ಒಂದೇ ವರ್ಷದಲ್ಲಿ ಒಂದು ಮಿಲಿಯನ್ ಕಾರು ಮಾರಾಟ ಮಾಡಿದ ಟಾಟಾ ಮೋಟಾರ್ಸ್
ದೇಶಿಯ ಮಾರುಕಟ್ಟೆಯಲ್ಲಿ ವಾರಕ್ಕೊಂದು ವಾಹನವು ಬಿಡುಗಡೆಯಾಗಿತ್ತಿರುವ ಕಾರಣ ಗ್ರಾಹಕರಲ್ಲಿ ಯಾವ ವಾಹನ ಖರೀದಿ ಮಾಡ್ಬೇಕು ಆನೊ ಗೊಂದಲದಿಂದಿದ್ದಾರೆ. ಆದ್ರೆ ಇವುಗಳ ಜೊತೆಗೆ ಬೆಲೆ ಎಷ್ಟಾದರೇನು ಮೈಲೇಜ್ ಎಷ್ಟು ನೀಡುತ್ತೆ ಎಂದು ಪ್ರಶ್ನೆ ಮಾಡ್ತಿದ್ದ ಗಾರಹಕರು ಇದೀಗ ಇದ್ರಲ್ಲಿ ಯಾವ ಯಾವ ಸೇಫ್ಟಿ ಫೀಚರ್ಸ್ ಇದೆ ಅಂತಾ ಕೇಳುವಷ್ಟು ಬುದ್ಧಿವಂತರಾಗಿದ್ದಾರೆ.

ಇಂತಹ ಪ್ರಶ್ನೆಗಳಿಗೆ ಪ್ರತ್ಯುತ್ತರವಾಗಿ ವಾಹನ ತಯಾರಕ ಸಂಸ್ಥೆಗಳು ತಮ್ಮ ಹೊಸ ವಾಹನಗಳಲ್ಲಿ ಸರಿಯಾದ ಸುರಕ್ಷಾ ಸಾಧನಗಳನ್ನ ನೀಡುವುದರ ಕಾರ್ಯದಲ್ಲಿದ್ದಾರೆ. ಆದ್ರೆ ಟಾಟಾ ಮೋಟಾರ್ಸ್ ಮಾತ್ರ ತಮ್ಮ ಹಲವರು ವಾಹನಗಳಲ್ಲಿ ಮೊದಲಿನಿಂದಲೂ ಗರಿಷ್ಠ ಮಟ್ಟದ ಸುರಕ್ಷಾ ಸಾಧನಗಳನ್ನು ನೀಡುತ್ತಲೇ ಬಂದಿದೆ. ಈ ನೀಟ್ಟಿನಲ್ಲಿ ಕೇವಲ ಕಾರುಗಳು ಮಾತ್ರವಲ್ಲದೇ, ಎಲ್ಲಾ ವರ್ಗದ ವಾಹನಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ.

ಮಾರಾಟದಲ್ಲಿ ಹೊಸ ಮೈಲಿಗಲು
2018ರಲ್ಲಿ ಟಾಟಾ ಮೋಟಾರ್ಸ್ ಸುಮಾರು 1.049 ಮಿಲಿಯನ್ ವಾಹನಗಳನ್ನು ಮಾರಟ ಮಾಡಿ, ದೇಶಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಬೇರಾವ ಸಂಸ್ಥೆಗಳು ಮಾರಾಟ ಮಾಡದ ಸಂಖ್ಯೆಯನ್ನು ಟಾಟಾ ಮೋಟಾರ್ಸ್ ಮಾಡಿದೆ.
ಇವುಗಳ ಜೊತೆಗೆ ಪ್ರಪಂಚದ ಉತ್ತಮವಾದ ವಾಹನ ತಯಾರಕ ಸಂಸ್ಥೆಯಲ್ಲಿ ಟಾಟಾ ಮೋಟಾರ್ಸ್ 16ನೇಯ ಸ್ಥಾನವನ್ನು ಪಡೆದುಕೊಂಡಿದೆ.

ಟಾಟಾ ನೆಕ್ಸಾನ್ ದೇಶದ ಸೇಫೆಸ್ಟ್ ಎಸ್‍ಯುವಿ
ಕೆಲವು ದಿನಗಳ ಹಿಂದಷ್ಟೆ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ನೆಕ್ಸಾನ್ ಕಾರು ಒಟ್ಟು 5ಕ್ಕೆ 5 ಅಂಕಗಳನ್ನು ಪಡೆದುಕೊಂಡಿದ್ದು, ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಕಂಪ್ಲೀಟ್ ಅಂಕಗಳನ್ನು ಪಡೆದ ಮೊದಲ ಭಾರಾತದ ಸೇಫೆಸ್ಟ್ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುಲಿದೆ
ಈ ನಿಟ್ಟಿನಲ್ಲಿ ಸಧ್ಯ ಜಿನೆವಾನಲ್ಲಿ ನಡೆಯುತ್ತಿರುವ 2019ರ ಜೆನೆವಾ ಮೋಟಾರ್ ಶೋನಲ್ಲಿ ತಮ್ಮ ಅಲ್‍ಟ್ರೋಜ್ ಪ್ರೀಮಿಯಂ ಹ್ಯಾಚ್‍ಬ್ಯಾಕ್, ಅಲ್‍ಟ್ರೋಜ್ ಎಲೆಕ್ಟ್ರಿಕ್ ಕಾರು, ಹೆಚ್2ಎಕ್ಸ್ (ಹಾರ್ನ್‍ಬಿಲ್) ಮತ್ತು ಹೆಚ್7ಎಕ್ಸ್ (ಬುಜ್ಜಾರ್ಡ್) ಎಂಬ ಕಾರುಗಳನ್ನು ಅನಾವರಣಗೊಳಿಸಿದ್ದು, ಇದರ ಜೊತೆಗೆ ಈ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ಹಲವಾರು ಸೇಫ್ಟಿ ಫೀಚರ್‍ಗಳನ್ನು ಅಳವಡಿಸಿ ಸೇಫ್ಟಿಯಲ್ಲಿ 5 ಸ್ಟಾರ್ ರೇಟಿಂಗ್ ಪಡೆಯುವ ಹಾಗೆ ಉತ್ಪನ್ನ ಮಾಡುತ್ತೇವೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಟಾಟಾ ಮೋಟಾರ್ಸ್‍ನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರುಗಳ ಪಟ್ಟಿಯಲ್ಲಿ ಟಿಯಾಗೋ, ನೆಕ್ಸಾನ್ ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಹ್ಯಾರಿಯರ್ ಕಾರುಗಳು ಸ್ಥಾನವನ್ನು ಪಡೆದುಕೊಂಡಿದ್ದು, ಇವುಗಳ ಜೊತೆಗೆ ಸಂಸ್ಥೆಯು ಭವಿಷ್ಯದಲ್ಲಿ ಮತ್ತಷ್ಟು ವಾಹನಗಳನ್ನು ಬಿಡುಗಡೆ ಮಾಡಲಿದೆ.

ಬಿಎಸ್-6 ಎಫೆಕ್ಟ್
ಟಾಟಾ ನಿರ್ಮಾಣದ ಟಿಗೋರ್ ಮತ್ತು ಟಿಯಾಗೋ ಕಾರಿನ 1.2-ಲೀಟರ್ ಡೀಸೆಲ್ ವರ್ಷನ್‌ಗಳನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಬಿಎಸ್ 6 ನಿಯಮಾವಳಿಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳ್ಳವುದು ಖಚಿತವಾಗಿದೆ.
MOST READ: ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಕೆಲವು ದಿನಗಳ ಹಿಂದಷ್ಟೆ ಸ್ವಿಜರ್ಲ್ಯಾಂಡ್‌ನ ಜೀನೆವಾದಲ್ಲಿ ನಡೆದ 2019ರ ಅಂತಾರಾಷ್ಟ್ರೀಯ ಆಟೋ ಮೇಳದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಹೊಸ ಕಾರು ಮಾದರಿಗಳು ಭಾರೀ ಸದ್ದು ಮಾಡುತ್ತಿದ್ದು, ಇದರಲ್ಲಿ ಟಾಟಾ ನಿರ್ಮಾಣದ 5ಕ್ಕೂ ಹೆಚ್ಚು ಕಾರು ಮಾದರಿಗಳನ್ನು ಅನಾವರಣಗೊಂಡಿವೆ.

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಚಾಣಕ್ಷತೆಯ ಆಧಾರದ ಮೇಲೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು, ಬಲಿಷ್ಠತೆ, ಪರ್ಫಾಮೆನ್ಸ್ ಮತ್ತು ದಕ್ಷತೆಯಲ್ಲಿ ಇತರೆ ಅರ್ಬನ್ ಕಾರುಗಳಿಂತಲೂ ಆಲ್‌ಟ್ರೊಜ್ ಉತ್ತಮವಾಗಿರಲಿವೆ ಎಂದಿದೆ. ಇದರಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಬಿಡುಗಡೆಯಾಗಲಿರುವ ಬಝರ್ಡ್ ಕಾರು ಕೂಡಾ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಜೊತೆಗೆ ಮೈಕ್ರೋ ಎಸ್‍ಯುವಿ ಹಾರ್ನ್‌ಬಿಲ್ ಕಾರು ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ನಿರ್ಮಾಣ ಮಾಡಲಾಗಿದ್ದು, ನೆಕ್ಸಾನ್ ಕಾರು ಮಾದರಿಯಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆಯಲಾಗಿದೆ.
MOST READ: ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ಮತ್ತೆ ಬರುತ್ತಾ.?

ಸರ್ಕಾರಿ ವಲಯದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!
ದೇಶದ ಹಲವಾರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ 2500ಕ್ಕು ಹೆಚ್ಚು ವಾಣಿಜ್ಯ ಪ್ರಯಾಣಿಕ ಸಾರಿಗೆ ವಾಹನಗಳನ್ನು ಸರಬರಾಜು ಮಾಡಲು ಟಾಟಾ ಮೋಟಾರ್ಸ್ ಆದೇಶಗಳನ್ನು ಪಡೆದಿದೆ. ಗುಜರಾತ್ ಸ್ಟೇಟ್ ರೋಡ್‍ವೇಸ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ನಿಂದ 1045 ಬಸ್‍ಗಳನ್ನು ಉತ್ಪಾದನೆ ಮಾಡಬೇಕೆಂಬ ಆದೇಶವನ್ನು ಪಡೆದುಕೊಂಡಿದೆ ಎನ್ನಲಾಗಿದೆ.


Click it and Unblock the Notifications