ರೆನೊ ಡಸ್ಟರ್ ರಸ್ತೆಗೆ, ದರ 7.19 ಲಕ್ಷ ರುಪಾಯಿ

ಬಹುನಿರೀಕ್ಷಿತ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ರೆನೊ ಡಸ್ಟರ್ ರಸ್ತೆಗಿಳಿದಿದೆ. ಇದು ಒಂದು ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಈ ಆಕರ್ಷಕ ಎಸ್ ಯುವಿ ಆರಂಭಿಕ ದರ 7.99 ಲಕ್ಷ ರುಪಾಯಿ. ನೂತನ ಡಸ್ಟರ್ ಕಾರು ಫೋರ್ಡ್, ಮಹೀಂದ್ರ ಮತ್ತು ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಅಗ್ಗದ ದರದೊಂದಿಗೆ ಆಗಮಿಸಿರುವ ನೂತನ ಡಸ್ಟರ್ ಕಾರು ಮಹೀಂದ್ರ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಕಾರುಗಳಿಗೆ ಮಾರಾಟದಲ್ಲಿ ಸ್ಪರ್ಧೆ ಒಡ್ಡಲಿದೆ. ರೆನೊ ಕಂಪನಿಯು ದೇಶದಲ್ಲಿ ಫ್ಲೂಯೆನ್ಸ್, ಪಲ್ಸ್ ಹ್ಯಾಚ್ ಬ್ಯಾಕ್ ಮತ್ತು ಕೊಲಿಯೊಸ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮಾರಾಟ ಮಾಡುತ್ತಿದೆ. ಇದೀಗ ಈ ಬಳಗಕ್ಕೆ ಡಸ್ಟರ್ ಜೊತೆಯಾಗಿದೆ.

ರೆನೊ ಡಸ್ಟರ್ ಪೆಟ್ರೋಲ್ 1.6 ಲೀಟರಿನ ಪೆಟ್ರೋಲ್ ಎಂಜಿನ್ 104 ಹಾರ್ಸ್ ಪವರ್ ಮತ್ತು 145 ಟಾರ್ಕ್ ಪವರ್ ನೀಡಲಿದೆ. 1.5 ಲೀಟರಿನ ಕೆ9ಕೆ ಡೀಸೆಲ್ ಎಂಜಿನ್ 85 ಅಶ್ವಶಕ್ತಿ ಮತ್ತು 110 ಟಾರ್ಕ್ ನೀಡಲಿದೆ. ಇದು 5 ಮತ್ತು ಆರು ಸ್ಫೀಡಿನ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕಲಿದೆ.

ರೆನೊ ಡಸ್ಟರ್ ಆರ್‌ಎಕ್ಸ್ಇ 1.6 ಪೆಟ್ರೋಲ್: 7.19 ಲಕ್ಷ ರುಪಾಯಿ
ರೆನೊ ಡಸ್ಟರ್ ಆರ್‌ಎಕ್ಸ್ಎಲ್ 1.6 ಪೆಟ್ರೋಲ್: 8.19 ಲಕ್ಷ ರು.

ರೆನೊ ಡಸ್ಟರ್ ಆರ್‌ಎಕ್ಸ್ಇ 1.5 ಡೀಸೆಲ್: 7.99 ಲಕ್ಷ ರು.
ರೆನೊ ಡಸ್ಟರ್ ಆರ್‌ಎಕ್ಸ್ಎಲ್ 1.5 ಡೀಸೆಲ್: 9.99 ಲಕ್ಷ ರು.

ರೆನೊ ಡಸ್ಟರ್ ಆರ್‌ಎಕ್ಸ್ಎಲ್ 1.5 ಡೀಸೆಲ್: 8.99 ಲಕ್ಷ ರು.
ರೆನೊ ಡಸ್ಟರ್ ಆರ್‌ಎಕ್ಸ್ಎಲ್ 1.5 ಡೀಸೆಲ್(110 ಪಿಎಸ್ ಪವರ್): 9.99 ಲಕ್ಷ ರು.

ರೆನೊ ಡಸ್ಟರ್ ಆರ್‌ಎಕ್ಸ್‌ಝಡ್ 1.5 ಡೀಸೆಲ್(110 ಪಿಎಸ್): 10.99 ಲಕ್ಷ ರು.
ರೆನೊ ಡಸ್ಟರ್ ಆರ್‌ಎಕ್ಸ್‌ಝಡ್ 1.5 ಡೀಸೆಲ್: 11.29 ಲಕ್ಷ ರು.

ರೆನೊ ಡಸ್ಟರ್ ಎಸ್‌ಯುವಿ ವಿಮರ್ಶೆ ಓದಿ>>

Article Published On: Wednesday, July 4, 2012, 13:25 [IST]
English summary
Renault launched Duster SUV in India at Rs 7.19 lakh to Rs 11.29 lakh. Renault Duster 1.6-litre petrol engine give 104PS and 145Nm of torque.Diesel variant will get the 1.5-litre K9K diesel engine. Read Full Details. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+