ಬಡ್ಡಿದರ ಕಡಿತ: ವಾಹನ ಸಾಲ ಕಡಿಮೆಯಾಗುತ್ತ?

ಕಾರು ಖರೀದಿದಾರರಿಗೆ ಶುಭಸುದ್ದಿಯೊಂದು ಇಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಮೂರುವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ ರೆಪೊ ದರವನ್ನು 50 ಮೂಲಾಂಶದಷ್ಟು ಕಡಿತ ಮಾಡಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರ ಶೇಕಡ 0.5ರಷ್ಟು ಕಡಿತವಾಗಲಿದೆ.

ಸಾಲದ ಮೇಲಿನ ಬಡ್ಡಿದರ ಕಡಿತ ವಾಹನ ಸಾಲದ ಮೇಲೂ ಪರಿಣಾಮ ಬೀರಲಿದೆ. ಅಂದರೆ ಕಾರು ಸಾಲದ ಮೇಲಿನ ಬಡ್ಡಿದರ ಕಡಿಮೆಯಾಗುವ ನಿರೀಕ್ಷೆಯಿದೆ. ಇದರಿಂದ ಕಾರು ಖರೀದಿದಾರರ ಕಿಸೆಯಲ್ಲಿ ಕೊಂಚ ಹಣ ಉಳಿತಾಯವಾಗಲಿದೆ. (ಓದಿ: ಕನ್ನಡ ಡ್ರೈವ್‌ಸ್ಪಾರ್ಕ್ ವಾಹನ ಸಾಲ ಮಾರ್ಗದರ್ಶಿ )

ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್ ಅವ್ಯಾಹತವಾಗಿ ಬಡ್ಡಿದರಗಳನ್ನು ಹೆಚ್ಚಿಸುತ್ತಿತ್ತು. ಇದು ವಾಹನ ಮಾರುಕಟ್ಟೆಗೆ ಹೊಡೆತ ನೀಡಿತ್ತು. ವಾಹನ ಸಾಲ ದುಬಾರಿಯಾಗಿ ಪರಿಣಮಿಸಿ ಗ್ರಾಹಕರು ವಾಹನ ಖರೀದಿ ಯೋಚನೆಯಿಂದ ವಿಮುಖರಾಗುತ್ತಿದ್ದರು.

ಕಳೆದ ವರ್ಷ ಬಡ್ಡಿದರ ಹೆಚ್ಚಳ ಮತ್ತು ಇಂಧನ ದರ ಹೆಚ್ಚಳ ದೇಶದ ಕಾರು ಮಾರಾಟ ಕುಸಿಯಲು ಪ್ರಮುಖ ಕಾರಣವಾಗಿದೆ. ಆರ್‌ಬಿಐ ಬಡ್ಡಿದರ ಕಡಿತ ನಿರ್ಧಾರದಿಂದ ಕಾರು ಖರೀದಿದಾರರು ಮತ್ತೆ ಶೋರೂಂನತ್ತ ಮುಖಮಾಡಲು ನೆರವಾಗಲಿದೆ.

2012-13ನೇ ಸಾಲಿನ ಬಜೆಟ್ ಕೂಡ ಕಾರು ಮಾರುಕಟ್ಟೆಗೆ ಪೂರಕವಾಗಿರಲಿಲ್ಲ. ವಾಹನದ ಮೇಲಿನ ಸುಂಕ ಹೆಚ್ಚಿಸಿದ ಪರಿಣಾಮವಾಗಿ ಹೆಚ್ಚಿನ ಕಾರುಗಳು ದುಬಾರಿಯಾಗಿದ್ದವು. ಇದೀಗ ಬಡ್ಡಿದರ ಇಳಿಕೆಯಿಂದಾಗಿ ಕಾರು ಮಾರುಕಟ್ಟೆಗೆ ಕೊಂಚ ತಂಗಾಳಿ ಬೀಸಿದಂತಾಗಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Tuesday, April 17, 2012, 13:18 [IST]
English summary
Here is good news for both carmakers as well as car buyers. The RBI reduce lending rates for the first time in three years. The lowered lending rates will reduce car loan interest rates too making car buying less burdensome on the pocket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+