ರೆನೊ ಡಸ್ಟರಿಗೆ 2 ಹೆಚ್ಚುವರಿ ಸೀಟ್ ಹಾಕ್ಹೊಬಹುದು!
ಇತ್ತೀಚೆಗೆ ರಸ್ತೆಗಿಳಿದ ರೆನೊ ಡಸ್ಟರ್ ಕೇವಲ ಐದು ಸೀಟು ಹೊಂದಿತ್ತು. ಇದರಿಂದ ಕೆಲವರಿಗೆ ನಿರಾಶೆಯಾಗಿತ್ತು. ಯಾಕೆಂದರೆ ಇದೇ ಸೆಗ್ಮೆಂಟಿನಲ್ಲಿ ಹೆಚ್ಚಿನ ಕಾರುಗಳು ಏಳು ಸೀಟುಗಳನ್ನು ಹೊಂದಿವೆ. ಮಾರುತಿ ಸುಜುಕಿ ಎರ್ಟಿಗಾ ಕೂಡ 7 ಸೀಟು ಹೊಂದಿದೆ. ಆದರೆ ಇನ್ಮುಂದೆ ಡಸ್ಟರಿಗೂ ಹೆಚ್ಚುವರಿಯಾಗಿ ಎರಡು ಸೀಟು ಹಾಕಿಕೊಳ್ಳಬಹುದಾಗಿದೆ.
ಡಸ್ಟರ್ ಕಾರಿನ ಹಿಂಭಾಗದಲ್ಲಿ ಹೆಚ್ಚುವರಿಯಾಗಿ ಎರಡು ಸೀಟುಗಳನ್ನು ಹಾಕಿಕೊಳ್ಳುವ ಅವಕಾಶವನ್ನು ರೆನೊ ನೀಡಿದೆ. ರೆನೊ ಶೋರೂಂಗಳಲ್ಲಿ, ಡೀಲರುಗಳು ಈ ಎರಡು ಸೀಟುಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಾಕಿಕೊಡುತ್ತಾರೆ. ಅಂದರೆ ಈ ಸೀಟುಗಳನ್ನು ಆಕ್ಸೆಸರಿಯಾಗಿ ಖರೀದಿಸಬಹುದು.
ರೆನೊ ಡಸ್ಟರ್ ಎಸ್‌ಯುವಿ ಕಾರಿನ ಹಿಂಭಾಗದಲ್ಲಿ ಹೆಚ್ಚುವರಿ ಸೀಟುಗಳನ್ನು ಹಾಕಿಕೊಳ್ಳಬಹುದು. ಬೇಡವೆಂದಾಗ ಮಡುಚಿಡಬಹುದಾಗಿದೆ. ನಿಮಗೆ ಲಗೇಜ್ ಸ್ಥಳಾವಕಾಶ ಹೆಚ್ಚು ಬೇಕಾದ ಸಂದರ್ಭದಲ್ಲಿ ಈ ಸೀಟುಗಳನ್ನು ಮಡುಚಬಹುದಾಗಿದೆ. ಪ್ರವಾಸ ಇತ್ಯಾದಿ ಸಂದರ್ಭಗಳಲ್ಲಿ ಐದು ಜನರಿಗಿಂತ ಹೆಚ್ಚು ಪ್ರಯಾಣಿಸಬೇಕೆಂದಾಗ ಹೆಚ್ಚುವರಿ ಸೀಟುಗಳನ್ನು ಬಳಸಿಕೊಳ್ಳಬಹುದು.
ಐದು ಜನರಿಗಿಂತ ಹೆಚ್ಚು ಜನರು ಪ್ರಯಾಣಿಸಬೇಕಾದ ಸಂದರ್ಭದಲ್ಲಿ ಹೆಚ್ಚುವರಿ ಸೀಟುಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಆದರೆ ಕಾರಿನ ಹಿಂಭಾಗವನ್ನು ಹೆಚ್ಚುವರಿ ಸೀಟು ಆಕ್ರಮಿಸಿಕೊಂಡಾಗ ಲಗೇಜ್ ಸ್ಥಳಾವಕಾಶ ಕಡಿಮೆಯಾಗಲಿದೆ.
ನೂತನ ರೆನೊ ಡಸ್ಟರ್ ಒಟ್ಟು ಆರು ಆವೃತ್ತಿಗಳಲ್ಲಿ ಲಭ್ಯವಿದೆ. ಅದರಲ್ಲಿ ಎರಡು ಪೆಟ್ರೋಲ್ ಆವೃತ್ತಿ. ನಾಲ್ಕು ಡೀಸೆಲ್ ಆವೃತ್ತಿ. ಈ ಕಾರಿನ ಒಟ್ಟಾರೆ ಉದ್ದ 4315 ಎಂಎಂ. ಇದು 106.6 ಅಶ್ವಶಕ್ತಿಯ 1.6 ಲೀಟರಿನ ಪೆಟ್ರೋಲ್ ಎಂಜಿನ್, 83.8 ಅಶ್ವಶಕ್ತಿಯ 1.5 ಲೀಟರಿನ ಡೀಸೆಲ್ ಎಂಜಿನ್ ಮತ್ತು 103.8 ಅಶ್ವಶಕ್ತಿ ನೀಡುವ 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.
ರೆನೊ ಡಸ್ಟರ್ ವಿಮರ್ಶೆ ಓದಿ.


Click it and Unblock the Notifications









