ರೆನೊ ಡಸ್ಟರ್ ಲಾಂಚ್ ಆಗಿಲ್ಲ, ಆದ್ರೆ ಬುಕ್ಕಿಂಗ್ ಶುರು
ನಿಮಗೆ ಡಸ್ಟರ್ ಎಸ್ ಯುವಿ ಇಷ್ಟವಾಗಿದ್ದರೆ ಬುಕ್ಕಿಂಗ್ ರಷ್ ನಲ್ಲಿ ಪರದಾಡಬೇಡಿ. ಈಗಾಗಲೇ ಬುಕ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇದರಿಂದ ವೇಟಿಂಗ್ ಪಿರೆಯಿಡ್ ಕೂಡ ಕಡಿಮೆಯಾಗಲಿದೆ.
ಆದರೆ ಕೆಲವು ವಾಹನ ವಿಶ್ಲೇಷಕರ ಪ್ರಕಾರ ಡಸ್ಟರ್ ಈಗಲೇ ಬುಕ್ಕಿಂಗ್ ಮಾಡುವುದು ರಿಸ್ಕ್. ಯಾಕೆಂದರೆ ಕಂಪನಿಯು ಡಸ್ಟರ್ ಕುರಿತು ಇನ್ನೂ ಸಂಪೂರ್ಣ ಮಾಹಿತಿ ನೀಡಿಲ್ಲವೆನ್ನುವುದು ಇವರ ದೂರು. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವುದ್ಯಾಕೆ ಎನ್ನುವುದು ಕೂಡ ಸರಿ. ಆದರೆ ಡಸ್ಟರ್ ಜಾಗತಿಕ ಉತ್ಪನ್ನವಾಗಿರುವ ಕಾರಣ ಭಯಬೀಳದೇ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಕೆಲವು ವಾಹನ ವಿಶ್ಲೇಷಕರು ಹೇಳುತ್ತಾರೆ.
ರೆನೊ ಇಂಡಿಯಾ ವೆಬ್ ತಾಣದಲ್ಲಿ ಡಸ್ಟರ್ ಫೀಚರ್ಸ್ ಪಟ್ಟಿ ನೀಡಿದೆ. ಡಸ್ಟರ್ ಎಸ್ ಯುವಿ ದರ ಸುಮಾರು 10 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಈ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ನಲ್ಲಿರುವ ಫೀಚರುಗಳ ಪಟ್ಟಿ ಇಲ್ಲಿದೆ.
* ಆಕ್ಸ್ ಇನ್ ಮತ್ತು ಬ್ಲೂಟೂಥ್ ಸಂಪರ್ಕದೊಂದಿಗೆ ಮ್ಯೂಸಿಕ್ ಸಿಸ್ಟಮ್
* ನಾಲ್ಕು ಸ್ಪೀಕರುಗಳು
* ಸ್ಯಾಟಲೈಟ್ ಆಡಿಯೊ
* ಫೋನ್ ಕಂಟ್ರೋಲ್
* ಕೀಲೆಸ್ ಎಂಟ್ರಿ
* ಹಿಂಭಾಗದ ಡಿಫಾಗರ್
* ಹಿಂಭಾಗದ ವೈಪರ್ ಮತ್ತು ವಾಷರ್
* ಎಲೆಕ್ಟ್ರಾನಿಕ್ ಮಿರರ್
* ಕಾರಿನ ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್
* ಮುಂಭಾಗದಲ್ಲಿ ಫಾಗ್ ಲ್ಯಾಂಪ್ ಇತ್ಯಾದಿ
ಸುರಕ್ಷತೆಯ ಫೀಚರುಗಳು
* ಡ್ಯೂಯಲ್ ಫ್ರಂಟ್ ಏರ್ ಬ್ಯಾಗುಗಳು
* ಬ್ರೇಕ್ ಅಸಿಸ್ಟ್ ಜೊತೆಗೆ ಎಬಿಎಸ್
* ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್
ನೂತನ ಡಸ್ಟರ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ 1.6 ಲೀಟರಿನ ಎಂಪಿಎಫ್ಐ ಪೆಟ್ರೋಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಇದು 105 ಹಾರ್ಸ್ ಪವರ್ ಮತ್ತು ಪ್ರತಿಲೀಟರಿಗೆ 13 ಕಿ.ಮೀ. ಮೈಲೇಜ್ ನೀಡಲಿದೆ. 1.5 ಲೀಟರಿನ ಡಿಎಸ್ಐ ಎಂಜಿನ್ 85 ಹಾರ್ಸ್ ಪವರ್ ಮತ್ತು 19 ಮೈಲೇಜ್ ನೀಡಲಿದೆ.


Click it and Unblock the Notifications









