ರೆನೊ ಸ್ಕಾಲಾ ಕಾರು ರಸ್ತೆಗೆ, ದರ 6.99 ಲಕ್ಷ ರು.
ರೆನೊ ಸ್ಕಾಲಾ ಸೆಡಾನ್ ಕಾರು ದೇಶದ ರಸ್ತೆಗಿಳಿದಿದೆ. ಇದರ ಬೇಸ್ ಆವೃತ್ತಿಯ ಎಕ್ಸ್ ಶೋರೂಂ ದರ 6.99 ಲಕ್ಷ ರುಪಾಯಿ. ಇದು ನಿಸ್ಸಾನ್ ಸನ್ನಿಯ ಪಡಿಯಚ್ಚು ಕಾರಾಗಿದ್ದರೂ ಹೆಚ್ಚು ಪ್ರೀಮಿಯಂ ಲುಕ್ ಹೊಂದಿದೆ.
ಎಂಜಿನ್: ರೆನೊ ಸ್ಕಾಲಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದು 1.5 ಲೀಟರಿನ ಡಿಎಸ್ಐ ಡೀಸೆಲ್ ಎಂಜಿನ್ ಮತ್ತು 1.5 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಡೀಸೆಲ್ ಎಂಜಿನ್ ಸುಮಾರು 84.8 ಅಶ್ವಶಕ್ತಿ ನೀಡುತ್ತದೆ. ಪೆಟ್ರೋಲ್ ಆವೃತ್ತಿ ಸುಮಾರು 97.6 ಅಶ್ವಶಕ್ತಿ ನೀಡುತ್ತದೆ.
ಮೈಲೇಜ್: ರೆನೊ ಸ್ಕಾಲಾ ಮೈಲೇಜ್ ಆಕರ್ಷಕವಾಗಿದೆ. ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 16.95 ಕಿ.ಮೀ ಮತ್ತು ಡೀಸೆಲ್ ಎಂಜಿನ್ ಸುಮಾರು 21.64 ಕಿ.ಮೀ. ಮೈಲೇಜ್ ನೀಡುತ್ತದೆ.
ನೂತನ ಸ್ಕಾಲಾ ಕಾರು ರೆನೊ ದೇಶದ ರಸ್ತೆಗೆ ಪರಿಚಯಿಸಿದ ಐದನೇ ಕಾರಾಗಿದೆ. ಈಗಾಗಲೇ ಕಂಪನಿಯು ಪ್ರೀಮಿಯಂ ಫ್ಲೂಯೆನ್ಸ್, ಕೊಲಿಯೊಸ್ ಎಸ್ ಯುವಿ, ರೆನೊ ಪಲ್ಸ್ ಮತ್ತು ಡಸ್ಟರ್ ಕಾರುಗಳನ್ನು ಪರಿಚಯಿಸಿದೆ.
ನೂತನ ರೆನೊ ಸ್ಕಾಲಾ ಕಾರಿಗೆ ಕಂಪನಿಯು "ಕಂಪ್ಲೀಟ್ ಕೇರ್ ಪ್ಯಾಕೇಜ್" ಜೊತೆಗೆ 2+2 ವರ್ಷ/ 80 ಸಾವಿರ ಕಿ.ಮೀ. ವಾರಂಟಿ ನೀಡಿದೆ. ಇದರ ದರ ಈ ಕೆಳಗಿನಂತೆ ಇದೆ.
ದರ
ಸ್ಕಾಲಾ ಆರ್ ಎಕ್ಸ್ಇ ಪೆಟ್ರೋಲ್: 6.99 ಲಕ್ಷ ರು.
ಆರ್ ಎಕ್ಸ್ಎಲ್ ಪೆಟ್ರೋಲ್: 7.85 ಲಕ್ಷ ರು.
ಸ್ಕಾಲಾ ಆರ್ ಎಕ್ಸ್ ಎಲ್ ಡೀಸೆಲ್: 8.69 ಲಕ್ಷ ರು.
ಆರ್ ಎಕ್ಸ್ ಝಡ್ ಡೀಸೆಲ್: 9.57 ಲಕ್ಷ ರು.


Click it and Unblock the Notifications









