ಸ್ಕಾಲಾ, ವೆರ್ನಾ, ರಾಪಿಡ್: ಯಾರು ಹಿತವರು?

Posted By: Staff

ರೆನೊ ಸ್ಕಾಲಾ ಕಾರಿನ ಜೊತೆ ಹ್ಯುಂಡೈ ವೆರ್ನಾ, ಸ್ಕೋಡಾ ರಾಪಿಡ್ ಕಾರುಗಳನ್ನೊಮ್ಮೆ ಅಳೆದು ತೂಗಿ ನೋಡಬೇಕಿದೆ. ಈ ಮೂರು ಕಾರುಗಳ ದರ ಸಹ ಒಂದಕ್ಕೊಂದು ಪೈಪೋಟಿ ನೀಡುವಂತಿದೆ. ಈ ಮೂವರಲ್ಲಿ ಯಾರು ಹಿತವರು? ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.

ಖಂಡಿತವಾಗಿಯೂ ರೆನೊ ಸ್ಕಾಲಾ ಸೌಂದರ್ಯವು ರಾಪಿಡ್ ಮತ್ತು ವೆರ್ನಾಕ್ಕೆ ಸರಿಸಾಟಿಯಾಗುವುದಿಲ್ಲ. ಆದರೆ ಅವುಗಳಿಗೆ ಪೈಪೋಟಿ ನೀಡುವಂತೆ ಇದೆ ಎನ್ನುವುದನ್ನು ಮರೆಯಲಾಗದು. ಸ್ಕೋಡಾ ರಾಪಿಡ್ ಕಾರಿನ ಸೌಂದರ್ಯಕ್ಕೆ ರಾಪಿಡೇ ಸಾಟಿ. ಫ್ಲೂಡಿಕ್ ವಿನ್ಯಾಸದ ವೆರ್ನಾಕ್ಕೂ ಸ್ಕಾಲಾ ಸಾಟಿಯಾಗದು.

ರೆನೊ ಸ್ಕಾಲಾ ಕಾರಿನ ಇಂಟಿರಿಯರ್ ಅಂದವಾಗಿದೆ. ಸಾಕಷ್ಟು ಫೀಚರುಗಳನ್ನೂ ಒಳಗೊಂಡಿದೆ. ಸ್ಥಳಾವಕಾಶವೂ ಬೊಂಬಾಟ್ ಆಗಿದೆ. ಸ್ಕಾಲಾ ಇಂಟಿರಿಯರ್ ಎಲ್ಲರೂ ಮೆಚ್ಚುವಂತೆ ಇದೆ. ಟೂ ಟೋನ್ ಡ್ಯಾಷ್ ಬೋರ್ಡಿನಿಂದಾಗಿ ರಾಪಿಡ್ ಇಂಟಿರಿಯರ್ ಸಹ ಪ್ರೀಮಿಯಂ ಲುಕ್ ಹೊಂದಿದೆ.

ಟಾಪ್ ಎಂಡ್ ವೆರ್ನಾದಲ್ಲಿ ಸಾಕಷ್ಟು ಫೀಚರುಗಳಿವೆ. ಆದರೆ ಉಳಿದ ವೆರ್ನಾ ಆವೃತ್ತಿಗಳಿಗೆ ಹೋಲಿಸಿದರೆ ರೆನೊ ಸ್ಕಾಲಾ ಅಥವಾ ರಾಪಿಡ್ ಇಂಟಿರಿಯರ್ ಇಷ್ಟವಾಗುತ್ತದೆ. ರೆನೊ ಸ್ಕಾಲಾ ಇಂಟಿರಿಯರ್ ಪ್ರೀಮಿಯಂ ಲುಕ್ಕಿನಿಂದ ಹೆಚ್ಚು ಆಪ್ತವಾಗುತ್ತದೆ.

ಕಾರ್ಯಕ್ಷಮತೆ ವಿಷಯದಲ್ಲಿ ವೆರ್ನಾ ಮತ್ತು ರಾಪಿಡ್ ಹಾರ್ಸ್ ಪವರ್ 100ಕ್ಕಿಂತ ಹೆಚ್ಚಿದೆ. ಆದರೆ ಸ್ಕಾಲಾ ಕೇವಲ 98 ಹಾರ್ಸ್ ಪವರ್ ನೀಡುತ್ತದೆ. ಸ್ಕಾಲಾ ಮೈಲೇಜ್ ಪ್ರತಿಲೀಟರಿಗೆ ಸುಮಾರು 13 ಕಿ.ಮೀ. ಇದೆ. ರಾಪಿಡ್ ಮತ್ತು ವೆರ್ನಾ ಮೈಲೇಜ್ ಪ್ರತಿಲೀಟರಿಗೆ 12ರಿಂದ 12.5 ಕಿ.ಮೀ.ಯಷ್ಟಿದೆ. ಮೈಲೇಜ್ ವಿಷ್ಯದಲ್ಲಿ ಸ್ಕಾಲಾ ಕೊಂಚ ಮುಂದಿದೆ.

ಈ ಮೂರು ಕಾರುಗಳಲ್ಲಿ ಸಾಕಷ್ಟು ವ್ಯತ್ಯಾಸ, ಭಿನ್ನತೆ, ಸಾಮ್ಯತೆಗಳು ಇವೆ. ಹಾಗಂತ ಇವುಗಳಲ್ಲಿ ಇದು ಕಾರು ಉತ್ತಮ, ಇದು ಮಧ್ಯಮ, ಮತ್ತೊಂದು ಅಧಮ ಎಂದು ಇದಮಿತ್ಥಂ ಹೇಳುವ ಹಾಗಿಲ್ಲ. ಯಾಕೆಂದರೆ ಈ ಮೂರು ಕಾರುಗಳು ಅವುಗಳದ್ದೇ ಆದ ವಿಶೇಷತೆಗಳನ್ನು ಹೊಂದಿವೆ.

ರಾಪಿಡ್ ಮತ್ತು ವೆರ್ನಾಕ್ಕೆ ಹೋಲಿಸಿದರೆ ರೆನೊ ಸ್ಕಾಲಾ ಕಾರನ್ನೂ ಕಡೆಗಣಿಸುವಂತಿಲ್ಲವೆನ್ನುವುದು ನಮ್ಮ ಅಭಿಪ್ರಾಯ. ಓದಿ: ರೆನೊ ಸ್ಕಾಲಾ ಕಾರು ರಸ್ತೆಗೆ, ದರ 6.99 ಲಕ್ಷ ರು.

To Follow DriveSpark On Facebook, Click The Like Button
ರೆನೊ ಸ್ಕಾಲಾ ಗ್ರೇಟ್ ಲುಕ್

ರೆನೊ ಸ್ಕಾಲಾ ಗ್ರೇಟ್ ಲುಕ್

ರೆನೊ ಕಾರಿನ ಪ್ರೀಮಿಯಂ ಸೌಂದರ್ಯ ಗಮನ ಸೆಳೆಯುತ್ತಿದೆ. ರೆನೊ ಕಾರು ಆರಾಮದಾಯಕ ಸವಾರಿಗೆ ಸೂಕ್ತವಾಗಿದೆ.

ಗಮನ ಸೆಳೆಯುವ ಫ್ಲೂಡಿಕ್ ವೆರ್ನಾ

ಗಮನ ಸೆಳೆಯುವ ಫ್ಲೂಡಿಕ್ ವೆರ್ನಾ

ವೆರ್ನಾ ಕಾರಿನ ಫ್ಲೂಡಿಕ್ ವಿನ್ಯಾಸವೇ ಇದರ ಯಶಸ್ವಿಗೆ ಕಾರಣವಾಗಿದೆ. ಫ್ಲೂಡಿಕ್ ವಿನ್ಯಾಸದಿಂದಾಗಿ ವೆರ್ನಾ ಕಾರು ಇಷ್ಟವಾಗುತ್ತದೆ.

ಸ್ಕೋಡಾ ರಾಪಿಡ್

ಸ್ಕೋಡಾ ರಾಪಿಡ್

ಸ್ಕೋಡಾ ಕಂಪನಿಯ ರಾಪಿಡ್ ಕೂಡ ಆಕರ್ಷಕ ಕಾರು.

English summary
Car Compare: Renault scala, Hyundai Verna and Skoda Rapid. Interior Compare, Price, Mileage, performance and specification comparison.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark