ಕರೀನಾ ಐಟಂ ಸಾಂಗ್‌ಗೆ ಸಲ್ಮಾನ್ ಬಂಪರ್ ಉಡುಗೊರೆ
ಒಂದು ಸಿನಿಮಾದ ಐಟಂ ಸಾಂಗ್‌ನಲ್ಲಿ ಕುಣಿದ್ರೆ ನಟಿಯೊಬ್ಳು ಎಷ್ಟು ಸಂಭಾವನೆ ಪಡೆಯಬಹುದು? ಕೆಲವು ಸಾವಿರ ರು.ನಿಂದ ಲಕ್ಷ ಲಕ್ಷ ರುಪಾಯಿ ಪಡೆಯುವ ನಟಿಯರಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಆದ್ರೆ ಜನಪ್ರಿಯ ಸುಂದರಿ ಕರೀನಾ ಕಪೂರ್ ಮಾತ್ರ ಧನಸಂಭಾವನೆಗೆ ಒಲ್ಲೆ ಎನ್ನುತ್ತಿದ್ದಾಳಂತೆ. ಅವ್ಳಿಗೆ ಮತ್ತೇನೋ ಬೇಕಂತೆ!
ಇದೇ ಸಮಯದಲ್ಲಿ ಸಲ್ಮಾನ್ ಖಾನ್ ತುಂಬಾ ಖುಷಿಯಲ್ಲಿದ್ದಾನಂತೆ. ದಬಾಂಗ್ 2 ಚಿತ್ರದಲ್ಲಿ ಐಟಂ ಹಾಡಿಗೆ ಗರಿಗೆದರಿ ಕುಣಿಯಲು ಕರೀನಾ ಕಪೂರ್ ಒಪ್ಪಿದ್ದು ಖಾನ್ ಸಂಭ್ರಮಕ್ಕೆ ಕಾರಣ. ಅವ್ಳಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಲು ಸಲ್ಮಾನ್ ಮನಸ್ಸು ಮಾಡಿದ್ದಾನಂತೆ!
ಕರೀನಾ ಯಾವ ಕಾರನ್ನು ಗಿಫ್ಟಾಗಿ ಪಡೆಯಲಿದ್ದಾಳೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಒಂದು ವರದಿಯ ಪ್ರಕಾರ ಸಲ್ಮಾನ್ ಖಾನ್ ಬಿಎಂಡಬ್ಲ್ಯು 7 ಸೀರಿಸ್ ಕಾರನ್ನೇ ಕರೀನಾಳಿಗೆ ಕೊಡಲಿದ್ದಾನಂತೆ! ಈ ಕುರಿತು ಸಲ್ಮಾನ್ ಸಹಚರರು ಕಾರುಡೀಲಿಂಗ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ ಎನ್ನುತ್ತವೆ ಮೂಲಗಳು.
ಆಕೆಯ ಬೇಡಿಕೆಗಳಿಗೆಲ್ಲ ಹೂಂಗುಟ್ಟಿದ್ದರೆ ಮಾತ್ರ ಐಟಂ ಸಾಂಗ್‌ನಲ್ಲಿ ಭಾಗವಹಿಸಲಿದ್ದಾಳೆ ಎಂದು ಈ ಹಿಂದೆ ಹೇಳಲಾಗಿತ್ತು. ಇದಕ್ಕಾಗಿ ಆಕೆ ಭಾರಿ ಮೊತ್ತದ ಸಂಭಾವನೆಯ ಬೇಡಿಕೆಯನ್ನಿಟ್ಟಿದ್ದಳು ಎನ್ನಲಾಗಿದೆ. ವದಂತಿಗಳಿಗೆ ಎಲ್ಲ ತೆರೆಯೆಳೆದಂತೆ ಇತ್ತೀಚೆಗೆ ಈಕೆ ಐಟಂ ಸಾಂಗ್‌ನಲ್ಲಿ ಕುಣಿಯಲು ಸಮ್ಮತಿ ಎಂದಿದ್ದಾಳೆ.
ಐಟಂ ಸಾಂಗ್‌ಗೆ ಇಷ್ಟೋಂದು ಡಿಮ್ಯಾಂಡ್ ಮಾಡ್ಬೇಕಾ ಎನ್ನೋ ಡೌಟ್ ನಿಮ್ಗೆ ಬರಬಹುದು. . ಆದ್ರೆ ಈ ಸಿನಿಮಾದಲ್ಲಿ ಈ ಐಟಂ ಸಾಂಗ್ ತುಂಬಾ ಮುಖ್ಯವಾದದಂತೆ. ಅಂದ್ರೆ ಮಾಮೂಲಿ ಐಟಂ ಸಾಂಗ್‌ಗಳಿಗಿಂತ ಸಮ್‌ಥಿಂಗ್ ಡಿಫರೆಂಟ್ ಇರಲಿದೆಯಂತೆ. ಕಾರು ಕಾಣಿಕೆಯ ಹಿನ್ನಲೆಯಲ್ಲಿ ಈಕೆ ಖಾನ್ ಚಿತ್ರದಲ್ಲಿ ಯಾವುದೇ ಧನ ಸಂಭಾವನೆ ಪಡೆಯದಿರಲು ನಿರ್ಧರಿಸಿದ್ದಾಳಂತೆ. ಈ ಕುರಿತು ಹೆಚ್ಚಿನ ಮಾಹಿತಿ ಕನ್ನಡ ಒನ್ ಇಂಡಿಯಾ ಸಿನಿಮಾ ವಿಭಾಗದಲ್ಲಿ ದಲ್ಲಿ ಪಡೆಯಿರಿ.
ಬಿಎಂಡಬ್ಲ್ಯು 7 ಸೀರಿಸ್: ದೇಶದ ರಸ್ತೆಯಲ್ಲಿರುವ ಬಿಎಂಡಬ್ಲ್ಯು 7 ಸೀರಿಸ್ ಕಾರ್ ಗಳು ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ದೇಶದಲ್ಲಿ ಬಿಎಂಡಬ್ಲ್ಯು ಹಲವು ಆವೃತ್ತಿ ಆಯ್ಕೆಗಳಲ್ಲಿ ದೊರಕುತ್ತದೆ. ಇದರ ದರ ಸುಮಾರು 83 ಸಾವಿರ ರುಪಾಯಿಯಿಂದ 1.31 ಕೋಟಿ ರುಪಾಯಿವರೆಗಿದೆ.


Click it and Unblock the Notifications









