ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ಮತ್ತೆ ಬರುತ್ತಾ.?

ಪಲ್ಸರ್, ಕೆಟಿಎಂ, ಬುಲೆಟ್ ಬೈಕ್‍ಗಳು ಈಗಿನ ತಲೆಮಾರಿನ ವಾಹನ ಚಾಲಕರಿಗೆ ಬಹಳ ಇಷ್ಟ. ಆದರೆ ಮತ್ತೊಂದು ಕಡೆ 1980ರ ತಲೆಮಾರಿನ ವಾಹನ ಚಾಲಕರಿಗೆ ಅಂದಿನ ಕಾಲದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದ ವಾಹನವೆಂದರೆ ಅದು ಚೇತಕ್. ನಿಮಗೆ ಒಳ್ಳೆಯ ಜ್ಞಾಪಕ ಶಕ್ತಿ ಇದ್ದರೆ ನಿಮಗೂ ಸಹ ನಿಮ್ಮ ತಂದೆಯವರಾಗಲಿ ಅಥವಾ ಕುಟುಂಬದಲ್ಲಿರುವ ಸದಸ್ಯರು ಚೆತಕ್ ಸ್ಕೂಟರ್ ಅನ್ನು ಬಳಸುತಿದ್ದುದನ್ನು ಹಾಗು ಅದರಲ್ಲಿ ನೀವು ಕಳೆದ ಸಮಯವನ್ನು ಮರೆಯಲಾಗುವುದಿಲ್ಲ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಎಲ್ಎಲ್ಎಂಗಳು, ಹಳೆಯ ವೆಸ್ಪಾಗಳು ಮತ್ತು ಚೇತಕ್ ಸೇರಿದಂತೆ ಇನ್ನು ಕೆಲವು 2 ಸ್ಟ್ರೋಕ್ ವಾಹನಗಳು, 4 ಸ್ಟ್ರೋಕ್ ವಾಹನಗಳು ಬಂದ ಮೇಲೆ ಮೆಲ್ಲಗೆ ಮರೆಯಾಗುತ್ತಾ ಹೋದವು. ಆದರೂ ಸಹ ಅಂದಿನ ತಲೆಮಾರಿನಲ್ಲಿ ಹೆಲವಾರು ಸ್ಕೂಟರ್‍‍ಗಳು ಮಾರಾಟಗೊಳ್ಳುತ್ತಿದ್ದರೂ ಸಹ ಬಜಾಜ್ ಚೆತಕ್ ಸ್ಕೂಟರ್ ಅನ್ನು ಖರೀದಿಸಲು ಮುನ್ನುಗ್ಗುತ್ತಿದ್ದಾರೆ. ಅವರಲ್ಲಿ ಈಗಲೂ ಸಹ ಕೆಲವರು ಅದರೊಂದಿಗೆ ಕಳೆದ ಸಮಯವನ್ನು ನೆನೆಯುತ್ತಾ ಇನ್ನು ತಮ್ಮಲ್ಲಿಯೆ ಇದನ್ನು ಇರಿಸಿಕೊಂಡಿದ್ದಾರೆ.

ಬಜಾಜ್ ಚೇತಕ್ ನಿರ್ಮಾಣವಾಗುತ್ತಿದ್ದ ಫ್ಯಾಕ್ಟರಿ ಹೇಗಿತು ಎಂದು ತಿಳಿಯಲು ಈ ವಿಡಿಯೋ ನೋಡಿ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಬಜಾಜ್ ಚೇತಕ್ ಸ್ಕೂಟರ್‍‍‍‍ಗಳ ಉತ್ಪಾದನೆಯನ್ನು ಮೊದಲಿಗೆ 1972 ರಲ್ಲಿ ಪ್ರಾರಂಭಿಸಲಾಗಿತ್ತು ಮತ್ತು ಅಂತಿಮವಾಗಿ 2006 ರಲ್ಲಿ ಸ್ಥಗಿತಗೊಳಿಸಲಾಯಿತು. ಆಷ್ಟು ವರ್ಷಗಳಲ್ಲಿ ಬಜಾಜ್ ಸಂಸ್ಥೆಯು ಸ್ಕೂಟರ್‍‍ನ ವಿನ್ಯಾಸದಲ್ಲಿ ಮಾತ್ರವೇ ಬದಲಾವಣೆಗಳನ್ನು ಮಾಡುತ್ತಿತ್ತು. ಆದರೆ ತಂತ್ರಿಕವಾಗಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ. ಬಹುಷಃ ತಾಂತ್ರೊಕವಾಗಿಯು ಕೂಡಾ ಮಾಡಿದ್ದರೆ ಇಂದಿಗೂ ಸಹ ನಮ್ಮೊಂದಿಗೆ ಇರುತ್ತೇನೊ.?

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಮೊದಲ ಮಾದರಿಯ ಚೇತಕ್ ಸ್ಕೂಟರ್‍‍ಗಳು ವೆಸ್ಪಾ ಸ್ಪ್ರಿಂಟ್ ಅನ್ನು ಆಧರಿಸಿದ್ದವು, ಆದರೂ, 80 ರ ದಶಕದಲ್ಲಿ, ಬಜಾಜ್ ತಮ್ಮದೇಯಾದ ಒಳಾಂಗಣ ವಿನ್ಯಾಸವನ್ನು ಬಳಸಲು ಪ್ರಾರಂಭಿಸಿದರು. ಹಮಾರಾ ಬಜಾಜ್ ಟ್ಯಾಗ್ ನೇಮ್‍ನೊಂದಿಗೆ ದಶಕಗಳ ವೆರೆಗು ಈ ಸ್ಕೂಟರ್ ತನ್ನದೇಯಾದ ಜನಪ್ರೀಯತೆಯನ್ನು ಪಡೆದುಕೊಂಡಿತ್ತು. ಬಜಾಜ್ ಚೇತಕ್ 145 ಸಿ.ಸಿ. 2-ಸ್ಟ್ರೋಕ್ ಎಂಜಿನ್ ಸಹಾಯದಿಂದ 7.5 ಬಿಹೆಚ್‍ಪಿ ಮತ್ತು 10.8 ಎನ್ಎಂ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದುಕೊಂಡಿತ್ತು.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಮತ್ತೆ ಬರಲಿದೆ ಬಜಾಜ್ ಚೇತಕ್.?

ಗತಕಾಲದ ವೈಭವ ಮರುಕಳಿಸುವ ಇರಾದೆಯಲ್ಲಿರುವ ಬಜಾಜ್ ಚೇತಕ್ ಭರ್ಜರಿ ಪುನರಾಗಮನ ಮಾಡಿಕೊಳ್ಳಲಿದೆ. ಹೌದು, ಬಜಾಜ್ ಆಟೋ ಸಂಸ್ಥೆಯು ದೇಶದ ಜನಪ್ರಿಯ ಸ್ಕೂಟರ್ ಚೇತಕ್ ಅನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಬಜಾಜ್ ಆಟೋ ಸಂಸ್ಥೆಯು ಒಂದು ಕಾಲದಲ್ಲಿ ಶೇಕಡ 50ರಷ್ಟು ಸ್ಕೂಟರ್‍ ಸೆಗ್ಮೆಂಟ್‍‍ನಲ್ಲಿ ಪಾಲುದಾರಿಕೆಯನ್ನು ಪಡೆದಿದ್ದು, ಆದರೆ ಈಗ ಕೇವಲ ಶೇಕಡ 15ರಷ್ಟು ಮಾರುಕಟ್ಟೆಯ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ 2009ರಲ್ಲಿ ಬಜಾಜ್ ಸಂಸ್ಥೆಯು ಸ್ಕೂಟರ್‍ ವಿಭಾಗವನ್ನು ತ್ಯಜಿಸಲು ನಿರ್ಧಾರಿಸಲಾಗಿತ್ತು. ಆದ್ದರಿಂದ ಮಾರುಕಟ್ತೆಯಲ್ಲಿ ಪಾಲು ಕಡಿಮೆಯಾಗಿದೆ ಎನ್ನಲಾಗಿದೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಈ ಹಿಂದೆ 2007ನೇ ಇಸವಿಯಲ್ಲಿ ಬಜಾಜ್ ಚೇತಕ್ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆಯಲ್ಲಿ ವಾರ್ಷಿಕವಾಗಿ ಒಂದು ಮಿಲಿಯನ್ ಗಳಷ್ಟು ಸ್ಕೂಟರ್ ಗಳು ಮಾರಾಟವಾಗುತ್ತಿತ್ತು.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳಲಿರುವ ಹೊಸ ಬಜಾಜ್ ಚೇತಕ್ ಪ್ರೀಮಿಯಮ್ ಸ್ಕೂಟರ್ ಸೆಗ್ಮೆಂಟ್‍‍ನಲ್ಲಿನ ಹೋಂಡಾ ಆಕ್ಟಿವಾ, ಪಿಯಾಜಿಯೊ ವೆಸ್ಪಾ ಮತ್ತು ಎಪ್ರಿಲಿಯಾ ಎಸ್‍ಆರ್150 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದ್ದು, 2019ರಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಬಜಾಜ್ ಚೇತಕ್ ಬೆಲೆಯು ಸುಮಾರು ರೂ.70,000 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಬಜಾಜ್ ಸಂಸ್ಥೆಯು ಸಾಧಾರಣಾ ಚೇತಕ್ ಅಲ್ಲದೆಯೆ ಚೇತಕ್ ಚಿಕ್ ಎಂಬ ಎಲೆಕ್ಟ್ರಿಕ್ ಮಾದರಿಯನ್ನು ಕೂಡಾ ಪರಿಚಯಿಸಲಿದೆಯಂತೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ದೊರೆತಿರುವ ಚಿತ್ರಗಳ ಪ್ರಕಾರ ಹೊಸ ಚೇತಕ್ ಸ್ಕೂಟರ್ ಅನ್ನು ಪುರುಷರು ಹಾಗು ಮಹಿಳೆಯರು ಚಲಾಯಿಸಬಹುದಾಗಿದ್ದು, ಪ್ರೀಮಿಯಮ್ ಸ್ಕೂಟರ್ ಪ್ರಿಯರನ್ನು ಟಾರ್ಗೆಟ್ ಮಾಡಿಕೊಂಡಿದೆ. ಆರಾಮದಾಯಕ ರೈಡಿಂಗ್ ಸ್ಥಾನ, ಅಂಡರ್ ಸೀಟ್ ಸ್ಟೋರೇಜ್, ಅಪ್ರೈಟ್ ಹ್ಯಾಂಡಲ್ ಬಾರ್, ಅಗಲವಾದ ಫೂಟ್ ಪೆಗ್ಸ್ ಮತ್ತು ಬ್ಲೂಟೂತ್ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಕಂಸೋಲ್ ಅನ್ನು ಪಡೆದುಕೊಂಡಿರಲಿದೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಇದಲ್ಲದೆ ಯುಎಸ್‍‍ಬಿ ಚಾರ್ಜಿಂಗ್ ಪಾಯಿಂಟ್ ಅನ್ನು ಕೂಡ ಹೊಸ ಚೇತಕ್ ಸ್ಕೂಟರ್ ಪಡೆದಿರಲಿದೆ ಎನ್ನಲಾಗಿದ್ದು, ಸಿಬಿಎಸ್ ಬ್ರೇಕ್ಸ್, ಲಾರ್ಜ್ ಫ್ಯುಯಲ್ ಟ್ಯಾಂಕ್ ಮತ್ತು ಒವಲ್ ಶೇಪ್ ಹೆಡ್‍‍ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು, ಸ್ಕೂಟರ್‍‍ಗೆ ಪ್ರೀಮಿಯಮ್ ಲುಕ್ ನೀಡಲು ಅಲ್ಯುಮೀನಿಯಮ್ ಗ್ರ್ಯಾಬ್ ರೈಲ್ಸ್ ಅನ್ನು ಅಳವಡಿಸಲಾಗಿದೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಬಜಾಜ್ ಚೇತಕ್ ಸ್ಕೂಟರ್‍‍ನ ತಾಂತ್ರಿಕತೆಯ ಕುರಿತಾತ ಮಾಹಿತಿಯು ಅಲಭ್ಯವಾಗಿದ್ದು, ಬಹುಷಃ 125ಸಿಸಿ ಏರ್ ಕೂಲ್ಡ್ ಎಂಜಿನ್ ಪಡೆಯಲಿದ್ದು, 9 ರಿಂದ 10 ಬಿಹೆಚ್ ಮತ್ತು 9 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ. ಹಾಗು ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿರಲಿದೆ ಎನ್ನಲಾಗಿದೆ.

ಎಂದಿಗೂ ಮರೆಯಲಾಗದ ಹಮಾರಾ ಬಜಾಜ್ ಚೇತಕ್. ನಿಮಗೂ ನೆನಪಿದ್ಯಾ.?

ಇನ್ನು ಸಸ್ಪೆಂಶನ್ ವಿಚಾರಕ್ಕೆ ಬಂದಲ್ಲಿ ಚೇತಕ್ ಸ್ಕೂಟರ್‍‍‍ನ ಮುಂಭಾಗದಲ್ಲಿ ಸಿಂಗಲ್ ಆರ್ಮ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅನ್ನು ಅಳವಡಿಸಲಾಗಿದೆ. ಹಾಗು ಎರಡು ಚಕ್ರಗಳಿಗೆ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಯ್ಕೆಯಾಗಿ ಪಡೆದಿರಲಿದೆ.

Source: Gaadiwaadi, WildFilmIndia

Most Read Articles

Kannada
English summary
Bajaj Chetak Production Relaunch In Progress.Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more