ಕತ್ರಿನಾಗೆ ಹಳೆ ಬಾಯ್ ಫ್ರೆಂಡಿನ ಹೊಸ ಗಿಫ್ಟ್

ತನ್ನ ಪ್ರೀತಿಪಾತ್ರರಿಗೆ, ಅತ್ಮೀಯರಿಗೆ, ಸ್ನೇಹಿತರಿಗೆ ದುಬಾರಿ ಕಾರು ಉಡುಗೊರೆ ನೀಡುವುದರಲ್ಲಿ ಸಲ್ಮಾನ್ ಖಾನ್ ಎತ್ತಿದ ಕೈ. ಪ್ರೇಯಸಿ ಸ್ಥಾನಕ್ಕೆ ಕೈಕೊಟ್ಟ "ಬೆಸ್ಟ್ ಫ್ರೆಂಡ್" ಕತ್ರಿನಾ ಕೈಫ್ ಗೂ ದುಬಾರಿ, ಅದ್ದೂರಿ ಕಾರೊಂದನ್ನು ಸಲ್ಲು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವುದು ಈಗ ರಹಸ್ಯವಾಗಿ ಉಳಿದಿಲ್ಲ.
ಆಡಿ ಕಂಪನಿಯ ಲೇಟೆಸ್ಟ್ ದುಬಾರಿ ಕಾರೊಂದನ್ನು ಸಲ್ಮಾನ್ ಖಾನ್ ಉಡುಗೊರೆ ನೀಡಿದ್ದಾರಂತೆ. ಯಾವ ಕಾರೆಂದು ಸ್ಪಷ್ಟವಾಗಿಲ್ಲ. ಲೇಟೆಸ್ಟ್ ಅಂದ್ಮೆಲೆ ಅದು ಕ್ಯೂ3 ಆಗಿರಬಹುದು ಎನ್ನುವುದು ನಮ್ಮ ಊಹೆ. ಅದಕ್ಕಿಂತ ಲೇಟೆಸ್ಟ್ ಕಾರು ಸದ್ಯ ನಮ್ಮ ರಸ್ತೆಗೆ ಆಗಮಿಸಿಲ್ಲ ಅಲ್ವೆ?
ಕತ್ರಿನಾ ಕೈಫ್ ತನ್ನ ಹುಟ್ಟುಹಬ್ಬವನ್ನು ಸಲ್ಮಾನ್ ಖಾನ್ ಮತ್ತು ಆತನ ಕುಟುಂಬದ ಜೊತೆ ಮುಂಬೈ ನಿವಾಸದಲ್ಲಿ ಆಚರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಈ ಕಾರ್ಯಕ್ರಮದ ಕುರಿತು ಈ ಇಬ್ಬರೂ ಸೆಲೆಬ್ರೆಟಿಗಳು ತುಟಿಪಿಟಿಕ್ ಎಂದಿರಲಿಲ್ಲ. ಆದರೆ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗೊಲ್ವ? ನ್ಯಾಷನಲ್ ಡೈಲಿ ಹದ್ದಿನ ಕಣ್ಣಿಗೆ ಬರ್ತ್ ಡೇ ಉಡುಗೊರೆ ಬಿದ್ದಿದೆ.
"ಏಕ್ ಥಾ ಟೈಗರ್" ಹುಡುಗಿ ಕತ್ರಿನಾ ಕೈಫ್ ಈ ಕಾರಿನೊಂದಿಗೆ ರಾಜೇಶ್ ಖನ್ನಾ ನಿವಾಸಕ್ಕೆ ಬಂದಾಗ ಈ ಗುಟ್ಟುರಟ್ಟಾಗಿದೆ. ರಾಜೇಶ್ ಖನ್ನಾಗೆ ಶ್ರದ್ಧಾಂಜಲಿ ಸಲ್ಲಿಸಲು ಅವರು ಆಗಮಿಸಿದ್ದರು. ಕನ್ನಡ ಡ್ರೈವ್ ಸ್ಪಾರ್ಕ್ಸ್ ಕಡೆಯಿಂದ ಮುದ್ದು ಹುಡುಗಿ(?) ಕತ್ರಿನಾ ಕೈಫ್ ಗೆ ಹುಟ್ಟುಹಬ್ಬದ ಶುಭಾಶಯ.
ಒಂದು ಕಾಲದ ಪ್ರೇಯಸಿ, ಸದ್ಯದ ಆತ್ಮೀಯ ಸ್ನೇಹಿತೆ ಕತ್ರಿನಾ ಕೈಫ್ ಗೆ ದುಬಾರಿ ಕಾರು ನೀಡಿದ ಸಲ್ಲು ಬಗ್ಗೆ ಮತ್ತೆ ಯಾವುದೇ ಗುಲ್ಲು ಕೇಳಿಬಂದಿಲ್ಲ.
ಓದಿ: ಕರೀನಾ ಐಟಂ ಸಾಂಗ್‌ಗೆ ಸಲ್ಮಾನ್ ಬಂಪರ್ ಉಡುಗೊರೆ


Click it and Unblock the Notifications








