ನಾಲ್ಕು ಲಕ್ಷ ರು.ಗಿಂತ ಅಗ್ಗದ ರೆನಾಲ್ಟ್ ಸಣ್ಣಕಾರು ಬರಲಿದೆಯಂತೆ!

ಕಂಪನಿಯು ಜನವರಿ ತಿಂಗಳಲ್ಲಿ 5.77 ಲಕ್ಷ ರು.ನಿಂದ 6.25 ಲಕ್ಷ ರು. ದರದ ರೆನಾಲ್ಟ್ ಪಲ್ಸ್ ಆವೃತ್ತಿಯನ್ನು ಪರಿಚಯಿಸಿತ್ತು. ಕಂಪನಿಯು ಜಾಗತಿಕ ಕಾರ್ಯತಂತ್ರದ ಭಾಗವಾಗಿ ಅಗ್ಗದ ಕಾರನ್ನು ಪರಿಚಯಿಸಲಿದೆ ಎಂದು ನಾಸೀಫ್ ಹೇಳಿದ್ದಾರೆ.
ಕಂಪನಿಯು ಮುಂದಿನ ವರ್ಷ ಸುಮಾರು ಒಂದು ಲಕ್ಷ ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡುವ ಗುರಿಹೊಂದಿದೆ. ಫ್ರಾನ್ಸಿನ ರೆನಾಲ್ಟ್ ಕಂಪನಿಯು 2005ನೇ ಇಸವಿಯಲ್ಲಿ ದೇಶದ ವಾಹನ ಮಾರುಕಟ್ಟೆಗೆ ಪ್ರವೇಶಿಸಿತ್ತು.
2010ರಲ್ಲಿ ಮೇ ತಿಂಗಳಲ್ಲಿ ಕಂಪನಿಯು ಐಷಾರಾಮಿ ಸೆಡಾನ್ ಫ್ಲೂಯೆನ್ಸ್ ಮತ್ತು ಸೆಪ್ಟಂಬರ್ ನಲ್ಲಿ ಕಾಂಪ್ಯಾಕ್ಟ್ ಎಸ್ ಯುವಿ ಕೊಲಿಯೊಸ್ ಪರಿಚಯಿಸಿತ್ತು. ಕಂಪನಿಯು ಕಳೆದ ವರ್ಷ 1,500 ಕೊಲಿಯೊಸ್ ಮತ್ತು ಫ್ಲೂಯೆನ್ಸ್ ಕಾರು ಮಾರಾಟ ಮಾಡಿತ್ತು. ಈ ವರ್ಷ ಮುಗಿಯುವ ಮುನ್ನ ದೇಶದಲ್ಲಿ ಸುಮಾರು 100 ಶೋರೂಂಗಳನ್ನು ತೆರೆಯಲು ಕಂಪನಿ ಯೋಜಿಸಿದೆ.


Click it and Unblock the Notifications








