ಕೂಸು ನೋಡೋಕೆ ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಟಾಟಾ ಬಂದಿದ್ರು!

2008ನೇ ಇಸವಿ, ಜನವರಿ ಹನ್ನೆರಡನೇ ತಾರೀಖು. ನಾನು ಆಸ್ಪತ್ರೆಯಲ್ಲಿರಬೇಕಿತ್ತು. ಆದರೆ ಡಾಕ್ಟರ್ ಜೊತೆ ಸ್ಟ್ರೆಚರ್(ಕೈ ಮಂಚ) ಮೇಲೆ ಮಲಗಿಕೊಂಡು ಅಲ್ಲಿಗೆ ಬಂದುಬಿಟ್ಟಿದ್ದೆ. ಇಂಜೆಕ್ಷನ್ ಪವರಿನಿಂದ ನಾನು ಮರಗಟ್ಟಿ ಹೋಗಿದ್ದೆ. ಆದರೂ ನನ್ನ ಕನಸಿನ ಕಂದನನ್ನು ಮುಟ್ಟಿಬಿಟ್ಟೆ. ಆಗ ನನಗೆ ಸ್ಪರ್ಷ ಜ್ಞಾನವಿರಲಿಲ್ಲ.

ರತನ್ ಟಾಟಾ ಭಾವುಕರಾಗಿ ಆ ದಿನವನ್ನು ನೆನಪಿಸಿಕೊಳ್ಳುತ್ತಿದ್ದರೆ ಎಲ್ಲರೂ ಮೈಮರೆತು ಕೇಳುತ್ತಿದ್ದರು. ಅದು ಜಿನಿವಾ ವಾಹನ ಪ್ರದರ್ಶನ. ವಿಶ್ವದ ಅಗ್ಗದ ಮೊದಲ ಕಾರು "ನ್ಯಾನೊ" ಪ್ರಪ್ರಥಮ ಬಾರಿಗೆ ಅನಾವರಣಗೊಂಡ ಸಂದರ್ಭವನ್ನು ರತನ್ ಟಾಟಾ ನೆನಪಿಸಿಕೊಳ್ಳುತ್ತಿದ್ದರು.

"ಸ್ಪರ್ಷ ಜ್ಞಾನವಿಲ್ಲದಿದ್ದರೂ ಕಾರು ಟಚ್ ಮಾಡಿ ಅನಾವರಣ ಮಾಡಿದೆ. ನಾನು ಭಾಷಣ ಮಾಡಿದೆ. ಫೋಟೊ ಶೂಟಿಗೂ ಪೋಸ್ ಕೊಟ್ಟೆ. ಮತ್ತೆ ಬಂದು ಸ್ಟ್ರೆಚರ್ ಮೇಲೆ ಮಲಗಿಬಿಟ್ಟೆ. ಮತ್ತೆ ಸ್ಟ್ರೆಚರ್ ಮೇಲೆ ಮಲಗಿ ಪ್ರೆಸ್ ಕಾನ್ಪರೆನ್ಸಿಗೆ ಹೋದೆ. ನಂತರ ಕೈಮಂಚದಲ್ಲೇ ಬಾಂಬೆ ಆಸ್ಪತ್ರೆಗೆ ಹೋದೆ" ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರತನ್ ಟಾಟಾ ಆ ದಿನಗಳನ್ನು ನೆನಪಿಸಿಕೊಂಡರು.

ನ್ಯಾನೊ ಬಿಡುಗಡೆಯಂದು ಮಾಡಿದ ಈ ಬಲವಂತದ ಪ್ರಯಾಣ ರತನ್ ಟಾಟಾ ಬೆನ್ನಿಗೆ ತುಂಬಾ ಹಾನಿ ಮಾಡಿತ್ತು. ಅದರಿಂದ ಸುಧಾರಿಸಿಕೊಳ್ಳಲು ತುಂಬಾ ದಿನ ಬೇಕಾಯಿತು ಎಂದು ರತನ್ ಟಾಟಾ ನೆನಪಿಸಿಕೊಂಡರು.

"ಆ ಕಾರಿನ ಬಿಡುಗಡೆಯಂದು ಸಾಕಷ್ಟು ಜನರು ಅದ್ಭುತವಾಗಿರುವುದನ್ನು ನೋಡುವಂತೆ ನ್ಯಾನೊ ಕಾರನ್ನು ನೋಡುತ್ತಿದ್ದರು. ಜಪಾನ್ ಮತ್ತು ಕೊರಿಯಾ ಕ್ಯಾಮರಾಗಳು ಕಾರಿನ ತುಣುಕು ತುಣುಕುಗಳನ್ನು ಪರಿಶೀಲಿಸುತ್ತಿತ್ತು. ಎಂಜಿನಿಯರುಗಳು ಕಾರನ್ನು ಮನಸ್ಸಲ್ಲೇ ಸ್ಕ್ಯಾನ್ ಮಾಡುತ್ತಿದ್ದರು. ಇದು ನಿಜವಾದ ಕಾರೇ ಎನ್ನುವುದು ಎಲ್ಲರ ಡೌಟ್ ಆಗಿತ್ತು" ಎಂದು ನ್ಯಾನೊ ಪ್ರಪ್ರಥಮ ಬಾರಿಗೆ ಜಗತ್ತಿಗೆ ಪರಿಚಯಿಸಿದ ಸಂದರ್ಭವನ್ನು ರತನ್ ಟಾಟಾ ನೆನಪಿಸಿಕೊಂಡರು.

2008ರ ಮೊದಲ ತಿಂಗಳಲ್ಲಿ ಟಾಟಾ ನ್ಯಾನೊ ರಸ್ತೆಗಿಳಿದಿತ್ತು. ನಂತರದ ಕೆಲವು ತಿಂಗಳಲ್ಲಿ ಇದು ಜಗತ್ತಿನ ವಿವಿಧ ದೇಶಗಳಲ್ಲಿ ಅನಾವರಣಗೊಂಡಿತ್ತು.

ಕಂಪನಿಯು ನ್ಯಾನೊ ಕಾರಿನ ಕುರಿತು ಸಾಕಷ್ಟು ಮಹತ್ವಾಕಾಂಕ್ಷೆ ಹೊಂದಿದೆ ಎಂದು ಕಳೆದ ವಾರವಷ್ಟೇ ರತನ್ ಟಾಟಾ ಹೇಳಿದ್ದರು. ನ್ಯಾನೊ ಕಾನ್ಸೆಪ್ಟ್ ನಲ್ಲೇ ಟಾಟಾ ಪಿಕ್ಸೆಲ್ ಮತ್ತು ಮೆಗಾ ಪಿಕ್ಸೆಲ್ ಎಂಬೆರಡು ಅಚ್ಚರಿಯ ಕಾನ್ಸೆಪ್ಟ್ ಕಾರುಗಳನ್ನು ಕಂಪನಿ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಸಿಸಿಯ ನ್ಯಾನೊ ಕಾರನ್ನು ಕೂಡ ಕಂಪನಿ ಪರಿಚಯಿಸಲಿದೆಯಂತೆ.

ಇಷ್ಟು ಮಾತ್ರವಲ್ಲದೇ ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೊ ಕಾರು ಮುಂದಿನ ದಿನಗಳಲ್ಲಿ ರಸ್ತೆಗಿಳಿಯುವ ಸೂಚನೆಯನ್ನೂ ರತನ್ ಟಾಟಾ ನೀಡಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, March 12, 2012, 12:58 [IST]
English summary
Tata Motors and Tata Group chairman Ratan Tata has said that he was so unwell with back pain before the launch of the Tata Nano in 2008 that he was on a stretcher just before the unveiling. Doctors had given him pain killers so that he could unveil his dream car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+