ರೆನಾಲ್ಟ್ ಡೆಝಿರ್: ಸೌಂದರ್ಯ, ಶಕ್ತಿ ಯುಗಳಗೀತೆ
ರೆನಾಲ್ಟ್ ಕಂಪನಿಯು ಕೇವಲ ಮೂರು ಕಾರುಗಳನ್ನು ಮಾತ್ರ ದೇಶಕ್ಕೆ ಪರಿಚಯಿಸಿದೆ. ಅಚ್ಚರಿಯೆಂಬಂತೆ ಜನವರಿಯಲ್ಲಿ ನಡೆದ ದೆಹಲಿ ವಾಹನ ಪ್ರದರ್ಶನದಲ್ಲಿ ಡೆಝಿರ್ ಎಲೆಕ್ಟ್ರಿಕ್ ಕಾರನ್ನು ಕಂಪನಿ ಪ್ರದರ್ಶಿಸಿದೆ. ಈ ಕಾನ್ಸೆಪ್ಟ್ ಕಾರು ನಯನಮನೋಹರವಾಗಿದ್ದು, ಕಾರ್ಯಕ್ಷಮತೆಯಲ್ಲೂ ಸೂಪರ್ ಆಗಿದೆ.
ರೆನಾಲ್ಟ್ ಡೆಝಿರ್ ಕಾನ್ಸೆಪ್ಟ್ ಕಾರು ರಿಚಾರ್ಜ್ ಮಾಡಬಹುದಾದ ಲಿಥಿಯಂ ಬ್ಯಾಟರಿಗಳನ್ನು ಹೊಂದಿದೆ. ಈ ಬ್ಯಾಟರಿಗಳು ಎಲೆಕ್ಟ್ರಿಕ್ ಮೋಟರಿಗೆ 110 ಕಿಲೋವ್ಯಾಟಿನಲ್ಲಿ 148 ಹಾರ್ಸ್ ಪವರ್ ನೀಡುತ್ತದೆ. ಇದು 1,830 ಪೌಂಡ್ ಟಾರ್ಕ್ ಪವರ್ ನೀಡುತ್ತದೆ. ಕೇವಲ ಐದು ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ. ಈ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 180 ಕಿ.ಮೀ.
ಕಳೆದ ವರ್ಷ ಪ್ಯಾರೀಸ್ ವಾಹನ ಪ್ರದರ್ಶನದಲ್ಲಿ ರೆನಾಲ್ಟ್ ಡೆಝಿರ್ ಕಾರನ್ನು ಪ್ರಪ್ರಥಮವಾಗಿ ಅನಾವರಣ ಮಾಡಲಾಗಿತ್ತು. ಇದು ರೆನಾಲ್ಟ್ ವಿನ್ಯಾಸ ಪಿಲಾಸಫಿಯನ್ನೆಲ್ಲ ಧಾರೆಯೆರೆದು ಬಂದಂತಹ ಕಾರಾಗಿ ಗೋಚರಿಸುತ್ತದೆ. ರೆನಾಲ್ಟ್ ಡೆಝಿರ್ ಕಾರಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









