ರೆನೊ ಡಸ್ಟರಿಗೆ ಭಾರೀ ಬುಕ್ಕಿಂಗ್: ತ್ರಿಬಲ್ ಪಾಳಿ!

ಚೆನ್ನೈ ಘಟಕದಲ್ಲಿ ಕಂಪನಿಯು ಮೂರು ಪಾಳಿಗಳಲ್ಲಿ ಡಸ್ಟರ್ ಉತ್ಪಾದನೆ ಮಾಡಲಿದೆ. ಇದರಿಂದ ಡಸ್ಟರ್ ವೇಟಿಂಗ್ ಪಿರೆಯಿಡ್ ಕಡಿಮೆಯಾಗಲಿದೆ. ದೀಪಾವಳಿ ವೇಳೆಗೆ ಗ್ರಾಹಕರ ಬೇಡಿಕೆ ಏರಿಕೆ ಕಾಣುವ ನಿರೀಕ್ಷೆಯಿಂದ ಪಾಳಿ ಹೆಚ್ಚಿಸಲು ನಿರ್ಧರಿಸಿದೆ.
ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ರೆನೊ ಡಸ್ಟರ್ ಜುಲೈ ನಾಲ್ಕರಂದು ದೇಶದ ರಸ್ತೆಗಿಳಿದಿದೆ. ಇದರ ಆರಂಭಿಕ ದರ 7.99 ಲಕ್ಷ ರುಪಾಯಿ. ಡಸ್ಟರ್ ಮಾತ್ರವಲ್ಲದೇ ಕಂಪನಿಯು ದೇಶದಲ್ಲಿ ಫ್ಲೂಯೆನ್ಸ್, ಪಲ್ಸ್ ಹ್ಯಾಚ್ ಬ್ಯಾಕ್ ಮತ್ತು ಕೊಲಿಯೊಸ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮಾರಾಟ ಮಾಡುತ್ತಿದೆ.
ರೆನೊ ಡಸ್ಟರ್ ಪೆಟ್ರೋಲ್ 1.6 ಲೀಟರಿನ ಪೆಟ್ರೋಲ್ ಎಂಜಿನ್ 104 ಹಾರ್ಸ್ ಪವರ್ ಮತ್ತು 145 ಟಾರ್ಕ್ ಪವರ್ ನೀಡುತ್ತದೆ. 1.5 ಲೀಟರಿನ ಕೆ9ಕೆ ಡೀಸೆಲ್ ಎಂಜಿನ್ 85 ಅಶ್ವಶಕ್ತಿ ಮತ್ತು 110 ಟಾರ್ಕ್ ನೀಡುತ್ತದೆ. ಇದು 5 ಮತ್ತು ಆರು ಸ್ಫೀಡಿನ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕುತ್ತಿದೆ.
ಇತ್ತೀಚೆಗೆ ರೆನೊ ಕಂಪನಿಯು ಸ್ಕಾಲಾ ಹೆಸರಿನ ಸೆಡಾನ್ ಕಾರನ್ನೂ ಪರಿಚಯಿಸಿತ್ತು. ಇದರ ಬೇಸ್ ಆವೃತ್ತಿಯ ಎಕ್ಸ್ ಶೋರೂಂ ದರ 6.99 ಲಕ್ಷ ರುಪಾಯಿ. ಸ್ಕಾಲಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ.


Click it and Unblock the Notifications








