ರೆನೊ ಚಿತ್ರಕಥೆ: ಸ್ಕಾಲಾ ಬಂತು ಸ್ಕಾಲಾ

Posted By: Staff

ನೂತನ ರೆನೊ ಸ್ಕಾಲಾ ದೇಶದ ರಸ್ತೆಗಿಳಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯಲ್ಲಿ ಲಭ್ಯವಿರುವ ಸ್ಕಾಲಾ ಸೆಡಾನ್ ಒಟ್ಟು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಸ್ಕಾಲಾ ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 16.95 ಕಿ.ಮೀ ಮತ್ತು ಡೀಸೆಲ್ ಎಂಜಿನ್ ಸುಮಾರು 21.64 ಕಿ.ಮೀ. ಮೈಲೇಜ್ ನೀಡುತ್ತದೆ.

ರೆನೊ ಸ್ಕಾಲಾ ದರ 6.99 ಲಕ್ಷ ರು.ನಿಂದ 9.57 ಲಕ್ಷ ರು.ವರೆಗಿದೆ. ಈ ಕಾರಿನ ಇಂಟಿರಿಯರ್, ಎಕ್ಸ್ ಟೀರಿಯರ್, ಫೀಚರ್ಸ್ ಸೇರಿದಂತೆ ಟೆಕ್ ಮಾಹಿತಿಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಫೊಟೊ ಫೀಚರ್ ವಿಭಾಗದಲ್ಲಿ ನೀಡಿದೆ.

ಮೊದಲ ನೋಟಕ್ಕೆ ರೆನೊ ಸ್ಕಾಲಾ ಥೇಟ್ ನಿಸ್ಸಾನ್ ಸನ್ನಿ ಕಾರಿನಂತೆಯೇ ಇದೆ. ಇದಕ್ಕೆ ಕಾರಣವೂ ಇದೆ. ಇದು ನಿಸ್ಸಾನ್ ಸನ್ನಿ ಕಾರಿನದ್ದೇ ತದ್ರೂಪಿ. ಸ್ಕಾಲಾ ಅಂದರೆ ಸನ್ನಿ ಕಾರಿನ ರೆನೊ ಆವೃತ್ತಿ. ಇವೆರಡು ಜಂಟಿ ಕಂಪನಿಗಳಾಗಿರುವುದರಿಂದ ಕೊಂಚ ಫೀಚರ್ಸ್, ವಿನ್ಯಾಸ ಮತ್ತು ಹೆಸರು ಬದಲಾಯಿಸಿ ಮಾರುಕಟ್ಟೆಗೆ ಹೊಸ ಕಾರುಗಳನ್ನು ಪರಿಚಯಿಸುತ್ತಿರುತ್ತವೆ.

ದೇಶದಲ್ಲಿ ಮಧ್ಯಮ ಗಾತ್ರದ ಸೆಡಾನ್ ಮಾರುಕಟ್ಟೆಯಲ್ಲಿ ನೂತನ ಸ್ಕಾಲಾ ಕಾರಿನ ಮೂಲಕ ಪಾಲು ಹೆಚ್ಚಿಸಿಕೊಳ್ಳಲು ರೆನೊ ನಿರ್ಧರಿಸಿದೆ. ಈಗಾಗಲೇ ನಿಸ್ಸಾನ್ ಸನ್ನಿ ಕಾರು ಜನಪ್ರಿಯವಾಗಿರುವುದರಿಂದ ರೆನೊ ಸ್ಕಾಲಾ ಕೂಡ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

To Follow DriveSpark On Facebook, Click The Like Button
ಸ್ಕಾಲಾ ಹೊರವಿನ್ಯಾಸ

ಸ್ಕಾಲಾ ಹೊರವಿನ್ಯಾಸ

ಕಾರಿನ ಹೊರವಿನ್ಯಾಸ ಆಕರ್ಷಕ. ಕ್ರೋಮ್ ರೇಡಿಯೇಟರ್ ಗ್ರಿಲ್, ಸ್ಮೂಕ್ ಸ್ಟೈಲಿನ ಹೆಡ್ ಲ್ಯಾಂಪ್, ಡ್ಯೂಯಲ್ ಟೋನ್ ರಿಯರ್ ಬಂಪ್, ಕ್ರೋಮ್ ಫಿನಿಶ್ ಡೋರ್ ಹ್ಯಾಂಡಲ್ ಮತ್ತು 15 ಇಂಚಿನ ಅಲಾಯ್ ವೀಲುಗಳು ಗಮನ ಸೆಳೆಯುತ್ತದೆ.

ಸ್ಕಾಲಾ ಕಾರಿಗೊಂದು ಸುತ್ತು

ಸ್ಕಾಲಾ ಕಾರಿಗೊಂದು ಸುತ್ತು

ನಿಸ್ಸಾನ್ ಸನ್ನಿಗಿಂತಲೂ ನೂತನ ರೆನೊ ಸ್ಕಾಲಾ ಹೆಚ್ಚು ಪ್ರೀಮಿಯಂ ಲುಕ್ ಹೊಂದಿದೆ. ಬನ್ನಿ ಕಾರಿನ ಒಳಭಾಗಕ್ಕೆ ಪ್ರವೇಶಿಸೋಣ. ಮುಂದಿನ ಬಟನ್ ಕ್ಲಿಕ್ ಮಾಡಿರಿ.

ಇಂಟಿರಿಯರ್ ಗೆ ಇಣುಕಿ

ಇಂಟಿರಿಯರ್ ಗೆ ಇಣುಕಿ

ರೆನೊ ಸ್ಕಾಲಾ ಕಾರಿನ ಒಳಭಾಗವು ಅತ್ಯುತ್ತಮ ಗುಣಮಟ್ಟದ ಮತ್ತು ಆರಾಮದಾಯಕ ಫೀಚರುಗಳನ್ನು ಹೊಂದಿದೆ. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ತಂಪಾದ ಪ್ರಯಾಣಕ್ಕೆ ನೆರವಾಗುತ್ತದೆ.

ಮೆತ್ತನೆಯ ಸೀಟುಗಳು

ಮೆತ್ತನೆಯ ಸೀಟುಗಳು

ಪ್ರೀಮಿಯಂ ಲೆದರ್ ಸೀಟುಗಳು, ಚರ್ಮದ ಹೊದಿಕೆ ಕಾರಿನ ಲುಕ್ ಮತ್ತು ಕಂಫರ್ಟ್ ಹೆಚ್ಚಿಸಿದೆ.

ಸೇಫ್ಟಿ ಮುಖ್ಯ

ಸೇಫ್ಟಿ ಮುಖ್ಯ

ರೆನೊ ಸ್ಕಾಲಾ ಕಾರಿನಲ್ಲಿ ಸಾಕಷ್ಟು ಆ್ಯಕ್ಟಿವ್ ಮತ್ತು ಪ್ಯಾಸಿವ್ ಸುರಕ್ಷತೆಯ ಫೀಚರುಗಳಿವೆ. ಡ್ರೈವರ್ ಮತ್ತು ಪ್ಯಾಸೆಂಜರ್ ಏರ್ ಬ್ಯಾಗ್ ಸೇರಿದಂತೆ ಹಲವು ಸುರಕ್ಷತೆಯ ಫೀಚರುಗಳಿವೆ.

English summary
French Auto maker has launched its A3 segment sedan for India, in the form of Renault Scala. The Scala is a revamped version of the Nissan Sunny, and for Renault this launch makes its the fifth car for India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark