ಜುಲೈ ನಾಲ್ಕರಂದು ರೆನೊ ಡಸ್ಟರ್ ಎಸ್‌ಯುವಿ ರಸ್ತೆಗೆ

ರೆನೊ ಕಂಪನಿಯ ಬಹುನಿರೀಕ್ಷಿತ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ದೇಶದ ರಸ್ತೆಗೆ ಆಗಮಿಸಲು ಕ್ಷಣಗಣನೆ ಆರಂಭವಾಗಿದೆ. ನಾಳೆ(ಜುಲೈ 04) ನವದೆಹಲಿ ಮತ್ತು ಮುಂಬೈನಲ್ಲಿ ಕಂಪನಿಯು ಡಸ್ಟರ್ ಎಸ್ ಯುವಿ ಪರಿಚಯಿಸಲಿದೆ.

ರೆನೊ ಕಂಪನಿ ಡಸ್ಟರ್ ದರ ಪ್ರಕಟಿಸುವ ಮುನ್ನವೇ ಡೀಲರುಗಳು ಡಸ್ಟರ್ ಬುಕ್ಕಿಂಗ್ ಆರಂಭಿಸಿದ್ದಾರೆ. ರೆನೊ ದರ ಸುಮಾರು 10 ಲಕ್ಷ ರುಪಾಯಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಇದು ಎರಡು ಪೆಟ್ರೋಲ್ ಮತ್ತು ಮೂರು ಡೀಸೆಲ್ ಆವೃತ್ತಿ ಸೇರಿದಂತೆ ಒಟ್ಟು ಐದು ಆವೃತ್ತಿಯನ್ನು ಪರಿಚಯಿಸಲಿದೆ.

ನೂತನ ರೆನೊ ಡಸ್ಟರ್ 1.6 ಲೀಟರಿನ ನಾಲ್ಕು ಸಿಲಿಂಡರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು 105 ಅಶ್ವಶಕ್ತಿ ಮತ್ತು 148 ಟಾರ್ಕ್ ಪವರ್ ನೀಡಲಿದೆ. ಜೊತೆಗೆ ನೂತನ ಡಸ್ಟರ್ 1.5 ಲೀಟರಿನ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕಲಿದೆ. ಡೀಸೆಲ್ ಎಂಜಿನ್ ಸುಮಾರು 110 ಅಶ್ವಶಕ್ತಿ ಮತ್ತು 240 ಟಾರ್ಕ್ ಪವರ್ ನೀಡಲಿದೆ.

ಡಸ್ಟರ್ ಪೆಟ್ರೋಲ್ ಆವೃತ್ತಿಯು ಲೀಟರಿಗೆ 13.24 ಕಿ.ಮೀ. ಮೈಲೇಜ್ ನೀಡಲಿದೆ. ಡೀಸೆಲ್ ಎಂಜಿನ್ ಡಸ್ಟರ್ ಕಾರು ಸುಮಾರು 20.46 ಕಿ.ಮೀ. ಮೈಲೇಜ್ ನೀಡಲಿದೆ. ಕೆಲವು ಡಸ್ಟರ್ ಆವೃತ್ತಿಗಳಲ್ಲಿ ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ಮುಂತಾದ ಫೀಚರುಗಳಿರಲಿವೆ.

ಉಳಿದಂತೆ ಡಸ್ಟರ್ ಕಾರಿನಲ್ಲಿ ಟಿಲ್ಟ್ ಸ್ಟಿಯರಿಂಗ್, ಕಿಲೆಸ್ ಎಂಟ್ರಿ, ಹಿಂಭಾಗದ ಸೀಟುಗಳಿಗೆ ಏಸಿ ವೆಂಟ್ಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, 2ಡಿನ್ ಆಡಿಯೋ, ಯುಎಸ್ ಬಿ, ಬ್ಲೂಟೂಥ್, ಸ್ಟಿಯರಿಂಗ್ ವೀಲ್ ನಲ್ಲೇ ಆಡಿಯೋ ಮತ್ತು ಫೋನ್ ನಿರ್ವಹಣೆ ಮುಂತಾದ ಫೀಚರುಗಳು ನೂತನ ಡಸ್ಟರ್ ಆವೃತ್ತಿಗಳಲ್ಲಿ ಇರಲಿವೆ.

More from DriveSpark

Article Published On: Tuesday, July 3, 2012, 16:59 [IST]
English summary
One of the most exciting product launch from French carmaker Renault, the Duster SUV will hit the roads tomorrow. The official launch programme is scheduled to be held in New Delhi and Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+