ರೋಲ್ಸ್ ರಾಯ್ಸ್ ಹೊಂದಿರುವ 7 ಸೆಲೆಬ್ರಿಟಿಗಳ ಪಟ್ಟಿ
ಇದು ಸ್ವಲ್ಪ ಹಿಂದಿನ ವಿಚಾರ. ಪ್ರಸ್ತುತ ಸಾಲದ ಸುಳಿಯಲ್ಲಿ ಸಿಲುಕಿರುವ ಮದ್ಯದೊರೆ ವಿಜಯ್ ಮಲ್ಯ ಫೋರ್ಬ್ಸ್‌ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಆದರೆ ಕಿಂಗ್ ಫಿಶರ್ ವ್ಯೋಮಯಾನ ಸಂಸ್ಥೆ ಧರೆಗುಳಿದ ಬಳಿಕವಂತೂ ತಮ್ಮ ಸ್ಥಾನ ಕಳೆದುಕೊಳ್ಳುವಂತಾಗಿತ್ತು.
ಪ್ರಸ್ತುತ ನಾವು ದೇಶದಲ್ಲಿ ದುಬಾರಿ ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಅಂದ ಹಾಗೆ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಡೆಯ ವಿಜಯ್ ಮಲ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಐಷಾರಾಮಿ ರೋಲ್ಸ್ ರಾಯ್ಸ್ ಪ್ರೇಮಿಯಾಗಿದ್ದಾರೆ.
ಎಲ್ಲ ಆತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ರೋಲ್ಸ್ ರಾಯ್ಸ್‌ನಲ್ಲಿ ಸವಾರಿ ಮಾಡುವುದು ಬಹುತೇಕರ ಕನಸಾಗಿರುತ್ತದೆ. ಹೌದು, ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಇಂಧನ ಕ್ಷಮತೆಯು ಈ ಲಗ್ಷುರಿ ಕಾರಿನ ಫೀಚರ್ಸ್ ಆಗಿದೆ. ಈ ಕಾರಿನ ಲೋಕಪ್ರಿಯತೆಯಿಂದಲೇ ಬಹುತೇಕ ಸೆಲೆಬ್ರಿಟಿಗಳು ಇದನ್ನು ಹೊಂದಿರಲು ಬಯಸುತ್ತಾರೆ. ಇನ್ನು ಹೇಳಬೇಕೆಂದರೆ ಭಾರತೀಯ ಸೆಲೆಬ್ರಿಟಿಗಳ ನಡುವೆಯಂತೂ ಇದನ್ನು ಪಡೆಯುವುದು ಪೈಪೋಟಿಯ ವಿಚಾರವಾಗಿಬಿಟ್ಟಿದೆ.
ಮೂಲತ: ಬ್ರಿಟಿಷ್ ಮೂಲದ ಕಂಪನಿಯಾಗಿರುವ ರೋಲ್ಸ್ ರಾಯ್ಸ್‌ನ ಘೋಸ್ಟ್ ಹಾಗೂ ಫ್ಯಾಂಟಮ್ ಮಾಡೆಲ್ ವಿಶ್ವದೆಲ್ಲೆಡೆ ಭಾರಿ ಜನಮನ್ನಣೆ ಗಳಿಸಿದೆ. ಇಷ್ಟೇ ಯಾಕೆ ಮೈಸೂರು ಮಹಾರಾಜರು ಸೇರಿದಂತೆ ಹಿಂದಿನ ರಾಜ ಮಹಾರಾಜರು ಸಹ ರೋಲ್ಸ್ ರಾಯ್ಸ್ ಹೊಂದಿರುತ್ತಿದ್ದರು.

ಮಲ್ಯ ರಾಯಲ್ ಸವಾರಿ
ಪ್ರಸ್ತುತ ಸಾಲದ ಸುಳಿಯಲ್ಲಿ ಸಿಲುಕಿರುವ ಮದ್ಯದೊರೆ ವಿಜಯ್ ಮಲ್ಯ ಅವರು ರೋಲ್ಸ್ ರಾಯ್ಸ್ ಆಕರ್ಷಕ ಘೋಸ್ಟ್ ಕಾರನ್ನು ಹೊಂದಿದ್ದಾರೆ.

ರೋಲ್ಸ್ ರಾಯ್ಸ್ ಅಭಿಮಾನಿ ಅಮಿತಾಬ್
ಭಾರತೀಯ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಕೂಡಾ ರೋಲ್ಸ್ ರಾಯ್ಸ್ ಅಭಿಮಾನಿಯಾಗಿದ್ದಾರೆ. ಆಡಿ, ಬಿಎಂಡಬ್ಲ್ಯುಗಳಂತಹ ದುಬಾರಿ ಕಾರುಗಳಿದ್ದರೂ ರೋಲ್ಸ್ ರಾಯ್ಸ್‌ನಲ್ಲಿ ಸವಾರಿ ಮಾಡುವುದನ್ನು ಬಿಗ್ ಬಿ ಇಷ್ಟಪಡುತ್ತಾರೆ.

ಅಮೀರ್ ಕೂಡಾ ರೋಲ್ಸ್ ರಾಯ್ಸ್ ಪ್ರೇಮಿ
ಬಾಲಿವುಡ್‌ನಲ್ಲಿ Mr. perfectionist (ಪರಿಪೂರ್ಣತಾವಾದಿ) ಎಂದೇ ಖ್ಯಾತಿ ಪಡೆದಿರುವ ಅಮೀರ್ ಖಾನ್ ಕೂಡಾ ರೋಲ್ಸ್ ರಾಯ್ಸ್‌ನ ದುಬಾರಿ ಘೋಸ್ಟ್ ಹೊಂದಿರುವ. ಅಮೀರ್ ಖರೀದಿಸಿರುವ ಈ ದುಬಾರಿ ಕಾರಿನ ದರ 3.11 ಕೋಟಿ ರೂಪಾಯಿಗಳಾಗಿವೆ.

ಮಾನ್ಯತ ದತ್ತಳ ರಾಯಲ್ ಸವಾರಿ
ಬಾಲಿವುಡ್‌ನ ವಿಲನ್ ಸಂಜಯ್ ದತ್ತ್ ಅವರ ಧರ್ಮಪತ್ನಿ ಮಾನ್ಯತ ದತ್ತ ಕೂಡಾ ಆಕರ್ಷಕ ರೋಲ್ಸ್ ರಾಯ್ಸ್ ಕಾರು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಸಂಜಯ್ ತಮ್ಮ ಪ್ರಿಯ ಪತ್ನಿಗೆ ಈ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದರು.

ರೋಲ್ಸ್ ರಾಯ್ಸ್‌ನಲ್ಲಿ ಚೀರಂಜೀವಿ
ತೆಲುಗು ಚಿತ್ರರಂಗದ ಜನಪ್ರಿಯ ನಟ ಚೀರಂಜೀವಿ ಕೂಡಾ ಈ ಬ್ರಿಟಿಷ್ ಕಾರಿನ ಅಭಿಮಾನಿಯಾಗಿದ್ದಾರೆ. ಅಲ್ಲದೆ ತಮ್ಮ ಪುತ್ರ ಹಾಗೂ ನಟ ರಾಮಚರಣ್ ತೇಜಾ ಅವರಿಂದ ರೋಲ್ಸ್ ರಾಯ್ಸ್ ಫಾಟಂ ಉಡುಗೊರೆಯಾಗಿ ಪಡೆದಿದ್ದರು.

ರೋಲ್ಸ್ ರಾಯ್ಸ್ ಅಭಿಮಾನಿ ವಿಜಯ್
ದಕ್ಷಿಣ ಭಾರತದ ಜನಪ್ರಿಯ ನಟ ವಿಜಯ್ ಕೂಡಾ ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ್ದಾರೆ. ಪ್ರಸ್ತುತ ತುಪಾಕಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವಂತೆಯೇ ವಿಜಯ್ ರೋಲ್ಸ್ ರಾಯ್ಸ್ ಖರೀದಿಸಿ ಸುದ್ದಿ ಗಿಟ್ಟಿಸಿಕೊಂಡಿದ್ದಾರೆ.

ನಿರ್ದೇಶಕ ಶಂಕರ್ ಕೂಡಾ ಘೋಸ್ಟ್ ಅಭಿಮಾನಿ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ಅದ್ಭುತ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಶಂಕರ್ ಕೂಡಾ ರೋಲ್ಸ್ ರಾಯ್ಸ್‌ನ ಘೋಸ್ಟ್ ಕಾರು ಹೊಂದಿದ್ದಾರೆ.

ಸೆಲೆಬ್ರಿಟಿಗಳ ಘೋಸ್ಟ್ ಸವಾರಿ
ರೋಲ್ಸ್ ರಾಯ್ಸ್ ಕಾರು ಸೆಲೆಬ್ರಿಟಿಗಳ ಪಾಲಿಗಂತೂ ಮನಮೆಚ್ಚಿದ ಕಾರು ಆಗಿದೆ. ಅಲ್ಲದೆ ಭಾರತದಲ್ಲಂತೂ ಸೆಲೆಬ್ರಿಟಿಗಳು ರೋಲ್ಸ್ ರಾಯ್ಸ್ ಖರೀದಿಸುವುದು ಪೈಪೋಟಿಯ ವಿಚಾರವಾಗಿಬಿಟ್ಟಿದೆ.
ಇವನ್ನು ಓದಿ
ಬಳ್ಳಾರಿಯಲ್ಲಿ ರೋಲ್ಸ್ ರಾಯ್ಸ್ ಪ್ಯಾಂಟಮ್ ಯಾರಲ್ಲಿದೆ?
ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್


Click it and Unblock the Notifications








