ರೆನೊ ಸ್ಕಾಲಾ ಕಾರಿನ ಐದು ವಿಶೇಷತೆಗಳು

Posted By:
ಇತ್ತೀಚೆಗೆ ದೇಶದ ರಸ್ತೆಗೆ ರೆನೊ ಸ್ಕಾಲಾವೆಂಬ ಸೆಡಾನ್ ಕಾರು ಆಗಮಿಸಿತ್ತು. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಆರಂಭಿಕ ದರ 6.99 ಲಕ್ಷ ರುಪಾಯಿ. ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 16.95 ಕಿ.ಮೀ ಮತ್ತು ಡೀಸೆಲ್ ಎಂಜಿನ್ ಸುಮಾರು 21.64 ಕಿ.ಮೀ. ಮೈಲೇಜ್ ನೀಡುತ್ತದೆ.

ಸಲಕರಣೆಗಳು: ಇದರಲ್ಲಿರುವ ಈಕ್ವಿಪ್ ಮೆಂಟ್ ಗಳು ಗಮನ ಸೆಳೆಯುತ್ತವೆ. ಟಾಪ್ ಎಂಡ್ ಸ್ಕಾಲಾ ಕಾರಿನಲ್ಲಿ ಬಟನ್ ಸ್ಟಾರ್ಟ್, ಎಬಿಎಸ್, ಏರ್ ಬ್ಯಾಗ್ಸ್, ಕ್ಲೈಮೆಟ್ ಕಂಟ್ರೋಲ್ ಮತ್ತು 2 ಡಿನ್ ಮ್ಯೂಸಿಕ್ ಸಿಸ್ಟಮ್ ಇವೆ.

ಸ್ಟಿಯರಿಂಗ್: ಸಿಟಿ ರಸ್ತೆಯಲ್ಲಿ ಇದರ ಸ್ಟಿಯರಿಂಗ್ ಸುಲಭವಾಗಿ ಬಳಸಬಹುದು. ಇದು ಹಗುರವಾಗಿದ್ದು, ಆರಾಮದಾಯಕತೆಯ ಡ್ರೈವಿಂಗಿಗೆ ಸಹಕರಿಸುತ್ತದೆ.

ಗುಣಮಟ್ಟ: ಸ್ಕಾಲಾ ಕಾರಿನ ಗುಣಮಟ್ಟ ಈ ಸೆಗ್ಮೆಂಟಿನಲ್ಲಿ ಅತ್ಯುತ್ತಮವಾಗಿದೆ. ಅಂದರೆ ಇದರ ಕೆಲವು ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಬೆಟರ್ ಎನಿಸುತ್ತದೆ.

ಸ್ಥಳಾವಕಾಶ: ಇಂಟಿರಿಯರೊಳಗೆ ಸಾಕಷ್ಟು ಸ್ಥಳಾವಕಾಶವಿದೆ. ಲೆಗ್ ರೂಂ ಕೂಡ ಓಕೆ. ಹಿಂಭಾಗದ ಸೀಟಿನಲ್ಲಿ ಇಬ್ಬರೂ ಆರಾಮವಾಗಿ ಕುಳಿತುಕೊಳ್ಳಬಹುದು.

ಡ್ರೈವರ್ ಸೀಟು: ಡ್ರೈವರ್ ಸೀಟಿನಲ್ಲಿ ಎತ್ತರ ಹೊಂದಾಣಿಕೆ ಮಾಡಬಹುದಾದ ಫೀಚರಿದೆ. ಮುಂಭಾಗದ ಸೀಟುಗಳು ಹೆಚ್ಚು ಆರಾಮದಾಯಕವಾಗಿವೆ.

ವಿನ್ಯಾಸ: ರೆನೊ ಸ್ಕಾಲಾ ಕಾರಿನ ಡ್ಯಾಷ್ ಬೋರ್ಡ್ ನಿಸ್ಸಾನ್ ಸನ್ನಿ ಕಾರಿನ ಪಡೆಯಚ್ಚು. ಆದರೂ ಇಲ್ಲಿ ರೆನೊ ಕೊಂಚ ಮಾರ್ಪಾಡು ಮಾಡಿರುವುದರಿಂದ ಆಕರ್ಷಕವಾಗಿದೆ. ರೆನೊ ಡ್ಯಾಷ್ ಬೋರ್ಡ್ ಆಕರ್ಷಕತೆಯೇ ಇದರ ಮೊದಲ ವಿಶೇಷತೆ.

English summary
Top 5 attractions in Renault Scala interior. Renault Scala sedan light steering, standard features, equipment, interior quality etc.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark