ರತನ್ ಟಾಟಾಗೆ ಬ್ರಿಟನ್‌ನ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ಗೌರವ
ಟಾಟಾ ಮೋಟಾರ್ಸ್ ಯಶಸ್ಸಿನಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವ ರತನ್ ಟಾಟಾ, ಬ್ರಿಟನ್‌ನ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದ್ದಾರೆ. ಹೌದು, ಟಾಟಾ ಸಂಸ್ಥೆಯ ನಿವೃತ್ತ ಮುಖ್ಯಸ್ಥರಾಗಿರುವ ರತನ್ ಟಾಟಾ, ನೈಟ್ ಗ್ರಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟನ್ ಎಂಪೈರ್ (ಜಿಬಿಇ) ಪ್ರಶಸ್ತಿಗೆ ಭಾಜನವಾಗಿದ್ದಾರೆ.
ಬ್ರಿಟನ್ ಹಾಗೂ ಭಾರತ ನಡುವಣ ಬಾಂಧವ್ಯದಲ್ಲಿ ರತನ್ ಟಾಟಾ ಕೊಡುಗೆಯನ್ನು ಗುರುತಿಸಿಕೊಂಡು ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಹೆಚ್ಚಿನ ಹೂಡಿಕೆ ಮಾಡಿರುವುದಾಗಿ ಬ್ರಿಟನ್ ಹೈ ಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1950ರ ಗಣರಾಜ್ಯ ಭಾರತ ಸ್ಥಾಪನೆಯ ಬಳಿಕ ಬ್ರಿಟನ್‌ನ ಗರಿಷ್ಠ ಜಿಬಿಇ ಪ್ರಶಸ್ತಿಗೆ ಭಾಜನರಾದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ರತನ್ ಟಾಟಾ ಪಾತ್ರವಾಗಿದ್ದಾರೆ. ಇದಕ್ಕೂ ಮೊದಲು 2009ರಲ್ಲಿ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (ಕೆಬಿಇ) ಪ್ರಶಸ್ತಿಗೂ ಅರ್ಹವಾಗಿದ್ದರು.
ಇದರಂತೆ ನಡೆದ ಸಮಾರಂಭದಲ್ಲಿ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ II ಪರವಾಗಿ ಬ್ರಿಟನ್ ಹೈ ಕಮಿಷನರ್ ಜೇಮ್ಸ್ ಬೆವನ್, ರತನ್ ಟಾಟಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರತನ್ ಟಾಟಾ ಅವರ ನಾಯಕತ್ವ, ದೂರದೃಷ್ಟಿ ಹಾಗೂ ಸಮಗ್ರತೆಯು ಬ್ರಿಟನ್ ಹಾಗೂ ಭಾರತ ವ್ಯಾಪಾರ ಸಂಬಂಧದಲ್ಲಿ ಶ್ರೇಷ್ಠ ಗುಣಮಟ್ಟ ಕಾಯ್ದುಕೊಂಡಿದೆ ಎಂದಿದ್ದಾರೆ. ಭಾರತ-ಬ್ರಿಟನ್ ಬಾಂಧವ್ಯದಲ್ಲಿ ಟಾಟಾ ಕೊಡುಗೆಯನ್ನು ಬೆಲೆಕಟ್ಟಲಾಗದು ಎಂದು ಸಹ ಸೇರಿಸಿದರು.
ಬ್ರಿಟನ್‌ನಲ್ಲಿ ಮುಳುಗು ದೋಣಿಯಾಗಿದ್ದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಸಂಸ್ಥೆಯನ್ನು ಪುನರ್ ರೂಪಿಸುವಲ್ಲಿ ಟಾಟಾ ಪಾಲು ಮಹತ್ತರಾಗಿತ್ತು.


Click it and Unblock the Notifications








