ಪ್ರೀಮಿಯಂ ಸಹ ಬ್ರಾಂಡ್ ಪರಿಚಯಿಸಲು ರೆನೊ ಚಿಂತನೆ
ನಿಸ್ಸಾನ್ ಕಂಪನಿಯ ಇನ್ಫಿನಿಟಿ ಮತ್ತು ಮತ್ತು ಟೊಯೊಟಾ ಕಂಪನಿಯ ಲೆಕ್ಸಾಸ್ ಸಹ ಬ್ರಾಂಡಿನಂತೆ ರೆನೊ ಕಂಪನಿಯು ನೂತನ ಇನಿಷಿಯೆಲ್ ಬ್ರಾಂಡ್ ಹೊರತರಲಿದೆ. ಉಪ ಬ್ರಾಂಡೊಂದರ ಮೂಲಕ ದುಬಾರಿ ಕಾರುಗಳನ್ನು ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ.
ದೇಶದಲ್ಲಿ ರೆನೊ ಕಂಪನಿಯು ಪಲ್ಸ್ ಇತ್ಯಾದಿ ಅಗ್ಗದ ಬೈಕುಗಳನ್ನು ಪರಿಚಯಿಸಿದೆ. ಆದರೆ ಇನ್ಮುಂದೆ ದುಬಾರಿ ದರದ ಕಾರು ಮಾರುಕಟ್ಟೆಗೂ ರೆನೊ ಲಗ್ಗೆಯಿಡಲಿದೆ. ಅಂದರೆ ಕಂಪನಿಯು ಸಣ್ಣ ಕಾರು ಮಾರಾಟದ ಜೊತೆಜೊತೆಗೆ ಪ್ರೀಮಿಯಂ ಕಾರು ಸೆಗ್ಮೆಂಟಿಗೂ ಪ್ರವೇಶಿಸಲಿದೆ.
ರೆನೊ ಕಾರು ಕಂಪನಿಯು ಈ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಡೆಝಿರ್ ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿತ್ತು. ಗಂಟೆಗೆ ಗರಿಷ್ಠ 180 ಕಿ.ಮೀ. ವೇಗದ ಈ ಕಾನ್ಸೆಪ್ಟ್ ಕಾರು ಜಗತ್ತಿನ ಗಮನ ಸೆಳೆದಿತ್ತು.
ರೆನೊ ಕಂಪನಿಯು ದೇಶದ ಸಣ್ಣಕಾರು ಮಾರುಕಟ್ಟೆಯತ್ತಲೂ ಗಂಭೀರವಾಗಿ ದೃಷ್ಟಿಹರಿಸಿದೆ. ಕಂಪನಿಯು ಸುಮಾರು 4 ಲಕ್ಷ ರುಪಾಯಿಗಿಂತ ಅಗ್ಗದ ಸಣ್ಣಕಾರನ್ನು ಪರಿಚಯಿಸುವ ಯೋಜನೆಯನ್ನೂ ಇತ್ತೀಚೆಗೆ ಪ್ರಕಟಿಸಿತ್ತು. ರೆನೊ ಪಲ್ಸ್ ದರ 5.77 ಲಕ್ಷ ರು.ನಿಂದ 6.25 ಲಕ್ಷ ರು. ಆಸುಪಾಸಿನಲ್ಲಿದೆ.


Click it and Unblock the Notifications









