ನಿಸ್ಸಾನ್ ಸನ್ನಿಗೆ ಹೊಸ ಉಡುಗೆ, ರೆನೊ ಸ್ಕಾಲಾ
ನಿಸ್ಸಾನ್ ಸನ್ನಿ ಕಾರಿನ ಪಡಿಯಚ್ಚು ಕಾರೊಂದನ್ನು ಸ್ವಂತ ಹೆಸರಿನಲ್ಲಿ ಪರಿಚಯಿಸಲು ರೆನೊ ಯೋಜಿಸಿದೆ. ಸನ್ನಿ ಹೆಸರನ್ನು ಸ್ಕಾಲಾ ಎಂದು ಪುನರ್‌ನಾಮಕರಣ ಮಾಡಿಕೊಂಡು ರೆನೊ ಕಂಪನಿಯು ಈ ಕಾರನ್ನು ಪರಿಚಯಿಸಲಿದೆ. ಅಂದಹಾಗೆ ನೂತನ ಸ್ಕಾಲಾ ಈ ವರ್ಷದ ದ್ವಿತೀಯಾರ್ಧದಲ್ಲಿ ಆಗಮಿಸಲಿದೆ.
ನೂತನ ರೆನೊ ಸ್ಕಾಲಾ ಕಾರು 1.5 ಲೀಟರಿನ ಎಂಜಿನ್ ಹೊಂದಿರಲಿದೆ. ಇದು 97.6 ಅಶ್ವಶಕ್ತಿ ನೀಡಲಿದೆ. ಅಂದರೆ ಇದರ ಪವರ್ ನಿಸ್ಸಾನ್ ಸನ್ನಿ ಕಾರಿನಷ್ಟೇ ಇರಲಿದೆ. ಆದರೆ ಕಂಪನಿಯು 1.5 ಲೀಟರಿನ ಪೆಟ್ರೊಲ್ ಸ್ಕಾಲಾ ಕಾರು ಪರಿಚಯಿಸುವುದೇ ಎಂಬುದು ಖಚಿತವಾಗಿಲ್ಲ.
ನಿಸ್ಸಾನ್ ಕಾರುಗಳ ಹೊಸ ಆವೃತ್ತಿಯನ್ನು ರೆನೊ ತರುವುದು ಇದು ಮೊದಲಲ್ಲ. ನಿಸ್ಸಾನ್ ಮೈಕ್ರಾ ಕಾರನ್ನು ಪಲ್ಸ್ ಹೆಸರಲ್ಲಿ ರೆನೊ ಪರಿಚಯಿಸಿತ್ತು. ರೆನೊ ಪಲ್ಸ್ ಈಗ ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ.
ರೆನೊ ಕಂಪನಿಯ ಸ್ವಯಂ ಐಡೆಂಟೆಟಿಗಾಗಿ ಪಲ್ಸ್ ಕಾರಿನಂತೆ ಸನ್ನಿ ಜೆರಾಕ್ಸ್ ಸ್ಕಾಲಾ ಕಾರು ಬರಲಿದೆ. ಆದರೆ ಈ ಕಾರಿನ ಪ್ರಸಾಧನ ವಿಷಯ ಹೊರತುಪಡಿಸಿ ಹೆಚ್ಚಿನ ಬದಲಾವಣೆ ನಿರೀಕ್ಷೆಯಿಲ್ಲ. ನಿಸ್ಸಾನ್ ಸನ್ನಿಗಿಂತ ನೂತನ ಸ್ಕಾಲಾ ಕಾರಿನ ದರ ಕೊಂಚ ದುಬಾರಿಯಿರುವ ನಿರೀಕ್ಷೆಯಿದೆ.
ಸನ್ನಿಯಿಂದಾಗಿ ನಿಸ್ಸಾನ್ ಖ್ಯಾತಿ ಪಡೆದಂತೆ, ಸ್ಕಾಲಾ ಮೂಲಕ ಖ್ಯಾತಿ ಪಡೆಯುವ ನಿರೀಕ್ಷೆಯನ್ನು ರೆನೊ ಹೊಂದಿದೆ. ಅಂದಹಾಗೆ ನಿಸ್ಸಾನ್ ಮತ್ತು ರೆನೊ ಮೈತ್ರಿ ಕಂಪನಿಗಳಾದರೂ ತಮ್ಮ ಬ್ರಾಂಡ್ ಇಮೇಜನ್ನು ಹೆಚ್ಚಿಸಲು ಪೈಪೋಟಿ ನಡೆಸುತ್ತಿವೆ.(ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









