ಮಹೀಂದ್ರ ರೇವಾ ಎನ್ಎಕ್ಸ್ಆರ್ ಆಗಮನ ಸನ್ನಿಹಿತ?
ಬಹುನಿರೀಕ್ಷಿತ ಪರಿಸರ ಸ್ನೇಹಿ ರೇವಾ ಎನ್ಎಕ್ಸ್ಆರ್ ಉತ್ಪಾದನೆಗಾಗಿ ದೇಶದ ಪ್ರಪ್ರಥಮ ಎಲೆಕ್ಟ್ರಿಕ್ ವಾಹನ ಘಟಕವನ್ನು ಮಹೀಂದ್ರ ನಿರ್ಮಿಸಲಿದೆ. ನೂತನ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವು ಮುಂದಿನ ತಿಂಗಳು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ.
ಮಹೀಂದ್ರ ಕಂಪನಿಯ ಮಹೀಂದ್ರ ರೇವಾ ಎನ್ಎಕ್ಸ್ಆರ್ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರಾಗಿದೆ. ಸುಮಾರು 5 ಲಕ್ಷ ರು. ಆಸುಪಾಸಿನಲ್ಲಿ ಈ ಕಾರು ದೇಶದ ರಸ್ತೆಗೆ ಶೀಘ್ರದಲ್ಲಿ ಆಗಮಿಸಲಿದೆ. ನೂತನ ಎನ್ ಎಕ್ಸ್ಆರ್ ಸದ್ಯ ರಸ್ತೆಯಲ್ಲಿರುವ ರೇವಾ ಐಗಿಂತ ಅತ್ಯುತ್ತಮ ವಿನ್ಯಾಸ ಮತ್ತು ವಿಶಾಲ ಸ್ಥಳಾವಕಾಶ ಹೊಂದಿದೆ.

ರೇವಾ ಐಗಿಂತ ನೂತನ ಎನ್ಎಕ್ಸ್ಆರ್ ದರವೂ ಕೊಂಚ ಹೆಚ್ಚಿದೆ ಅಷ್ಟೇ. ಸದ್ಯ ರೇವಾ ಐ ದರ ಸುಮಾರು 3.75 ಲಕ್ಷ ರು.ನಿಂದ 4.5 ಲಕ್ಷ ರುಪಾಯಿ ಇದೆ.
ರೇವಾ ಎನ್ಎಕ್ಸ್ಆರ್ ಎರಡು ಡೋರಿನ ಪುಟ್ಟಕಾರಾಗಿದೆ. ಈ ಕಾರಿನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. ಇದು ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಇದರಲ್ಲಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.
ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 120 ಕಿ.ಮೀ. ಪ್ರಯಾಣಿಸಲು ಸಾಧ್ಯವಿದೆ. ನವೆಂಬರ್ ವೇಳೆಗೆ ನೂತನ ಕಾರು ವಾಹನ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.


Click it and Unblock the Notifications








