸೂಚಿಸಿದೆ.


Click it and Unblock the Notifications









