ರಸ್ತೆಗಿಳಿಯೋ ಮುನ್ನವೇ ರೆನೊ ಡಸ್ಟರ್ ಬುಕ್ಕಿಂಗ್ ಆರಂಭ
ಜುಲೈ ನಾಲ್ಕರಂದು ನೂತನ ಎಸ್ ಯುವಿ ಬಿಡುಗಡೆ ಸಮಯದಲ್ಲೇ ಡಸ್ಟರ್ ದರ ಮಾಹಿತಿ ಬಹಿರಂಗಪಡಿಸುವುದಾಗಿ ಕಂಪನಿ ಪ್ರಕಟಿಸಿದೆ. ರೆನೊ ಡೀಲರುಗಳ ಪ್ರಕಾರ ನೂತನ ಡಸ್ಟರ್ ದರ ಸುಮಾರು 8 ಲಕ್ಷ ರುಪಾಯಿಯಿಂದ 12 ಲಕ್ಷ ರುಪಾಯಿ ನಡುವೆ ಇರಲಿದೆ.
ರೆನೊ ಡಸ್ಟರ್ ಐದು ಸೀಟಿನ ಸ್ಪೋರ್ಟ್ಸ್ ಯುಟಿಲಿಟಿ ಕಾರಾಗಿದೆ. ಯುರೋಪಿನಲ್ಲಿ ಇದೇ ಎಸ್‌ಯುವಿ ದೇಶಿಕಾ ಡಸ್ಟರ್ ಹೆಸರಿನಲ್ಲಿ ಮಾರಾಟವಾಗುತ್ತಿದೆ. ವಿವಿಧ ಭೂಭಾಗಗಳಲ್ಲಿ, ಆನ್ ರೋಡ್, ಆಫ್ ರೋಡಿನಲ್ಲಿ ಸರಾಗವಾಗಿ ಡಸ್ಟರ್ ಡ್ರೈವ್ ಮಾಡಬಹುದಾಗಿದೆ. ಇದರ ದರವೂ ಕಡಿಮೆ ಇರುವ ಕಾರಣ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
2012 ದೆಹಲಿ ವಾಹನ ಪ್ರದರ್ಶನದಲ್ಲಿ ರೆನೊ ಕಂಪನಿಯು ನೂತನ ಡಸ್ಟರ್ ಪ್ರದರ್ಶಿಸಿತ್ತು. ಕಪ್ಪು, ಬಿಳಿ, ಚಾಕೊಲೆಟ್ ಬಣ್ಣ, ಕಂದು, ಕಪ್ಪು, ಸಿಲ್ವರ್ ಸೇರಿದಂತೆ ರೆನೊ ಡಸ್ಟರ್ ಒಟ್ಟು ಆರು ಬಣ್ಣಗಳಲ್ಲಿ ದೊರಕಲಿದೆ. ನೀವು ರೆನೊ ಡಸ್ಟರ್ ಖರೀದಿಸುವ ಯೋಚನೆಯಲ್ಲಿದ್ದರೆ ಆದಷ್ಟು ಬೇಗ ಡೀಲರುಗಳ ಬಳಿಗೆ ಹೋಗಿ. ಇಲ್ಲವಾದರೆ ವೇಟಿಂಗ್ ಪಿರೆಯಿಡ್ ಹೆಚ್ಚಾದೀತು.


Click it and Unblock the Notifications









