ಸೀಮೆ ಮೀರಿದ ರತನ್ ಟಾಟಾ ಕಾರು ಪ್ರೇಮ
ನಮ್ಮ ಭಾರತದಲ್ಲೇ ಪೂರ್ಣವಾಗಿ ತಯಾರಿಸಿದ ದೇಸಿಕಾರನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಒದಗಿಸಬೇಕೆಂಬ ಕನಸನ್ನು ಹೊತ್ತುಕೊಂಡಿದ್ದ ಕೊನೆಗೂ ತಮ್ಮ ಕನಸನ್ನು ಟಾಟಾ ನ್ಯಾನೋ ಮೂಲಕ ಸಾಕಾರಗೊಳಿಸಿದ ಟಾಟಾ ಸಂಸ್ಥೆಯ ಮಾಜಿ ಮುಖ್ಯಸ್ಥ ರತನ್ ನಾವಲ್ ಟಾಟಾ 'ಅಪ್ಪಟ ದೇಶಪ್ರೇಮಿ' ಅಂದರೆ ತಪ್ಪಾಗಲಾರದು.
ಸದ್ಯ ತಮ್ಮ ನಿವೃತ್ತಿ ಜೀವನದಲ್ಲೂ ಟಾಟಾ ಸನ್ಸ್ ಹಾಗೂ ಟಾಟ ಟ್ರಸ್ಟ್ ಮುಖ್ಯಸ್ಥರಾಗಿ ಸೇವೆಯನ್ನು ನೀಡುತ್ತಿರುವ 77ರ ಹರೆಯದ ರತನ್ ಟಾಟಾ 1991ರಿಂದ 2012ರ ವರೆಗೆ 21 ವರ್ಷಗಳ ಕಾಲ ಟಾಟಾ ಮುಖ್ಯಸ್ಥರಾಗಿ ದುಡಿದಿದ್ದರು. ಅಂದ ಹಾಗೆ ರತನ್ ಟಾಟಾ ಬಳಿಕ ಕೆಲವು ಆಕರ್ಷಕ ಕಾರು ಸಂಗ್ರಹಗಳಿವೆ. ಇವುಗಳನ್ನು ತಿಳಿದುಕೊಳ್ಳಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಫೆರಾರಿ ಕ್ಯಾಲಿಫೋರ್ನಿಯಾ
ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆ ನಿರ್ಮಿಸುತ್ತಿರುವ ಫೆರಾರಿ ಕ್ಯಾಲಿಫೋರ್ನಿಯಾ ಗ್ರಾಂಡ್ ಟೂರಿಂಗ್ ಸ್ಪೋರ್ಟ್ಸ್ ಕಾರು 2008ನೇ ಇಸವಿಯಿಂದಲೇ ಮಾರುಕಟ್ಟೆಯಲ್ಲಿದೆ. ಇದು ಎರಡು ಡೋರ್ ಗಳ ಆಸನ ವ್ಯವಸ್ಥೆಯನ್ನು ಹೊಂದಿದೆ.

ಫೆರಾರಿ ಕ್ಯಾಲಿಫೋರ್ನಿಯಾ
ಪಿನಿನ್ ಫರಿನಾ ಡಿಸೈನ್ ತಳಹದಿಯಲ್ಲಿ ನಿರ್ಮಾಣವಾಗಿರುವ ಫೆರಾರಿ ಕ್ಯಾಲಿಫೋರ್ನಿಯಾದಲ್ಲಿ 4.3 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದ್ದು, 460 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕಾರಿನ ಎಕ್ಸ್ ಶೋ ರೂಂ ಬೆಲೆ 2.20 ಕೋಟಿ ರು.ಗಳಷ್ಟಿದೆ.

ಹೋಂಡಾ ಸಿವಿಕ್
ಜಪಾನ್‌ನ ಹೋಂಡಾ ಸಂಸ್ಥೆಯಿಂದ ತಯಾರಾಗುತ್ತಿರುವ ಸಿವಿಕ್ ಕಾರಿನ ಮಾರಾಟ ಸದ್ಯ ಭಾರತದಲ್ಲಿಲ್ಲ. ಆದರೆ ಎಲ್ಲ ಹೊಸ ರೂಪಗಳೊಂದಿಗೆ ಸದ್ಯದಲ್ಲೇ ರಿ ಎಂಟ್ರಿ ಕೊಡುವ ಸಾಧ್ಯತೆಯಿದೆ. ಪ್ರಸ್ತುತ ಸೆಡಾನ್ ಕಾರು 1972ರಿಂದಲೇ ಮಾರುಕಟ್ಟೆಯಲ್ಲಿದೆ. ಇದು ರತನ್ ಬಳಿಯಿರುವ ಹಳೆಯ ಕಾರುಗಳಲ್ಲಿ ಒಂದಾಗಿದೆ.

ಹೋಂಡಾ ಸಿವಿಕ್
2015 ನ್ಯೂಯಾರ್ಕ್ ಆಟೋ ಶೋದಲ್ಲಿ ಪರಿಷ್ಕೃತ ಸಿವಿಕ್ ಕಾರು ಭರ್ಜರಿ ಪ್ರದರ್ಶನ ಕಂಡಿತ್ತು. ಅಮೆರಿಕ ಹಾಗೂ ಕೆನಡಾದಲ್ಲಿ ಭಾರಿ ಯಶಸ್ಸು ಸಾಧಿಸಿರುವ ಸಿವಿಕ್, ಹೋಂಡಾ ಸಂಸ್ಥೆಯ ಅತ್ಯಂತ ಯಶಸ್ಸಿನ ಕಾರುಗಳಲ್ಲಿ ಒಂದಾಗಿದೆ.

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್
ಬ್ರಿಟನ್ ನ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯ ಲ್ಯಾಂಡ್ ರೋವರ್ ನಿಂದ ನಿರ್ಮಾಣವಾಗಿರುವ ಐಷಾರಾಮಿ ಕ್ರೀಡಾ ಬಳಕೆಯ ವಾಹನ ಇದಾಗಿದೆ. ಇದು 1997ನೇ ಇಸವಿಯಿಂದಲೇ ಮಾರುಕಟ್ಟೆಯಲ್ಲಿದ್ದು, ಟು ವೀಲ್ ಜೊತೆಗೆ ಫೋರ್ ವೀಲ್ ಚಾಲನಾ ಆಯ್ಕೆಯೊಂದಿಗೆ ಲಭ್ಯವಿರುತ್ತದೆ.

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್
ಪ್ರಸ್ತುತ ಲ್ಯಾಂಡ್ ರೋವರ್ 2 ಮಾರಾಟದಲ್ಲಿದೆ. ಇದರ ಮೊನೊಕಾಕ್ ದೇಹ ರಚನೆಯು ವಾಹನಕ್ಕೆ ಹೆಚ್ಚಿನ ಸ್ಥಿರತೆಯನ್ನು ಪ್ರದಾನ ಮಾಡುತ್ತದೆ. ಇದು 2.2 ಸಿಸಿ 4 ಸಿಲಿಂಡರ್ ಇನ್ ಲೈನ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಲ್ಯಾಂಡ್ ರೋವರ್ ಚಾಲನೆ ಅತ್ಯುತ್ತಮವಾಗಿದ್ದು, ಕೆಂಪು ಹೋದಿಕೆಯನ್ನು ಹೆಚ್ಚು ಇಷ್ಟಪಟ್ಟಿರುವುದಾಗಿ ತಿಳಿಸಿದ್ದಾರೆ.

ಟಾಟಾ ಇಂಡಿಗೊ ಮರಿನಾ
ಇಂಡಿಗೊ ಮರಿನಾ ಹೆಚ್ಚು ಸ್ಥಳಾವಕಾಶಯುಕ್ತ ಎಸ್ಟೇಟ್ ಕಾರಾಗಿದೆ. ಈ ಮೂಲಕ ತಮ್ಮ ನೆಚ್ಚಿನ ಕಾರು ಬ್ರಾಂಡ್ ಸಂಸ್ಥೆಯನ್ನು ರತನ್ ಟಾಟಾ ಅವರು ಮನಸಾರೆ ಮೆಚ್ಚಿಕೊಂಡಿದ್ದಾರೆ.

ಟಾಟಾ ಇಂಡಿಗೊ ಮರಿನಾ
ಈ ಸಂಬಂಧ ಹೇಳಿಕೆ ಕೊಟ್ಟಿರುವ ರತನ್ ಟಾಟಾ, ಹಿಂದುಗಡೆ ಸೀಟನ್ನು ತೆರವುಗೊಳಿಸಿದರೆ ತನ್ನ ಶ್ವಾನಗಳಿಗೆ ಪರಿಪೂರ್ಣ ಸ್ಥಳಾವಾಕಾಶ ಒದಗುತ್ತದೆ ಎಂದಿದ್ದಾರೆ.

ಮಸೆರಟಿ ಕ್ವಾಟ್ರೊಪೋರ್ಟ್
ಮಸೆರಟಿ ಕ್ವಾಟ್ರೊಪೋರ್ಟ್ ನಾಲ್ಕು ಬಾಗಿಲುಗಳ ಐಷಾರಾಮಿ ಸೆಡಾನ್ ಕಾರಾಗಿದೆ. ಇದನ್ನು ಇಟಲಿಯ ಮಗದೊಂದು ಐಷಾರಾಮಿ ಕಾರು ಸಂಸ್ಥೆಯಾಗಿರುವ ಮಸೆರಟಿ ನಿರ್ಮಿಸುತ್ತಿದೆ.

ಮಸೆರಟಿ ಕ್ವಾಟ್ರೊಪೋರ್ಟ್
1963ನೇ ಇಸವಿಯಿಂದಲೇ ಮಾರಾಟದಲ್ಲಿರುವ ಮಸೆರಟಿ ಕ್ವಾಟ್ರೊಪೋರ್ಟ್ ಕಾರನ್ನು ಟಾಟಾ ಇಷ್ಟಪಡಲು ಕಾರಣವೊಂದಿದೆ. ಇದು ಫೆರಾರಿಗಿಂತಲೂ ಮೃದುವಾಗಿದೆ ಎಂದವರು ಅಭಿಪ್ರಾಯಪಡುತ್ತಾರೆ.

ಕ್ಯಾಡಿಲಿಕ್ ಎಕ್ಸ್ ಎಲ್ ಆರ್
ರತನ್ ಟಾಟಾ ಅವರ ನೆಚ್ಚಿನ ರೋಡ್ ಸ್ಟರ್ ವಾಹನಗಳಲ್ಲಿ ಕ್ಯಾಡಿಲಿಕ್ ಎಕ್ಸ್ ಎಲ್ ಆರ್ ಒಂದಾಗಿದೆ. ಇದರ ವೇಗವರ್ಧನೆಯು ತುಂಬಾನೇ ಪರಿಣಾಮಿಕಾರಿಯಾಗಿದೆ ಎಂದುವರು ಅಭಿಪ್ರಾಯಪಡುತ್ತಾರೆ.

ಕ್ಯಾಡಿಲಿಕ್ ಎಕ್ಸ್ ಎಲ್ ಆರ್
ಅಂದ ಹಾಗೆ ಜನರಲ್ ಮೋಟಾರ್ಸ್ ನ ಕ್ಯಾಡಿಲಿಕ್ ವಿಭಾಗವು ಈ ಐಷಾರಾಮಿ ರೋಡ್ ಸ್ಟರ್ ಕಾರನ್ನು ನಿರ್ಮಿಸುತ್ತಿದೆ. ಇದು ತನ್ನದೇ ಆದ ವಿಶಿಷ್ಟ ವಿನ್ಯಾಸ, ಸಸ್ಪೆಷನ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಝ್ 550 ಎಸ್ ಎಲ್
ಮರ್ಸಿಡಿಸ್ ಬೆಂಝ್ 500 ಎಸ್ ಎಲ್ ಅತಿ ಹಳೆಯ ಹಾಗೂ ಅಷ್ಟೇ ಸುಂದರವಾದ ಕಾರುಗಳಲ್ಲಿ ಒಂದಾಗಿದೆ. ಬೆಂಝ್ ಎಸ್ ಕ್ಲಾಸ್ ಗ್ರಾಂಡ್ ಟೂರರ್ ಕಾರುಗಳನ್ನು ಜರ್ಮನಿಯ ಈ ಐಕಾನಿಕ್ ಸಂಸ್ಥೆಯು 1954ನೇ ಇಸವಿಯಿಂದಲೇ ನಿರ್ಮಿಸುತ್ತದೆ.

ಮರ್ಸಿಡಿಸ್ ಬೆಂಝ್ 550 ಎಸ್ ಎಲ್
ಮರ್ಸಿಡಿಸ್ ಬೆಝ್ 500 ಎಸ್ ಎಲ್ ಕಾರಿನಲ್ಲಿ 5.0 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದೆ. ಇದು ಕೂಡಾ ರತನ್ ಅವರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ.

ಕ್ರೈಸ್ಲರ್ ಸೆಬ್ರಿಂಗ್
ಅಮೆರಿಕದ ಕ್ರೈಸ್ಲರ್ ಸಂಸ್ಥೆಯು ದುಬಾರಿ ಕ್ರೈಸ್ಲರ್ ಸೆಬ್ರಿಂಗ್ ಕಾರನ್ನು ನಿರ್ಮಿಸುತ್ತಿದೆ. ಇದು ಈಗಾಗಲೇ ಹಲವಾರು ತಲೆಮಾರಿನ ಮಾದರಿಗಳನ್ನು ಹಾದು ಹೋಗಿವೆ.

ಕ್ರೈಸ್ರರ್ ಸೆಬ್ರಿಂಗ್
ಪ್ರಸ್ತುತ ಕಾರಿನ ಬಣ್ಣ ತಮಗೆ ತುಂಬಾನೇ ಇಷ್ಟವಾಗಿದೆ ಎಂದು ರತನ್ ಅಭಿಪ್ರಾಯಪಡುತ್ತಾರೆ. ಅಲ್ಲದೆ 1998ರಲ್ಲಿ ಜಿನೆವಾದಲ್ಲಿ ಪ್ರದರ್ಶನ ಕಂಡಿದ್ದ ಇಂಡಿಕಾದಲ್ಲೂ ಇದಕ್ಕೆ ಸಮಾನವಾದ ಬಣ್ಣ ಬಳಿಯಲಾಗಿತ್ತು ಎಂದಿದ್ದಾರೆ.

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್
ಜರ್ಮನಿಯ ಮರ್ಸಿಡಿಸ್ ಬೆಂಝ್‌ನ ಎಸ್ ಕ್ಲಾಸ್ ಮಾದರಿಯನ್ನು ರತನ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇದರೆ ಚಾಲನೆ ರತನ್ ಮೆಚ್ಚುಗೆಗೆ ಪಾತ್ರವಾಗಿದೆ.

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್
ಬೆಂಝ್ ಎಸ್ ಕ್ಲಾಸ್ ಸಹ ಹಲವಾರು ದಶಕಗಳಿಂದ ಮಾರಾಟದಲ್ಲಿದ್ದು ಆಕರ್ಷಕ ವಿನ್ಯಾಸ, ಹೊರಮೈ, ನಿರ್ವಹಣೆಗಾಗಿ ಹೆಸರು ಮಾಡಿದೆ.

ಜಾಗ್ವಾರ್ ಎಫ್ ಟೈಪ್
ಕಾಕತಾಳೀಯವೆಂದರೆ ಪ್ರಸ್ತುತ ಜಾಗ್ವಾರ್ ಮಾಲಿಕತ್ವವನ್ನು ಟಾಟಾ ಸಂಸ್ಥೆ ಹೊಂದಿದೆ. ಇದೇ ರತನ್ ಅವರಿಗೆ ಜಾಗ್ವಾರ್ ಮೇಲಿನ ಪ್ರೀತಿಗೆ ಕಾರಣವಾಗಿರಬಹುದು.

ಜಾಗ್ವಾರ್ ಎಫ್ ಟೈಪ್
ಎರಡು ಸೀಟುಗಳ ಜಾಗ್ವಾರ್ ಎಫ್ ಟೈಪ್ ಸ್ಪೋರ್ಟ್ಸ್ ಕಾರು ಆರಂಭದಲ್ಲಿ ಸಾಫ್ಟ್-ಟಾಪ್ ಕನ್ವರ್ಟಿಬಲ್ ಶೈಲಿಯಲ್ಲಿ ಬಿಡುಗಡೆಯಾಗಿದ್ದರೆ ಬಳಿಕ ಕೂಪೆ ಶೈಲಿಯನ್ನು ಪಡೆದುಕೊಂಡಿತ್ತು.

ಜಾಗ್ವಾರ್ ಎಕ್ಸ್ ಎಫ್ ಆರ್
ನೀವು 5.0 ಲೀಟರ್ ಸೂಪರ್ ಚಾರ್ಜ್ಡ್ ಹ್ಯಾಂಡ್ಲಿಂಗ್ ಹಾಗೂ ನಿರ್ವಹಣೆಯನ್ನು ಆನಂದಿಸಲು ಬಯಸುದಾದ್ದಲ್ಲಿ ಎಕ್ಸ್ ಕ್ಲೂಸಿವ್ 'ಆರ್' ಬಾಡಿ ಶೈಲಿಯೊಂದಿಗೆ ಜಾಗ್ವಾರ್ ಎಕ್ಸ್ ಎಫ್ ಆರ್ ನಿಮ್ಮ ಮನ ಸೆಳೆಯಲಿದೆ.

ಒಟ್ಟಿನಲ್ಲಿ ಟಾಟಾ ಬಳಿ ಅನೇಕ ಕಾರುಗಳಿದ್ದು, ಅವರ ಪ್ರೀತಿಯು ಕೇವಲ ಒಂದು ವಾಹನ ತಯಾರಿಕ ಸಂಸ್ಥೆಗಷ್ಟೇ ಸೀಮಿತಗೊಂಡಿಲ್ಲ ಎಂಬುದು ಸಾಬೀತಾಗಿದೆ.


Click it and Unblock the Notifications








