ಸನ್ನಿ ತದ್ರೂಪಿ, ರೆನೊ ಸ್ಕಾಲಾ ಸೆಪ್ಟಂಬರ್ ತಿಂಗಳಲ್ಲಿ ರಸ್ತೆಗೆ

ಇತ್ತೀಚೆಗೆ ರೆನೊ ಕಂಪನಿಯು ನೂತನ ಸ್ಕಾಲಾ ಕಾರನ್ನು ಅಲ್ಲಲ್ಲಿ ಟೆಸ್ಟ್ ಮಾಡುತ್ತಿರುವುದು ಬಹಿರಂಗವಾಗಿದೆ. ದೇಶದಲ್ಲಿ ರೆನೊ ಬೆಳವಣಿಗೆಗಳನ್ನು ಕನ್ನಡ ಡ್ರೈವ್ ಸ್ಪಾರ್ಕ್ ಕುತೂಹಲದಿಂದ ನೋಡುತ್ತಿದೆ. ಇದೀಗ ನಮಗೆ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ನೂತನ ಸ್ಕಾಲಾ ಕಾರನ್ನು ರೆನೊ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿರುವುದು ಖಚಿತವಾಗಿದೆ.

ಮೊದಲ ನೋಟಕ್ಕೆ ರೆನೊ ಸ್ಕಾಲಾ ಥೇಟ್ ನಿಸ್ಸಾನ್ ಸನ್ನಿ ಕಾರಿನಂತೆಯೇ ಇದೆ. ಇದಕ್ಕೆ ಕಾರಣವೂ ಇದೆ. ಇದು ನಿಸ್ಸಾನ್ ಸನ್ನಿ ಕಾರಿನದ್ದೇ ತದ್ರೂಪಿ. ಸ್ಕಾಲಾ ಅಂದರೆ ಸನ್ನಿ ಕಾರಿನ ರೆನೊ ಆವೃತ್ತಿ. ಇವೆರಡು ಜಂಟಿ ಕಂಪನಿಗಳಾಗಿರುವುದರಿಂದ ಕೊಂಚ ಫೀಚರ್ಸ್, ವಿನ್ಯಾಸ ಮತ್ತು ಹೆಸರು ಬದಲಾಯಿಸಿ ಮಾರುಕಟ್ಟೆಗೆ ಹೊಸ ಕಾರುಗಳನ್ನು ಪರಿಚಯಿಸುತ್ತಿರುತ್ತವೆ.

ದೇಶದಲ್ಲಿ ಮಧ್ಯಮ ಗಾತ್ರದ ಸೆಡಾನ್ ಮಾರುಕಟ್ಟೆಯಲ್ಲಿ ನೂತನ ಸ್ಕಾಲಾ ಕಾರಿನ ಮೂಲಕ ಪಾಲು ಹೆಚ್ಚಿಸಿಕೊಳ್ಳಲು ರೆನೊ ನಿರ್ಧರಿಸಿದೆ. ಈಗಾಗಲೇ ನಿಸ್ಸಾನ್ ಸನ್ನಿ ಕಾರು ಜನಪ್ರಿಯವಾಗಿರುವುದರಿಂದ ರೆನೊ ಸ್ಕಾಲಾ ಕೂಡ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಸನ್ನಿಗೆ ಹೋಲಿಸಿದರೆ ನೂತನ ರೆನೊ ಸ್ಕಾಲಾ ಕಾರಿನಲ್ಲಿ ಯಾವ ಬದಲಾವಣೆ ಇರಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಂತಹ ಯಾವುದೇ ಬದಲಾವಣೆಗಳು ಇಲ್ಲ. ಈ ಕಾರು ನಿಸ್ಸಾನ್ ಸನ್ನಿಯಂತೆಯೇ ಇದೆ. ಆದಗ್ಯೂ ಒಂದಿಷ್ಟು ಕಾಸ್ಮೆಟಿಕ್ ವಿನ್ಯಾಸದಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಅಂದ್ರೆ ಇವೆರಡು ಕಾರುಗಳ ನಡುವೆ ಮೇಕಪ್ ಕೊಂಚ ಬದಲಾಗಬಹುದು.

ಕೆಲವು ತಿಂಗಳ ಹಿಂದೆ ರೆನೊ ಕಂಪನಿಯು ಪಲ್ಸ್ ಎಂಬ ಕಾರು ಪರಿಚಯಿಸಿತ್ತು. ನಿಜ ಹೇಳಬೇಕೆಂದರೆ ಆ ಪಲ್ಸ್ ಬೇರಾವುದೇ ಕಾರಲ್ಲ. ನಿಸ್ಸಾನ್ ಮೈಕ್ರಾದ ತದ್ರೂಪಿ ಕಾರು. ಆದಗ್ಯೂ ಹೊರನೋಟಕ್ಕೆ ರೆನೊ ಪಲ್ಸ್ ಮತ್ತು ನಿಸ್ಸಾನ್ ಮೈಕ್ರಾದ ನಡುವೆ ಕೊಂಚ ಭಿನ್ನತೆ ಕಾಣುತ್ತದೆ. ಅದೇ ರೀತಿ ನೂತನ ರೆನೊ ಸ್ಕಾಲಾ ಮತ್ತು ನಿಸ್ಸಾನ್ ಸನ್ನಿ ನಡುವೆ ಮೇಕಪ್ ಬದಲಾವಣೆ ಇರಬಹುದು.

ಯಾವುದಕ್ಕೂ ನಿಸ್ಸಾನ್ ಸನ್ನಿ ಟೆಸ್ಟ್ ಡ್ರೈವ್ ಒಮ್ಮೆ ಓದಿಕೊಳ್ಳಿ.

More from DriveSpark

Article Published On: Friday, August 24, 2012, 9:54 [IST]
English summary
Renault Scala has being doing its fair share of testing in India. Drivespark is keeping a close tab on Renault's developments in India. The French auto-maker would be rolling out their Scala sedan for India in September, 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+